ಲಕ್ನೋ: ಮಮತಾ ಬ್ಯಾನರ್ಜಿ ಅವರು ದೇಶದ ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಬಣ್ಣಿಸಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯೇತರ ಪ್ರತಿಪಕ್ಷ ಇಂದಿನ ಅಗತ್ಯವಾಗಿದೆ. ಈ ಪ್ರತಿಪಕ್ಷಕ್ಕೆ ಮಮತಾ ಬ್ಯಾನರ್ಜಿ ಅವರೇ ಆಧಾರ ಸ್ತಂಭ. 2024ರ ಲೋಕಸಭಾ ಚುನಾವಣೆಯಲ್ಲಿ ಮತ ವಿಭಜನೆಯಾಗುವುದನ್ನು ತಡೆಗಟ್ಟಲು ಪ್ರತಿ ರಾಜ್ಯಗಳಲ್ಲೂ ಪ್ರತಿಪಕ್ಷಗಳು ಒಂದಾಗಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಮೋದಿ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಮಾಲೀಕ ಬೆದರಿಕೆ
Advertisement
Non #BJP opposition is the need of the hour. #Mamta is a pillar of that. Each element has 2unite synergically 2prevent vote division, state by state, for 2024.BJP’s best wins never exceed 39%of popular vote. Mamta &all others have to strain every sinew to unite the non BJP space.
— Abhishek Singhvi (@DrAMSinghvi) March 30, 2022
Advertisement
ಬಿಜೆಪಿಯ ಅತ್ಯುತ್ತಮ ಗೆಲುವು ಶೇ.39 ಮತಗಳನ್ನು ಮೀರುವುದಿಲ್ಲ. ಬಿಜೆಪಿಯೇತರ ಜಾಗವನ್ನು ಒಗ್ಗೂಡಿಸಲು ಮಮತಾ ಮತ್ತು ಉಳಿದವರೆಲ್ಲರೂ ಮುಂದಾಗಬೇಕು ಎಂದು ಟ್ವೀಟ್ ಮಾಡಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಬಿರ್‌ಭೂಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ಗಧಾಪ್ರಹಾರ ನಡೆಸುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯನ್ನು ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗಬೇಕು ಎಂದು ಎಲ್ಲಾ ಪ್ರತಿಪಕ್ಷಗಳಿಗೆ ಮಮತಾ ಬ್ಯಾನರ್ಜಿ ಅವರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