– ಬರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ, ಆದ್ರೂ ನನ್ನ ಹೆಸರು ತಗೊಂಡಿದ್ದಾರೆ
– ಜನಾರ್ದನ ರೆಡ್ಡಿ ಕೋರ್ಟಲ್ಲಿ ಉತ್ತರಿಸಲಿ ಎಂದ ಸಂಸದ ಸೆಂಥಿಲ್
ಬೆಂಗಳೂರು/ನವದೆಹಲಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ವಿರುದ್ಧ ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Criminal Defamation Case) ಹೂಡಿದ್ದಾರೆ.
ಧರ್ಮಸ್ಥಳ ʻಬುರುಡೆʼಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿ ಆರೋಪ ಮಾಡಿದ್ದಕ್ಕಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಸೆಂಥಿಲ್ (Sasikanth Senthil) ಹೇಳಿದ್ದಾರೆ. 42 ಎಸಿಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪಿಸಿಆರ್ ಫೈಲ್ ಮಾಡಿದ್ದು, ಸೆಪ್ಟೆಂಬರ್ 11ಕ್ಕೆ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್ ರಿಯಾಕ್ಷನ್
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೆಂಥಿಲ್, ಬುರುಡೆ ಕೇಸ್‌ನಲ್ಲಿ (Dharmasthala Case) ನನ್ನ ಹೆಸರು ತಗೊಂಡಿದ್ದಾರೆ. ಆದ್ದರಿಂದ ಮೊಕದ್ದಮೆ ಹೂಡಿದ್ದೇನೆ. ಅವರು ಕೋರ್ಟ್‌ನಲ್ಲಿ ಉತ್ತರಿಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬುರುಡೆ ಕೇಸ್ ಹಿಂದೆ ಕೈ ಸಂಸದ ಶಶಿಕಾಂತ್ ಸೆಂಥಿಲ್ ಇದ್ದಾರೆ: ಯಶ್‌ಪಾಲ್ ಸುವರ್ಣ
ಈ ಹ್ಯಾಂಗಲ್‌ನಲ್ಲಿ ಯಾರು ಸ್ಟೋರಿ ತಗೊಂಡು ಬಿಲ್ಡ್ ಮಾಡ್ತಿದ್ದಾರೆ ಅವರನ್ನು ಕೂಡ ತಗೊಳ್ತಿನಿ. ಈ ಕೇಸಲ್ಲಿ ನನ್ನ ಹೆಸರು ಯಾಕೆ ಬಂತು, ಗೊತ್ತಿಲ್ಲ. ನನ್ನ ಹೆಸರನ್ನ ತಮಿಳುನಾಡಿನ ಮಾಜಿ ಪೊಲೀಸ್ ಅಧಿಕಾರಿ ಅಲ್ಲಿ ತಗೊಂಡಿದ್ದಾರೆ. ಇದು ಹೀಗೆ ಬಿಟ್ಟರೆ, ಒಂದು ಸ್ಟೋರಿ ಕ್ರಿಯೇಟ್ ಆಗುತ್ತೆ. ನಾನು ಲೀಗಲ್ ಸಿಸ್ಟಮ್‌ನಲ್ಲಿ ಹೋಗ್ತೀದ್ದೀನಿ. ಸತ್ಯ ಏನಿದೆ ತನಿಖೆಯಿಂದ ಹೊರ ಬರಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್ ಸೆಂಥಿಲ್: ಜನಾರ್ದನ ರೆಡ್ಡಿ
