ರಾಮನರಗ: ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಸಿಎಂ ಆಗುವ ಎಲ್ಲಾ ಅವಕಾಶ ಇದೆ. ಸಿ.ಪಿ ಯೋಗೇಶ್ವರ್ ಅವರನ್ನ ಗೆಲ್ಲಿಸಿದ್ರೆ ಡಿ.ಕೆ ಶಿವಕುಮಾರ್‌ಗೆ ಶಕ್ತಿ ಬರುತ್ತೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ (MLC Puttanna) ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ (Channapatna By Election) ಹಿನ್ನೆಲೆಯಲ್ಲಿ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ
ಸಿದ್ದರಾಮಯ್ಯ (Siddaramaiah) ಬಳಿಕ ಸಿಎಂ ಆಗುವ ಎಲ್ಲಾ ಅವಕಾಶ ಡಿಕೆಶಿಗೆ ಇದೆ. ಯೋಗೇಶ್ವರ್ ಗೆಲ್ಲಿಸಿದ್ರೆ ಶಿವಕುಮಾರ್‌ಗೆ ಶಕ್ತಿ ಬರುತ್ತೆ. ಡಿ.ಕೆ ಸುರೇಶ್ ಸೋಲಿಸಲು ಕುಮಾರಸ್ವಾಮಿ ಬಾವನನ್ನ ತಂದು ನಿಲ್ಲಿಸಿದ್ರು. ಈಗ ಈ ಕ್ಷೇತ್ರವನ್ನ ಯೋಗೇಶ್ವರ್‌ಗೆ ಬಿಟ್ಟುಕೊಡಬಹುದಿತ್ತು. ಆದರೆ ಅವರ ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ಕುಮಾರಸ್ವಾಮಿ ಟಿಕೆಟ್ ಕೊಡಲ್ಲ. ಕುಮಾರಸ್ವಾಮಿ ಟೂರಿಂಗ್ ಟಾಕೀಸ್, ಎಲ್ಲೂ ನಿಲ್ಲಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ
ಡಿ.ಕೆ ಸುರೇಶ್ ಅವರ ಸೋಲನ್ನು ಮರೆಯೋಕೆ ಸಿಪಿವೈ ಗೆಲ್ಲಿಸಬೇಕು. ಅದಕ್ಕಾಗಿ ಎಲ್ಲರನ್ನೂ ಮನವೊಲಿಸಿ ಯೋಗೇಶ್ವರ್ ಪರ ಕೆಲಸ ಮಾಡಬೇಕು. ಯೋಗೇಶ್ವರ್ ಕ್ಷೇತ್ರಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಡಿಕೆಶಿ ಕ್ಷೇತ್ರದ ಜನರಿಗೆ ಟ್ರಾನ್ಸ್ಫಾರ್ಮರ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಏನು ಕೊಟ್ಟಿದ್ದಾರೆ? ಕಾಂಗ್ರೆಸ್ ಸರ್ಕಾರ ಇನ್ನೂ 3 ವರ್ಷ ಇರುತ್ತೆ. ಸಿಪಿವೈ ಗೆದ್ದರೆ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ. ಸ್ವಾಭಿಮಾನ ಉಳಿಸಿಕೊಳ್ಳಬೇಕು ಅಂದ್ರೆ ಯೋಗೇಶ್ವರ್ ಗೆಲ್ಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಬಳಿಕ ಶಾಸಕ ಹೆಚ್.ಸಿ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ. ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಅವರ ಕುಟುಂಬದರನ್ನ ಪ್ರತಿಷ್ಠಾಪನೆ ಮಾಡ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ `ಇರುಮುಡಿ’ ಸಾಗಿಸಲು ಅನುಮತಿ
ಕುಮಾರಸ್ವಾಮಿಗೆ ನಾವ್ಯಾರೂ ಒಕ್ಕಲಿಗರ ರೀತಿ ಕಾಣುವುದಿಲ್ವಾ? ನಾವು ಅಣ್ಣ-ತಮ್ಮಂದಿರು, ಈ ಜಿಲ್ಲೆಯ ಮಕ್ಕಳು ನಾವು. ಜಗಳ ಆಡಿದ್ದೀವಿ, ಆದ್ರೆ ದ್ವೇಷ ಮಾಡಿಲ್ಲ. ಸಿಪಿವೈಗೆ ಅನ್ಯಾಯ ಆಗೋದು ಗೊತ್ತಾದಾಗ ಅವರನ್ನು ಕರೆತಂದು ಟಿಕೆಟ್ ಕೊಟ್ಟಿದ್ದೀವಿ. ಅವರು ಟೂರಿಂಗ್ ಟಾಕೀಸ್. ಮಂಡ್ಯಕ್ಕೆ ಹೋದ್ರು, ರಾಮನಗರಕ್ಕೂ ಹೋದ್ರು ಈಗ ಇಲ್ಲಿಗೆ ಬಂದವ್ರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್ – ಅ.31ಕ್ಕೆ ರಿಟೇನ್ ಆಟಗಾರರ ಭವಿಷ್ಯ!
ಚನ್ನಪಟ್ಟಣದವರಿಗೆ ಸ್ವಾಭಿಮಾನ ಇದ್ದರೆ ಯೋಗೇಶ್ವರ್ ಗೆಲ್ಲಿಸಿ:
ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ತಂದು ಶಾಸಕನನ್ನಾಗಿ ಸುರೇಶ್ ಮಾಡಿದ್ರು. ಚನ್ನಪಟ್ಟಣದವರಿಗೆ ಸ್ವಾಭಿಮಾನ ಇಲ್ವಾ? ತಾಲೂಕಿಗೆ ನೀರುಕೊಟ್ಟ ಯೋಗೇಶ್ವರ್‌ನ ಸೋಲಿಸಿದ್ರಿ. ನೀರು ಕೊಟ್ಟ ಯೋಗೇಶ್ವರ್‌ಗೆ ವಿಷ ಹಾಕಿದ್ರಿ. ನಿಮಗೆ ದೇವರು ಒಳ್ಳೆಯದು ಮಾಡಲ್ಲ. ಈಗ ಸ್ವಾಭಿಮಾನ ಬೆಳೆಸಿಕೊಳ್ಳಿ ಯೋಗೇಶ್ವರ್ ಗೆಲ್ಲಿಸಿ ಎಂದು ಶಾಸಕ ಮಾರ್ಮಿಕವಾಗಿ ನುಡಿದಿದ್ದರೆ.