ಮಂಗಳೂರು: ಬೆಂಗಳೂರಿನಲ್ಲಿ ಹಿಂದೂ ನಾಯಕರ ಹತ್ಯೆಗೈಯಲು ಸಂಚು ರೂಪಿಸಿದ್ದು ಯಾರೇ ಆಗಲಿ ಅಂತಹ ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಕೂಡ ಬೆಂಬಲಿಸಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕೊಲೆಗೆ ಸಂಚು ರೂಪಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರ ಬಂಧನವಾಗಿರುವುದು ಸರಿಯಾದ ಕ್ರಮ. ಕಾನೂನು ಎಲ್ಲರಿಗೂ ಒಂದೇ. ಪ್ರತಿಯೊಬ್ಬರ ಜೀವ ಮೌಲ್ಯಯುತ ಎಂಬುದನ್ನು ಸರ್ಕಾರ ಕೂಡ ಅರ್ಥ ಮಾಡಿಕೊಳ್ಳಬೇಕು. ಜನರು ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸಂಘಟನೆಗೂ ಕೊಲೆ ಸ್ಕೆಚ್ ಆರೋಪಿಗಳಿಗೂ ಸಂಬಂಧವಿಲ್ಲ- ಕಮಿಷನರ್ ವಿರುದ್ಧ ಕಾನೂನು ಹೋರಾಟ: ಎಸ್‍ಡಿಪಿಐ ಅಧ್ಯಕ್ಷ
Advertisement
Advertisement
ಎಸ್.ಡಿ.ಪಿ.ಐ ನಿಷೇಧಿಸುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ನಿಷೇಧಿಸುವ ಬಗ್ಗೆ ಸರ್ಕಾರ ಹೇಳಬೇಕು. ಪ್ರತಿಪಕ್ಷದಲ್ಲಿದ್ದಾಗ ಅವರೇ ನಿಷೇಧದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರದ್ದೇ ಸರ್ಕಾರ ಇದೆ. ಹೀಗಾಗಿ ಬೇರೆಯವರ ಬಳಿ ಕೇಳುವುದಕ್ಕೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್
Advertisement
ಆರೋಪಕ್ಕೆ ಸಾಕ್ಷ್ಯಾಧಾರ ನೀಡಿ ಜನರಿಗೆ ವಿಶ್ವಾಸ ಬರುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು. ಸತ್ಯಾಂಶ ಇದ್ದರೆ ಯಾರು ಕೂಡ ಅವರಿಗೆ ಬೆಂಬಲಿಸಲ್ಲ ಎಂದು ಹೇಳಿದರು.