ಮುಂದುವರಿದು… ಧಾರ್ಮಿಕ ವಿಚಾರ ಪೊಲಿಟಿಕಲಿ ತಗೊಳ್ತಿದ್ದಾರೆ. ಯಾರೋ ಒಬ್ಬರು ಸೆಂಥಿಲ್ ಕ್ರಿಶ್ಚಿಯನ್ ಅಂತಾ ಹೇಳಿದ್ದಾರೆ. ನಾನು ಇವರನ್ನು ಲಾಸ್ಟ್ ನೋಡಿದ್ದು, ಬಳ್ಳಾರಿಯಲ್ಲಿ. ನನ್ನ ಮೊದಲ ದಿನವೇ ಇವರು ಅರೆಸ್ಟ್ ಆಗಿದ್ದರು. ಅನಂತರ ಇವರ ರಾಯಾಲ್ಟಿಯನ್ನ ತಡೆದಿದ್ದೆ. ಕರ್ನಾಟಕ ಪ್ರಾಪರ್ಟಿ ಲೂಟಿ ಮಾಡಿದ ವ್ಯಕ್ತಿ. ಜಡ್ಜ್‌ಗಳನ್ನೂ ಬಿಟ್ಟಿಲ್ಲ. ಅವರಿಗೆ ಬೇರೆ ಯಾರೋ ಹೇಳಿರಬಹುದು. ತಮಿಳುನಾಡಿನ ಪಾಲಿಟಿಕ್ಸ್‌ಗೆ ಇವರನ್ನ ಸೇರಿಸಲೂ ಇರಬಹುದು. ಆದ್ರೆ ಕರ್ನಾಟಕ ಜನ ಬುದ್ದಿವಂತರು ಇದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ ಎಂದಿದ್ದಾರೆ ಸೆಂಥಿಲ್. ಇದನ್ನೂ ಓದಿ: ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್ ಮಟ್ಟಣ್ಣನವರ್: ಎಸ್‌ಐಟಿ ಮುಂದೆ ಜಯಂತ್ ಹೇಳಿಕೆ
ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ:
ಕರ್ನಾಟಕದ ಸಂಪತ್ತು ಲೂಟಿ ಮಾಡಿ ಜೈಲು ಶಿಕ್ಷೆ ಅನುಭವಿಸಿರೊ ವ್ಯಕ್ತಿ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ರೈಟ್ ವಿಂಗ್ ಪಾಲಿಟಿಕ್ಸ್ ವಿರೋಧ ಮಾಡಿಕೊಂಡು ಬಂದವನು ಆ ವ್ಯಕ್ತಿ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಆರೋಪ ಮಾಡಲಾಗಿದೆ. ಆರಂಭದಲ್ಲಿ ಸಿಂಪಲ್ ವಿಚಾರ ಮಾತನಾಡಬಾರದು ಅಂದುಕೊಂಡಿದ್ದೆ, ಆದ್ರೆ ದಿನೇ ದಿನೇ ನನ್ನ ಹೆಸರು ಕೆಡಿಸುವ ಕೆಲಸ ಆಗ್ತಿದೆ. ಆದ್ದರಿಂದ ಕೇಸ್ ದಾಖಲಿಸಿದ್ದೇನೆ. ದೆಹಲಿಯಲ್ಲಿ ನನಗೆ ಇನ್ನೂ ಮನೆ ಕೊಟ್ಟಿಲ್ಲ ಈ ಸರ್ಕಾರ. ಆ ಬರುಡೆ ಎಲ್ಲಿಂದ ಬಂತು, ಎಲ್ಲಿ ಸಿಗ್ತು ಅಂತಾನೂ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಜನಾರ್ಧನ ರೆಡ್ಡಿ ಆರೋಪ ಏನು?
ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟು ಕಳುಹಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪಿಸಿದ್ದರು. ಇದನ್ನೂ ಓದಿ: ಹೆಗ್ಗಡೆ ವಿರುದ್ಧ ಅಪಪ್ರಚಾರಕ್ಕೆ ಕೊಡಗಿನಲ್ಲೂ ನಡೆದಿತ್ತು ಹುನ್ನಾರ – ರೆಡಿಮೇಡ್ ದೂರಿನ ಪ್ರತಿ ನೀಡಿದ್ದ ಬುರುಡೆ ಗ್ಯಾಂಗ್