ಹುಬ್ಬಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 75 ವಷದಲ್ಲಿ 60 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ತನ್ನ ಆಡಳಿತ ಅವಧಿಯಲ್ಲಿ ತಳ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿ, ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದೆ. ಅಂಬೇಡ್ಕರ್ ಅವರಿಗೆ ಸಹ ಅವಮಾನ ಮಾಡಿದೆ. ಇದಕ್ಕಾಗಿ ಕಾಂಗ್ರೆಸ್‍ಗೆ (Congress) ಮೀಸಲಾತಿ (Reservation) ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬಸವರಾಜ ಬೊಮ್ಮಾಯಿ (Basavaraj Bommai) ಸಫಾಯಿ ಕರ್ಮಚಾರಿಗಳನ್ನು ಸರ್ಕಾರಿ ನೌಕರರನ್ನಾಗಿ ಮಾಡಿದ್ದಾರೆ. ಮೀಸಲಾತಿ ವಿಚಾರ ಕೇವಲ ಚುನಾವಣೆಗಾಗಿ ಅಲ್ಲ, ಕೇಂದ್ರಕ್ಕೆ ಕಳಿಸಲಾಗಿದೆ. ನಮ್ಮ ಸರ್ಕಾರದ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ರಾಜ್ಯ ಸರ್ಕಾರದ ಪ್ರಕ್ರಿಯೆಗಳನ್ನು ಕಾನೂನು ಬದ್ಧವಾಗಿ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಈ ಬಾರಿಯೂ ಜೆಡಿಎಸ್ ವಿರುದ್ಧ ಕುತಂತ್ರದ ರಾಜಕೀಯ ನಡೆಯುತ್ತಿದೆ: ಹೆಚ್‍ಡಿಕೆ
Advertisement
Advertisement
ಮೋದಿಯವರ (Narendra Modi) ಅಭಿವೃದ್ಧಿ ಕಾರ್ಯಗಳಿಂದ ದೇಶದ ಕೀರ್ತಿ ಹೆಚ್ಚಿದೆ. ವಿದೇಶಗಳು ಭಾರತದ ಪ್ರಧಾನಿ ಮೋದಿ ನಮ್ಮ ದೇಶಕ್ಕೆ ಬರಬೇಕು ಎಂದು ರತ್ನಗಂಬಳಿ ಹಾಸಿ ಕರೆಯುತ್ತಿದ್ದಾರೆ. ಒಳಪಂಗಡಗಳಲ್ಲಿ ಅಸ್ಪೃಶ್ಯರನ್ನು ಬಿಟ್ಟು ಉಳಿದವರನ್ನು ತೆಗದು ಹಾಕುವ ನೀಚ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಒಳಪಂಗಡಗಳ ಮೀಸಲಾತಿ ತಗೆಯಬೇಕು ಎಂಬ ಫೈಲ್ ಕಾಂಗ್ರೆಸ್ ಸರ್ಕಾರದಲ್ಲಿತ್ತು. ಒಳಪಂಗಡಗಳ ಮೀಸಲಾತಿ ತೆಗೆಯಬೇಕೆಂದು ಆಗ್ರಹಿಸುವವರು ಕಾಂಗ್ರೆಸ್ ಏಜೆಂಟರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಸಿ ಪಾಟೀಲ್ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಿ: ವಿಜಯಾನಂದ ಕಾಶಪ್ಪನವರ್