ಬೆಂಗಳೂರು: ಅಧಿಕಾರ ಕಳೆದುಕೊಂಡ ಕೈ ಪಾಳಯದಲ್ಲಿ ವಿಪಕ್ಷ ನಾಯಕ ಯಾರಾಗುತ್ತಾರೆ ಅನ್ನೋ ಚರ್ಚೆ ಇದೀಗ ಜೋರಾಗಿದೆ.
ಸೋಮವಾರ ಬಿಜೆಪಿ ಬಹುಮತ ಸಾಬೀತು ಹಾಗೂ ಸದನ ಕೂಡ ನಡೆಯಲಿರುವುದರಿಂದ ವಿಪಕ್ಷ ನಾಯಕನ ಆಯ್ಕೆ ನಡೆಯಲೇಬೇಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ ಹಾಗೂ ಹೆಚ್. ಕೆ ಪಾಟೀಲ್ ಹೆಸರು ಕೇಳಿ ಬರುತ್ತಿದೆ.
Advertisement
ವಿರೋಧ ಪಕ್ಷದಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಪಡೆಯಲಿದ್ದು, ಕೈ ನಾಯಕರ ಪೈಕಿ ಯಾರಿಗೆ ವಿಪಕ್ಷ ಸ್ಥಾನ ಒಲಿಯಲಿದೆ ಎನ್ನುವ ಕುತೂಹಲ ಹಾಗೆಯೇ ಇದೆ. ಈ ಚರ್ಚೆಗೆ ಇಂದು ಬ್ರೇಕ್ ಬೀಳಲಿದ್ದು, ವಿಪಕ್ಷ ನಾಯಕ ಯಾರಾಗುತ್ತಾರೆ ಅನ್ನೋದು ಗೊತ್ತಾಗಲಿದೆ.
Advertisement
Advertisement
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನದ ರೇಸ್‍ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಆದರೆ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯರ ಪಾತ್ರವಿದೆ ಎಂಬ ಆರೋಪ ಹೈಕಮಾಂಡ್ ಮಟ್ಟದಲ್ಲಿದ್ದರಿಂದ ಅವರ ಬಲ ಕುಗ್ಗಿಸಿದೆ ಎನ್ನಲಾಗುತ್ತಿದೆ.
Advertisement
ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯರನ್ನು ನಂಬದೇ ಬೇರೆಯವರಿಗೆ ಮಣೆ ಹಾಕಿದರೆ ಹೆಚ್.ಕೆ.ಪಾಟೀಲ್ ಅಥವಾ ಆರ್.ವಿ.ದೇಶಪಾಂಡೆ ವಿರೋಧ ಪಕ್ಷದ ನಾಯಕರ ರೇಸ್‍ಗೆ ಬರಲಿದ್ದಾರೆ. ಈ ಮೂವರಲ್ಲಿ ವಿಪಕ್ಷ ನಾಯಕನ ಸ್ಥಾನ ಯಾರ ಪಾರಾಗಲಿದೆಯೋ ಗೊತ್ತಿಲ್ಲ.
ಸೋಮವಾರವೇ ಅಧಿವೇಶನ ಹಾಗೂ ಬಹುಮತ ಸಾಬೀತು ಪ್ರಕ್ರಿಯೆ ನಡೆಯಬೇಕಿರುವುದರಿಂದ ಇಂದೇ ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿಯಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ಒಲವು ಯಾರ ಕಡೆಗಿದೆ ಎಂಬುದು ಸದ್ಯದ ಕುತೂಹಲವಾಗಿದೆ.