ನವದೆಹಲಿ: ಮೋದಿ ಸರ್ಕಾರ ಬಂದು ಇಂದಿಗೆ 4 ವರ್ಷ ಆಡಳಿತವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಸಮಯದಲ್ಲಿ ದೇಶದ ಜನತೆಗೆ ನೀಡಿದ ಆಶ್ವಾಸನೆಗಳನ್ನು ಇಲ್ಲಿಯವರೆಗೂ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಅಂತಾ ಆರೋಪಿಸಿ ಕಾಂಗ್ರೆಸ್ ಇಂದು ‘ನಂಬಿಕೆದ್ರೋಹ ದಿನ’ವನ್ನಾಗಿ ಆಚರಿಸಿದೆ.
ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಗುಲಾಮ್ ನಬಿ ಅಜಾದ್, ಅಶೋಕ್ ಗೆಹ್ಲೋಟ್ ಮತ್ತು ರಾಜ್ದೀಪ್ ಸುಜ್ರ್ವಾಲ್ ನೇತೃತ್ವದಲ್ಲಿ ರಾಜಧಾನಿ ದೆಹಲಿ ಸೇರಿದಂತೆ ದೇಶದ್ಯಾಂತ ಪ್ರತಿಭಟನೆ ನಡೆಸಿದೆ. ದೇಶದ 20 ಪ್ರಮುಖ ನಗರಗಳಲ್ಲಿ ಮೋದಿ ಸರ್ಕಾರದ ಆಡಳಿತದ ಬಗ್ಗೆ ಸುದ್ದಿಗೋಷ್ಟಿ ನಡೆಸಿದೆ. ಅಲ್ಲದೆ ಕಾಂಗ್ರೆಸ್‍ನ ಉನ್ನತ ಮೂಲಗಳಿಂದ ದೇಶದ ಎಲ್ಲಾ ರಾಜ್ಯಗಳ ನಾಯಕರಿಗೆ ಜಿಲ್ಲಾ ಮಟ್ಟಗಳಲ್ಲಿ ಪ್ರತಿಭಟನೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.
Advertisement
Advertisement
2014ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಿದ್ದು, ನರೇಂದ್ರ ಮೋದಿಯವರು ಚುನಾವಣಾ ಸಂದರ್ಭದಲ್ಲಿ ಜನರಿಗೆ ಭರಪೂರ ಆಶ್ವಾಸನೆಗಳನ್ನು ನೀಡಿ ವಿಶ್ವಾಸಗಳಿಸಿತ್ತು. 10 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಒಕ್ಕೂಟವು ಅಭಿವೃದ್ಧಿ ಕಾರ್ಯಗಳು ಜಾರಿತರುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಚುನಾವಣೆಯಲ್ಲಿ ಆರೋಪಿಸಿತ್ತು.
Advertisement
ಮೋದಿ ಸರ್ಕಾರವು ತಾವು ನೀಡಿದ ಆಶ್ವಾಸನೆಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಆರೋಪಿಸಿವೆ.
Advertisement
AICC Press briefing on the the 4 years of the Modi Govt. by RS LoP @ghulamnazad, AICC media Incharge @rssurjewala, @MahilaCongress President @sushmitadevmp & @IYC President @keshavyadaviyc #VishwasghatDiwas
https://t.co/f5eRoo7FZB
— Congress (@INCIndia) May 26, 2018
PM Modi promised to drastically improve the economy. The state of the economy shows that he has no clue how to go about it. #VishwasghatDiwas pic.twitter.com/BewG0y99uM
— Congress (@INCIndia) May 26, 2018