ಬೆಂಗಳೂರು: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್ (Congress) ಕೇಸರಿ (Saffron) ವಿರೋಧ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ಹರಿಹಾಯ್ದಿದ್ದಾರೆ.
ಸೂರ್ಯ ಕೂಡಾ ಕೇಸರಿ ಬಣ್ಣ ಇದ್ದಾನೆ. ಹಾಗಾಂತ ಕೇಸರಿ ಬಣ್ಣ ವಿರೋಧ ಮಾಡ್ತಾರಾ? ಸಿದ್ದರಾಮಯ್ಯ ಕಾಲದಲ್ಲಿ ಮಾಡದ ಸಾಧನೆಯನ್ನು ನಾವು ಮಾಡಿದ್ದೇವೆ. ಜನರ ಮುಂದೆ ಮುಖ ತೋರಿಸಲು ಆಗದೇ ವಿರೋಧ ಮಾಡ್ತಿದ್ದಾರೆ. ನಾವು ಯಾವ ಬಣ್ಣ ಹೊಡೆಯಬೇಕು ಅಂತ ತೀರ್ಮಾನ ಮಾಡಿಲ್ಲ. ಆರ್ಟಿಕಲ್ಚರ್‌ನವರು ಯಾವ ಬಣ್ಣ ಹೇಳ್ತಾರೋ ಅದನ್ನ ಹೊಡೆಯುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL ಸಲ್ಲಿಕೆ
Advertisement
Advertisement
ಕಾಂಗ್ರೆಸ್ ವಿರೋಧ ಮಾಡುತ್ತೆ ಅಂತ ನಾವು ಕೇಸರಿ ಬಣ್ಣ ಹೊಡೆಯದೆ ಇರುವುದಿಲ್ಲ. ಕಾಂಗ್ರೆಸ್ ಧ್ಯಾನ ವಿರೋಧ ಮಾಡುತ್ತೆ ಅಂತ ಧ್ಯಾನ ನಿಲ್ಲಿಸೋಕೆ ಆಗಲ್ಲ. ಕಾಂಗ್ರೆಸ್ ರಾಜಕೀಯ ಮಾಡಿ ವಿರೋಧ ಮಾಡ್ತಿದೆ. ಇದಕ್ಕೆ ನಾವು ಹೆದರಲ್ಲ ಎಂದು ಹೇಳಿದ್ದಾರೆ.
Advertisement
ವಿವೇಕ ಯೋಜನೆಯ ಕೊಠಡಿಗಳಲ್ಲಿ ವಿವೇಕಾನಂದ ಭಾವಚಿತ್ರ ಮುದ್ರಿಸುತ್ತೇವೆ. ಪ್ರತಿ ಕೊಠಡಿಯ ಹೊರಗೆ ವಿವೇಕಾನಂದರ ಭಾವಚಿತ್ರ ಮುದ್ರಣ ಮಾಡ್ತೀವಿ. ಈ ನಿಟ್ಟಿನಲ್ಲಿ ಚರ್ಚೆ ಆಗುತ್ತೆ. ವಿವೇಕಾನಂದರು ಜ್ಞಾನದ ಸಂಕೇತ. ಅವರ ಜೀವನದ ಮಾರ್ಗವನ್ನು ಮಕ್ಕಳು ಕಲಿಬೇಕು. ಹೀಗಾಗಿ ಅವರ ಫೋಟೋ ಮುದ್ರಣ ಮಾಡುವುದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ASI ಮನೆಯಲ್ಲಿ ದರೋಡೆ- ಮೂವರು ಆರೋಪಿಗಳ ಅರೆಸ್ಟ್
Advertisement
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಾಡದ ಅಭಿವೃದ್ಧಿ ಕೆಲಸ ನಾವು 3 ವರ್ಷಗಳಲ್ಲಿ ಮಾಡಿದ್ದೇವೆ. ನಾವು ಹೆಚ್ಚು ಕೊಠಡಿ ಕಟ್ಡಿದ್ದೇವೆ, ಶಿಕ್ಷಕರ ನೇಮಕಾತಿ ಮಾಡಿದ್ದೇವೆ. ಕೊರೊನಾ ಸಮಯದಲ್ಲಿ ಉತ್ತಮ ಶಿಕ್ಷಣ ನೀಡಿದ್ದೇವೆ. ಕೇಸರಿ ಜ್ಞಾನ, ತ್ಯಾಗದ ಸಂಕೇತ. ಇದಕ್ಕೆ ಯಾಕೆ ವಿರೋಧ ಮಾಡ್ತಾರೆ? ಕಾಂಗ್ರೆಸ್ 1947 ರಿಂದಲೂ ದೇಶದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿಲ್ಲ. ಚುನಾವಣೆಗೆ ಮಾತ್ರ ಅವರು ಯೋಚನೆ ಮಾಡಿದವರು. BPL ಕಾರ್ಡ್ ಮೇಲೆ ಇಂದಿರಾ ಗಾಂಧಿ ಫೋಟೋ ಹಾಕಿದವರು ಕಾಂಗ್ರೆಸ್‌ನವರು. ಕೇಸರಿ ಬಣ್ಣ ಯಾಕೆ ಹೊಡೆಯಬಾರದು ಅಂತ ಜನಕ್ಕೆ ಹೇಳಲಿ. ಕಾಂಗ್ರೆಸ್‌ಗೆ ಕೇಸರಿ ಬಣ್ಣ ಆಗಲ್ಲ ಅಂತ ಅಂದ್ರೆ ನಾವು ಅದನ್ನ ಕೇಳೋಕೆ ಸಿದ್ಧ ಇಲ್ಲ. ಮುಸ್ಲಿಮರ ಓಲೈಕೆಗಾಗಿ, ಅವರ ಮತ ಪಡೆಯೋಕೆ ಅಭಿವೃದ್ಧಿ ಕೆಲಸವನ್ನ ವಿರೋಧ ಮಾಡ್ತಿದೆ ಕಾಂಗ್ರೆಸ್ ಎಂದು ಕುಟುಕಿದ್ದಾರೆ.