ಚೆನ್ನೈ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲ ಎಂದು ಕಾಂಗ್ರೆಸ್ ಸಂಸದೆ ಹೇಳಿ ಕೊಟ್ಟಿದ್ದರು. ಈ ಹಿನ್ನೆಲೆ ಸೋಶಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕರು ಸಂಸದೆ ಹೇಳಿಕೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ.
ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಅವರು ತಮ್ಮ ರಾಜ್ಯದಲ್ಲಿ ರಾಮನ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಕುರಿತು ಅವರು, ನಾನು ತಮಿಳುನಾಡಿನವಳು. ನನಗೆ ರಾಮನ ಪರಿಚಯವಿಲ್ಲ. ನೀವು ತಮಿಳುನಾಡಿನಲ್ಲಿ ಯಾರನ್ನಾದರೂ ಕೇಳಿ. ನಾವು ಯಾವುದೇ ರಾಮಮಂದಿರವನ್ನು ನೋಡಿಲ್ಲ ಎಂದು ಮಾಧ್ಯಮಗಳ ಮುಂದೆ ನೇರವಾಗಿ ಕೇಳಿಕೆ ಕೊಟ್ಟಿದ್ದಾರೆ.
Advertisement
Advertisement
ಈ ವೀಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಂಸದರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್
Advertisement
ಕೆ.ಎಂ.ನಂದಗೋಪಾಲ್ ಸೋಶಿಯಲ್ ಮೀಡಿಯಾದಲ್ಲಿ ಟಿಎನ್‍ನಲ್ಲಿ ರಾಮನಿಗೆ ಅರ್ಪಿತವಾದ ದೇವಾಲಯಗಳನ್ನು ಜ್ಯೋತಿಮಣಿ ಅವರಿಗೆ ನೆನಪಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು, ತಿರುಚ್ಚಿ ಬಳಿಯ ಶ್ರೀ ರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ, ತಿರುವಣ್ಣಾಮಲೈ ಬಳಿಯ ಆದಿ ಶ್ರೀ ರಂಗಂ ದೇವಾಲಯ, ಪಲ್ಲಿಕೊಂಡದ ಶ್ರೀ ರಂಗನಾಥರ್ ದೇವಾಲಯ, ಮಧುರಾಂತಗಂನಲ್ಲಿ ಏರಿ ಕಥಾ ರಾಮರ್ ದೇವಾಲಯ, ರಾಮೇಶ್ವರಂನಲ್ಲಿ ರಾಮನಾಥ ಸ್ವಾಮಿ ದೇವಾಲಯ ಮತ್ತು ಹಳ್ಳಿಗಳಲ್ಲಿ 1000 ರಾಮ ದೇವಾಲಯಗಳಿವೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
I’m from Tamil Nadu, I don’t know Ram
You ask anybody in Tamil Nadu
We don’t see any Ram Temple
TN Congress MP, Jothimani pic.twitter.com/cmCTevhCwP
— Tinku Venkatesh | ಟಿಂಕು ವೆಂಕಟೇಶ್ (@tweets_tinku) April 19, 2022
ವೀಡಿಯೋ ನೋಡಿದ ಇನ್ನೊಬ್ಬ ನೆಟ್ಟಿಗ, ಜ್ಯೋತಿಮಣಿ ಅವರು ಬೇರೆ ಉದ್ದೇಶ ಇಟ್ಟುಕೊಂಡು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಅವರು ಡಿಎಂಕೆಯ ಒಂದು ಒಳ್ಳೆಯ ಪುಸ್ತಕದಲ್ಲಿ ಇರಲು ಈ ರೀತಿ ಮಾತನಾಡುತ್ತಿದ್ದಾರೆ. ತಮ್ಮ ಕ್ಷೇತ್ರ ಕರೂರ್‍ನಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತದೆ. ಅದಕ್ಕೆ ಅವರು ತಮ್ಮ ಕ್ಷೇತ್ರದಲ್ಲಿ ಮುಂದುವರೆಯಲು ಡಿಎಂಕೆ ಅಗತ್ಯವಿದೆ. ಡಿಎಂಕೆ ಕಾರೈಕುಡಿ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಅದು ಸತ್ಯವಾದರೆ ಕಾಂಗ್ರೆಸ್ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