– ಜುಲೈ 19 ರಂದು ಮೈಸೂರಲ್ಲಿ ಕಾರ್ಯಕ್ರಮ
– 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ
ಮೈಸೂರು: 5 ವರ್ಷ ಅಧಿಕಾರ ಗಟ್ಟಿಯಾಗುತ್ತಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮೈಸೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಹೌದು. ತವರು ಜಿಲ್ಲೆಯಲ್ಲಿ ಸಾಧನ ಸಮಾವೇಶ ಹೆಸರಿನಲ್ಲಿ ಜುಲೈ 19 ಶನಿವಾರ ರಂದು ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಮೂರು ದಿನ ಮೈಸೂರು (Mysuru) ಪ್ರವಾಸ ಕೈಗೊಳ್ಳಲಿರುವ ಸಿಎಂ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಆಯೋಜನೆಗೊಂಡಿದೆ.
ಸರ್ಕಾರದ ಸುಮಾರು 2,600 ಕೋಟಿ ಮೊತ್ತದ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಲೋಕಾರ್ಪಣೆ ನಡೆಯಲಿದೆ. ಬೃಹತ್ ಸಮಾವೇಶದ ಮೂಲಕ ಪಕ್ಷದ ಹೈ ಕಮಾಂಡ್ ಪರೋಕ್ಷ ಸಂದೇಶ ರವಾನಿಸಲಿದ್ದಾರೆ.
ಸಾಧನ ಸಮಾವೇಶ ಮೂಲಕ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ತೋರಿಸಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದು, ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಆಪ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ (HC Mahadevappa) ನೋಡಿಕೊಳ್ಳಲಿದ್ದಾರೆ.
ಈಗಾಗಲೇ ಮೈಸೂರು ಚಾಮರಾಜನಗರ ಜಿಲ್ಲೆಯ ಶಾಸಕರ ಸಭೆ ನಡೆಸಿ ಹೆಚ್ಚಿನ ಜನರನ್ನ ಕರೆತಲು ಪ್ಲಾನ್ ಮಾಡಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ತನ್ನ ಶಕ್ತಿ ಪ್ರದರ್ಶನ ಮಾಡಲು ಸಿದ್ದತೆ ಜೋರಾಗಿದೆ.