ಸಾರ್ವಜನಿಕ ಸ್ಥಳದಲ್ಲಿ ಕಾಂಗ್ರೆಸ್ ಶಾಸಕನಿಂದ ಬ್ಯಾಂಕ್ ಸಿಬ್ಬಂದಿಗೆ ಕಪಾಳಮೋಕ್ಷ

Public TV
2 Min Read
Congress 1

ರಾಯ್ಪುರ: ಸಹಕಾರಿ ಬ್ಯಾಂಕ್‍ನ (Bank) ಇಬ್ಬರು ಉದ್ಯೋಗಿಗಳ (Staff) ಮೇಲೆ ಕಾಂಗ್ರೆಸ್ (Congress) ಶಾಸಕರೊಬ್ಬರು (MLA) ಕಪಾಳಮೋಕ್ಷ ಮಾಡಿದ ಘಟನೆ ಛತ್ತೀಸ್‍ಗಢದ (Chhattisgarh) ಬಲರಾಂಪುರ-ರಾಮಾನುಜಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್‍ನ ರಾಮಾನುಜಗಂಜ್ ಶಾಖೆಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಹೊರಗೆ ನೂರಾರು ರೈತರ ಸಮ್ಮುಖದಲ್ಲಿ ಕಾಂಗ್ರೆಸ್ ಶಾಸಕ ಬೃಹಸ್ಪತ್ ಸಿಂಗ್ ಕ್ಲರ್ಕ್ ರಾಜೇಶ್ ಪಾಲ್ ಮತ್ತು ಪ್ಯೂನ್ ಅರವಿಂದ್ ಸಿಂಗ್ ಅವರನ್ನು ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ.

ಘಟನೆಯ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆಗೆ ಸಂಬಂಧಿಸಿ ಶಾಸಕ ಬೃಹಸ್ಪತ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುರ್ಗುಜಾ ವಿಭಾಗದ ಅಡಿಯಲ್ಲಿ ಸಹಕಾರಿ ಬ್ಯಾಂಕ್‍ಗಳ ನೌಕರರು ಏ.5 ರಿಂದ 2 ದಿನಗಳ ಕಾಲ ಸಾಮೂಹಿಕ ರಜೆ ಘೋಷಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳತನ ಮಾಡಿದೆ, ಅದಕ್ಕೆ ಐಟಿಗೆ ಭಯ ಬೀಳ್ತಿದೆ – ಸಿಎಂ ಬೊಮ್ಮಾಯಿ

ರಾಮಾನುಜಗಂಜ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೃಹಸ್ಪತ್ ಸಿಂಗ್ ಜಿಲ್ಲಾ ಸಹಕಾರಿ ಬ್ಯಾಂಕ್‍ನ ಇಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ, ಬ್ಯಾಂಕ್ ಸಿಬ್ಬಂದಿ 70ವರ್ಷದ ರೈತನ ಬಳಿ ಹಣ ಕೇಳಲು ಹೋಗಿದ್ದಾರೆ. ಈ ವೇಳೆ ರೈತನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಸಾಲ ನೀಡಿದ ನೌಕರರ ವಿರುದ್ಧ ಅಕ್ರಮಗಳ ನಿರಂತರ ದೂರುಗಳಿಂದ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿ ಯುವತಿಯ ಜೊತೆ ಮಾತನಾಡಿದ್ದಕ್ಕೆ ಕಾದು ಕುಳಿತು ಯುವಕನ ಹಲ್ಲೆಗೈದ್ರು!

Share This Article