ಬೆಂಗಳೂರು: ಕಾಂಗ್ರೆಸ್‌ನಿಂದ (Congress) ಯಾವ ಶಾಸಕರೂ ಅಡ್ಡ ಮತದಾನ (Cross Voting) ಮಾಡೋದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ (Dr M.C.Sudhakar) ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆ ವಿಚಾರ ಮತ್ತು ಕಾಂಗ್ರೆಸ್ ಶಾಸಕರು ರೆಸಾರ್ಟ್ ಹೋಗುತ್ತಿರುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಶಾಸಕರು ಯಾರೂ ಅಡ್ಡ ಮತದಾನ ಮಾಡೋದಿಲ್ಲ. ಶಾಸಕರು ಏಜೆಂಟ್‌ಗೆ ಮತ ತೋರಿಸಿ ಮತ ಹಾಕಬೇಕು. ಹೀಗಾಗಿ ನಮಗೆ ನಮ್ಮ ಶಾಸಕರು ಅಡ್ಡ ಮತದಾನ ಮಾಡುವ ಭೀತಿ ಇಲ್ಲ. ರಾಜ್ಯಸಭೆಯಲ್ಲಿ ಮತ ಹಾಕುವ ಪದ್ಧತಿ ಬೇರೆ ಇರುತ್ತದೆ. ಇದರ ಬಗ್ಗೆ ಮಾಹಿತಿ ನೀಡಲು ಶಾಸಕರನ್ನು ಸಂಜೆ ರೆಸಾರ್ಟ್‌ಗೆ ಕರೆದಿದ್ದಾರೆ ಎಂದರು. ಇದನ್ನೂ ಓದಿ: ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್
ಬಿಜೆಪಿ-ಜೆಡಿಎಸ್ ಅವರು ಹೊಸ ಸಂಬಂಧ ಬೆಳೆಸಿಕೊಂಡು ಏನೋ ಮಾಡೋಣ ಎಂದು ಹೊರಟಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಸೋಲಾಗಿ ಮೈತ್ರಿಗೆ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದಾರೆ. ಬಿಜೆಪಿ-ಜೆಡಿಎಸ್ ಅವರು ಏನೋ ಮಾಡಲು ಹೊರಟಿದ್ದಾರೆ. ಹೀಗಾಗಿ ನಾವು ಹುಷಾರಾಗಿ ಇರಬೇಕು. ಶಾಸಕಾಂಗ ಸಭೆ ಕೂಡಾ ಕರೆದಿದ್ದಾರೆ. ಹೀಗಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ. ನಮಗೆ ಅಡ್ಡ ಮತದಾನದ ಭೀತಿ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯೋದಿಲ್ಲ – ಸಿಎಂ ವಿರುದ್ಧ ಹರಿಹಾಯ್ದ ಜೋಶಿ