ಬೆಂಗಳೂರು: ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವರು ದಲಿತ ಸಿಎಂ ಆಗಲಿ ಎಂದಿದ್ದು, ಅಲ್ಲಿಗೆ ಸಿಎಂ ಬದಲಾವಣೆ ಖಚಿತವಾಗಿದೆ. ರಾಜಕೀಯಕ್ಕಾಗಿ ಕಾಂಗ್ರೆಸ್ (Congress) ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ. ಆದರೆ ದಲಿತರಿಗೆ ಅನ್ಯಾಯ ಆದಾಗ ಸುಮ್ಮನಿರುತ್ತದೆ. ಇವತ್ತು ದಲಿತ ಸಿಎಂ ಕೊಡೋದು ಅನಿವಾರ್ಯವಾಗಿದೆ. ಅದಕ್ಕಾಗಿ ಪರಮೇಶ್ವರ್ ಎದುರು ಸತೀಶ್ ಜಾರಕಿಹೊಳಿಯವರನ್ನು ಎತ್ತಿ ಕಟ್ಟುತ್ತಿದ್ದಾರೆ. ಇದುವರೆಗೆ ಪರಮೇಶ್ವರ್ ಹೆಸರಿತ್ತು. ಈಗ ಸತೀಶ್ ಜಾರಕಿಹೊಳಿಯವರ (Satish Jarkiholi) ಹೆಸರು ಮುನ್ನೆಲೆಗೆ ತಂದಿದ್ದಾರೆ. ಅವರಿಬ್ಬರು ದಲಿತರೇ, ದಲಿತರ ನಡುವೆ ಕಚ್ಚಾಟ ತಂದು ತಮಾಷೆ ನೋಡುವ ಕೆಲಸ ಮಾಡುತ್ತಿರುವವರು ಯಾರು? ಅದಕ್ಕಾಗಿ ಕಾಂಗ್ರೆಸ್‌ನ್ನು ದಲಿತ ವಿರೋಧಿ ಎಂದು ಕರೆಯಲಾಗುತ್ತದೆ ಎಂದರು.ಇದನ್ನೂ ಓದಿ: ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು
Advertisement
Advertisement
ವಾಲ್ಮೀಕಿ ಹಗರಣಕ್ಕೆ ವಿಚಾರ:
ನಾಗೇಂದ್ರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಡಿಯಿಂದ ಪ್ರಾಸಿಕ್ಯೂಷನ್ ದೂರು ವಿಚಾರವಾಗಿ ಮಾತನಾಡಿ, ಇಡಿ ವರದಿಯಲ್ಲಿ ವಾಲ್ಮೀಕಿ ಹಗರಣಕ್ಕೆ (Valmiki Scam) ನಾಗೇಂದ್ರ ಕಾರಣ ಎಂದು ಇದೆ. ಅವರೇ ಮಾಸ್ಟರ್ ಮೈಂಡ್ ಅಂತಿದೆ. ಇಷ್ಟು ದಿನ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥನೆ ಮಾಡುತ್ತಿದ್ದರು. ಜೊತೆಗೆ ಸಿಎಂ ಖುದ್ದು ಆರ್ಥಿಕ ಸಚಿವರು, ಇವರ ಸೂಚನೆ ಇಲ್ಲದೇ ಏನೂ ಆಗ್ತಿರಲಿಲ್ಲ ಅಂತನೂ ಇದೆ. ಸಿಎಂ ಅಕ್ರಮ ಮುಚ್ಚಿ ಹಾಕಲು ಪ್ರಕರಣ ಎಸ್‌ಐಟಿಗೆ ಕೊಟ್ಟಿದ್ದಾರೆ. ಈಗ ಇಡಿಯ ಈ ವರದಿಯಿಂದ ಎಸ್‌ಐಟಿ ರಚಿಸಿದ್ದು ಕ್ಲೀನ್‌ಚಿಟ್ ಪಡೆಯಲು ಎಂದು ಸಾಬೀತಾಗಿದೆ ಎಂದು ತಿಳಿಸಿದರು.
