ಚಂಡೀಗಢ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖಯರಾರನ್ನು (Congress MLA Sukhpal Singh Khaira) ಬಂಧಿಸಲಾಗಿದೆ.
2015ರ ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾರ್ಕೊಟಿಕ್ಸ್ ಡ್ರಗ್ಸ್ ಆ್ಯಂಡ್ ಸೈಕೋಟ್ರಾಪಿಕ್ ಸಬ್‍ಸ್ಟನ್ಸಸ್ ಆ್ಯಕ್ಟ್ ಅಡಿಯಲ್ಲಿ ಸುಖಪಾಲ್ ಅವರನ್ನು ಜಲಾಲಬಾದ್ ಪೊಲೀಸರು (Jalalabad police station) ಇಂದು ಬೆಳಗ್ಗೆ 6.30ರ ಸುಮಾರಿಗೆ ಬಂಧಿಸಿದ್ದಾರೆ.
Congress leader Sukhpal Singh Khaira detained by Punjab Police in connection with a 2015 case registered under the NDPS Act
(Video source – Sukhpal Singh Khaira's Facebook) pic.twitter.com/vIXzC7GRPJ
— ANI (@ANI) September 28, 2023
ಚಂಡೀಗಢದಲ್ಲಿರುವ ನಿವಾಸದಲ್ಲಿ ಸುಖಪಾಲ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧನದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬಂಧನಕ್ಕೂ ಮೊದಲು ಸುಖಪಾಲ್ ಅವರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಹಾಗೆಯೇ ಬಂಧನದ ಘಟನೆಯನ್ನು ಫೇಸ್‍ಬುಕ್ ಲೈವ್ ಮೂಲಕ ಜನರಿಗೆ ತೋರಿಸಿದ್ದಾರೆ.
ಸುಖಪಾಲ್ ಸಿಂಗ್ ಖೈರಾ ಅವರನ್ನು 2021ರಲ್ಲೂ ಬಂಧನಕ್ಕೊಳಪಡಿಸಲಾಗಿತ್ತು. ಅಕ್ರಮವಾಗಿ ಮಾದಕವಸ್ತು ಸಾಗಣೆ, ಮಾದಕವಸ್ತು ದಂಧೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸುಖಪಾಲ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ನಡುವೆ ನಕಲಿ ಪಾಸ್‍ಪೋರ್ಟ್ ಪ್ರಕರಣವೂ ಸುಖಪಾಲ್ ಖೈರಾ ವಿರುದ್ಧ ಕೇಳಿಬಂದಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]