– ಸಿದ್ದರಾಮಯ್ಯನವರೇ ನಿಮ್ಮ 70 ಲಕ್ಷದ ವಾಚ್ ಏನಾಯ್ತು ಎಂದ ಸಚಿವ
ನವದೆಹಲಿ: ಕಾಂಗ್ರೆಸ್ (Congress) ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಯಭೀತರಾಗಿದ್ದಾರೆ. ಕಾನೂನಿನ ಭಯದಿಂದ ಸಿಬಿಐ (CBI) ತನಿಖೆಗೆ ನೀಡಿದ ಮುಕ್ತ ಸಮ್ಮತಿಯನ್ನು ವಾಪಸ್ ಪಡೆಯುವ ಮೂಲಕ ಕ್ಷುಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಆರೋಪಿಸಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಿಮ್ಮ ಪಕ್ಷದಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದವರಿಗೆ ಸನ್ಮಾನ ಮಾಡುತ್ತೇನೆ ಎಂದಿದ್ದಾರೆ. ಅವರೇ ದೊಡ್ಡ ಭ್ರಷ್ಟಾಚಾರಿ, ಅವರು ಏನು ಸನ್ಮಾನ ಮಾಡುತ್ತಾರೆ? ಸಿದ್ದರಾಮಯ್ಯ ಅವರೇ ನಿಮ್ಮ 70 ಲಕ್ಷ ರೂ. ವಾಚ್ ಏನಾಯಿತು? ನಿಮ್ಮ ವಾಲ್ಮೀಕಿ ಹಗರಣ ಏನಾಯಿತು? ನೀವೇ ಮಾಡಿದ ರಿಡೂ ವಿಷಯದಲ್ಲಿ ಕೆಂಪಣ್ಣ ವರದಿ ಏನಾಯಿತು ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಯಶ್ `ಟಾಕ್ಸಿಕ್’ಗೆ ಹೊಸ ವಿಲನ್ ಸೇರ್ಪಡೆ
ಈಗ ಸಿಬಿಐ ತನಿಖೆ ಮಾಡಲು ಬಾರದಂತೆ ಸಿಬಿಐ ತನಿಖೆಗೆ ನೀಡಿದ ಮುಕ್ತ ಸಮ್ಮತಿಯನ್ನು ವಾಪಸ್ ಪಡೆದಿದ್ದಾರೆ. ಲೋಕಾಯುಕ್ತ ತನಿಖೆ ಮಾಡಬೇಕು ಎಂದರೆ ಮಾಡಲಿ. ಆದರೆ ಅದಕ್ಕೂ ಮುನ್ನ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲಿ, ಇತ್ತಿಚೇಗೆ ಎಡಿಜಿಯನ್ನು ತಮಗೆ ಬೇಕಾದವರನ್ನು ನೇಮಕ ಮಾಡಿದ್ದಾರೆ. ಭ್ರಷ್ಟಾಚಾರದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ ಎಂದರು.
ಕ್ಯಾಬಿನೆಟ್ ಮೂಲಕ ರಾಜ್ಯಪಾಲರಿಗೆ ಉತ್ತರ ಕೊಡುವ ವಿಚಾರದ ಬಗ್ಗೆ ರಾಹುಲ್ ಗಾಂಧಿ (Rahul Gandhi) ಉತ್ತರ ಕೊಡಬೇಕು. ಸಂವಿಧಾನದ ಕುತ್ತಿಗೆ ಹಿಸುಕಿದವರು ಇಂದು ಕೈಯಲ್ಲಿ ಹಿಡಿದು ಓಡಾಡ್ತಿದ್ದಾರೆ. ರಾಜ್ಯಪಾಲರು ಸಂವಿಧಾನದ ಒಬ್ಬ ಮುಖ್ಯಸ್ಥರು ಅವರಿಗೆ ಮಾಹಿತಿ ಕೊಡಲ್ಲ ಅಂದರೆ ಅದು ಸಂವಿಧಾನದ ವಿರೋಧಿ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯಪಾಲರಿಗೆ ಮಾಹಿತಿ ಹೋದರೆ ಹುಳುಕು ಹೊರ ಬರುತ್ತದೆ ಎಂದು ಭಯ ರಾಹುಲ್, ಸೋನಿಯಾ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ. ಅವರೇ ಭ್ರಷ್ಟಾಚಾರದ ಪಿತಾಮಹಾರು ಎಂದು ಕಿಡಿಕಾರಿದರು.ಇದನ್ನೂ ಓದಿ: 5,800 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ `KWIN City’ – ಏನಿದು ವಿಶಿಷ್ಟ ಯೋಜನೆ?