Advertisement
ಈ ಪ್ರಕರಣದಲ್ಲಿ ಇಡಿ ಯಾಕೆ ಪ್ರವೇಶ ಆಯ್ತು ಎಂದು ಗೊತ್ತಾಗಿದೆ. ಈಗಾಗಲೇ ಸಿದ್ದರಾಮಯ್ಯ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದೆ ಎಂದು ಒಪ್ಪಿದ್ದಾರೆ. ಆದರೆ ಇದರಿಂದ ಕ್ಲೀನ್‌ಚಿಟ್ ಕೊಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ 20 ಕೋಟಿ ರೂ. ಕೊಡಲಾಗಿತ್ತು. ಜೊತೆಗೆ ನಾಗೇಂದ್ರ ತಮ್ಮ ವೈಯಕ್ತಿಕ ಖರ್ಚುಗಳಿಗೂ ನಿಗಮದ ಹಣ ಬಳಸಿದ್ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈಗ ಸಿಎಂ ಏನು ಮಾಡುತ್ತಾರೆ? ಸಿಎಂಗೆ ಕಿಂಚಿತ್ ಆತ್ಮ ಗೌರವ, ಸಂವಿಧಾನದ ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡುತ್ತಿದ್ದರು ಎಂದು ಕಿಡಿಕಾರಿದರು.
Advertisement
ಮುಡಾದಲ್ಲಿ ( MUDA Scam)ಸೈಟ್ ವಾಪಸ್ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಇಡಿಯವರು ಹಣ ರಿಕವರಿ ಮಾಡಿದ್ದಾರೆ. ಅಲ್ಲಿಗೆ ಎರಡೂ ಕಡೆಯೂ ಅಕ್ರಮವಾಗಿದೆ. ಸಿಎಂ ಹೇಳಿಸಿಕೊಳ್ಳದೇ ರಾಜೀನಾಮೆ ಕೊಡಲಿ. ಈಗ ಸಿಎಂ ಬಾಮೈದ ಅವರ ವಿಚಾರಣೆ ನಡಿಯುತ್ತಿದೆ. ನಂತರ ಸಿಎಂ ಪತ್ನಿಯವರನ್ನು ವಿಚಾರಣೆಗೆ ಕರೆಯುತ್ತಾರೆ. ನಂತರ ಸಿಎಂಗೂ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಕರೆಯುತ್ತಾರೆ. ಸಿಎಂ ಆಗಿರುವಾಗ ಹೇಗೆ ವಿಚಾರಣೆಗೆ ಹೋಗುತ್ತಾರೆ. ಹಾಗಾಗಿ ಸಿದ್ದರಾಮಯ್ಯನವರು ಈಗಲೇ ರಾಜೀನಾಮೆ ಕೊಡಬೇಕು ಎಂದು ಹೇಳಿದರು.
ಕೆಆರ್‌ಡಿಎಲ್ ವಿಚಾರ:
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRDL) ಟೆಂಡರ್ ಇಲ್ಲದೇ ಕಾಮಗಾರಿ ಕೊಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಕೆಆರ್‌ಡಿಎಲ್‌ನಲ್ಲಿ 40% ಕಮಿಷನ್ ಪಡೆದಿರುವ ಆರೋಪ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಜಯ್ ಸಿಂಗ್ ಅವರು 40% ಕಮಿಷನ್ ಪಡೆದು 500 ಕೋಟಿ ರೂ. ತೆಲಂಗಾಣಕ್ಕೆ ಕಳಿಸಿದ್ದಾರೆ. ಈ ಕಮಿಷನ್ ಹಣವನ್ನು ತೆಲಂಗಾಣ ಚುನಾವಣೆಗೂ ಬಳಸಲಾಗಿದೆ. ಇದರಿಂದ ಮಣ್ಣ ಚೆಲ್ಲು ಬಿಲ್ ಪಡೆ ಎಂಬ ಪರಿಸ್ಥಿತಿ ಹುಟ್ಟಿಕೊಂಡಿದೆ. ಇದಕ್ಕೆಲ್ಲಾ ಪ್ರಿಯಾಂಕ್ ಖರ್ಗೆಯವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: ಟೆನಿಸ್‌ಗೆ ರಫೆಲ್ ನಡಾಲ್ ವಿದಾಯ