– ಕೋರ್ಟ್ ಕಾರಿಡಾರ್‌ನಲ್ಲೇ ಎ9 ಆರೋಪಿಯಿಂದ ಮಹಿಳಾ ಸಾಕ್ಷಿಗೆ ಬೆದರಿಕೆ
ಬೆಂಗಳೂರು: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಶುಕ್ರವಾರ ಕೋರ್ಟ್ನಲ್ಲಿ ಶರಣಾಗಿದ್ದಾರೆ. ಅವರನ್ನು ಸಿಬಿಐ (CBI) ವಶಕ್ಕೆ ಪಡೆದಿದೆ.
ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿ ಶರಣಾಗತಿಗೆ ಸುಪ್ರೀಂ ಕೋರ್ಟ್ (Supreme Court) ಗಡುವು ನೀಡಿತ್ತು. ಒಂದು ವಾರದ ಗಡುವು ಹಿನ್ನೆಲೆ ಶಾಸಕ ಇಂದು ಜನಪ್ರತಿನಿಧಿ ವಿಶೇಷ ನ್ಯಾಯಾಲದ ಮುಂದೆ ಹಾಜರಾದರು. ಇದನ್ನೂ ಓದಿ: ಧಾರವಾಡ ಜಿಪಂ ಸದಸ್ಯನ ಕೊಲೆ ಕೇಸ್ – ವಿನಯ್ ಕುಲಕರ್ಣಿ ಜಾಮೀನು ರದ್ದು
ವಿಚಾರಣೆ ಬಳಿಕ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. ಕೋರ್ಟ್ ಸೂಚನೆಯ ಮೇರೆಗೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಪರಪ್ಪನ ಅಗ್ರಹಾರಕ್ಕೆ ಶಾಸಕರನ್ನು ಶಿಫ್ಟ್ ಮಾಡಲಾಗುವುದು.
ವಿನಯ್ ಕುಲಕರ್ಣಿ ಪರ ವಕೀಲರು ಶರಣಾಗಲು ಸಮಯ ವಿಸ್ತರಿಸುವಂತೆ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಮನಮೋಹನ್ ಅವರಿದ್ದ ಪೀಠವು ಶರಣಾಗತಿಗೆ ಸಮಯ ನೀಡಲು ಕೋರ್ಟ್ ನಿರಾಕರಿಸಿದೆ. ಇದನ್ನೂ ಓದಿ: ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಹಿಳಾ ಸಾಕ್ಷಿಯೊಬ್ಬರಿಗೆ ಕೋರ್ಟ್ ಕಾರಿಡಾರ್‌ನಲ್ಲೇ ಬೆದರಿಕೆ ಹಾಕಿರುವ ಪ್ರಸಂಗ ನಡೆದಿದೆ. ಎ9 ಆರೋಪಿ ಅಶ್ವಥ್ ಗೌಡನಿಂದ ಬೆದರಿಕೆ ಹಾಕಲಾಗಿದೆ. ಆರೋಪಿ ಬೆದರಿಕೆ ಹಾಕಿರುವುದಾಗಿ ಕೋರ್ಟ್‌ಗೆ ಮಹಿಳೆ ಇ-ಮೇಲ್ ಮಾಡಿದ್ದಾರೆ. ಸಿಬಿಐ ಅಧಿಕಾರಿಗಳಿಗೂ ಇ-ಮೇಲ್ ಮಾಡಿ ಮಾಹಿತಿ ನೀಡಿದ್ದಾರೆ.
ಮಹಿಳೆ ನೀಡಿದ್ದ ಮಾಹಿತಿ ಆಧರಿಸಿ ಎಸ್ಪಿಪಿ ಗಂಗಾಧರ್ ಶೆಟ್ಟಿ ಅವರಿಂದ ಮೆಮೋ ಸಲ್ಲಿಕೆಯಾಗಿದೆ. ವಿಚಾರಣೆ ನಡೆಸಿದ ಕೋರ್ಟ್ ತನಿಖೆಗೆ ಆದೇಶ ನೀಡಿದೆ. ಸಿಐಎಸ್‌ಎಫ್‌ನಿಂದ ತನಿಖೆಗೆ ಕೋರ್ಟ್ ಆದೇಶಿಸಿದೆ.