– ನಾಲ್ಕು ಗೋಡೆ ಬಿಟ್ಟು ಹೊರಗೆ ತಲುಪಲು ಕಾರಣ ಏನು?
– ಪ್ರಜ್ವಲ್ ರೇವಣ್ಣ ಇಲ್ಲೇ ಇದ್ದು ಫೇಸ್ ಮಾಡಬೇಕಿತ್ತು
ಹಾಸನ: ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಹೇಳಿದರು.
Advertisement
ನಗರದಲ್ಲಿ ಮಾತನಾಡಿದ ಅವರು, ಈ ರಾಜ್ಯ, ಜಿಲ್ಲೆ, ದೇಶದಲ್ಲಿ ಎಂದೂ ನಡೆಯದ ಲೈಂಗಿಕ ಹಗರಣವೊಂದು ಹಾಸನದಲ್ಲಿ ಆಯ್ತಲ್ಲಾ ಎನ್ನುವ ದು:ಖದಲ್ಲಿದ್ದೇವೆ. ಮನಸ್ಸಿಗೆ ಬಹಳ ವೇದನೆಯಾಗಿದೆ. ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ. ಇಡೀ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ದುಷ್ಕೃತ್ಯ ಮಾಡಿರುವವರು ವಿದೇಶಕ್ಕೆ ಹೋದ ಮೇಲೆ ಎಲ್ಲಾ ಸುದ್ದಿ ಆಯ್ತು. ಇಡೀ ಹಾಸನ ಜಿಲ್ಲೆಗೆ ಕಳಂಕ ತಂದಿದೆ. ಪಕ್ಷಭೇದ, ಎಲ್ಲಾ ಭಾವನೆಗಳನ್ನು ಮರೆತು ಇಂತಹ ಒಂದು ಕೃತ್ಯ ನಡೆಯಬಾರದಿತ್ತು ಎಂದು ಎಲ್ಲರೂ ಖಂಡಿಸಬೇಕಿತ್ತು. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಹೀನ ಕೃತ್ಯ. ಅದರಲ್ಲೂ ಲೈಂಗಿಕ ದೌರ್ಜನ್ಯ ಎಸಗಿ ಆ ದೌರ್ಜನ್ಯದ ವಿಡಿಯೋಗಳನ್ನು ಅವರೇ ಚಿತ್ರೀಕರಿಸಿ ತಂದು ಇಡೀ ಪ್ರಪಂಚಕ್ಕೆ ಗೊತ್ತಾಗುವ ಥರ ಮಾಡಿದ್ದಾರೆ. ಇಡೀ ರಾಜ್ಯ, ದೇಶದ ಜನ ತಲೆ ತಗ್ಗಿಸುವಂತಾಗಿದೆ. ಮಾಡಿದಂತಹ ಹೀನ ಕೃತ್ಯವನ್ನು ತನ್ನ ಮೊಬೈಲ್‌ನಿಂದ ಹೊರಪ್ರಪಂಚಕ್ಕೆ ತಂದದ್ದು ದುಷ್ಕೃತ್ಯ. ಅದನ್ನು ಸಹಿಸಲು ಸಾಧ್ಯವಿಲ್ಲ. ನಾಲ್ಕು ಗೋಡೆ ಮಧ್ಯೆ ಕೆಲವು ಘಟನೆಗಳು ನಡೆದು ಹೋಗುತ್ತವೆ. ನಾಲ್ಕು ಗೋಡೆ ಬಿಟ್ಟು ಹೊರಗೆ ತಲುಪಲು ಕಾರಣ ಏನು? ಅದನ್ನು ಸೆರೆ ಹಿಡಿಯದಿದ್ದರೆ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್ ಡೇ
Advertisement
Advertisement
ಪೆನ್‌ಡ್ರೈವ್ ಹೊರಕ್ಕೆ ಬಿಟ್ಟವರು ಕಾರ್ತಿಕ್ ಹಾಗೂ ದೇವರಾಜೇಗೌಡ. ದೇವರಾಜೇಗೌಡಗೆ ಮಾತ್ರ ನಾನು ಪೆನ್‌ಡ್ರೈವ್ ಕೊಟ್ಟೆ ಅಂತ ಕಾರ್ತಿಕ್ ಹೇಳಿದ್ರು. ದೇವೇಗೌಡರ ಕುಟುಂಬಕ್ಕೂ ದೇವರಾಜೇಗೌಡ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು. ಇದನ್ನು ಸುಖಾಂತ್ಯ ಮಾಡಲು ದೇವರಾಜೇಗೌಡ ಯಾಕೆ ಮನಸ್ಸು ಮಾಡಲಿಲ್ಲ? ಆರು ತಿಂಗಳು ಏಕೆ ಪೆನ್‌ಡ್ರೈವ್ ತಮ್ಮ ಬಳಿ ಇಟ್ಟುಕೊಂಡರು? ಕಾರ್ತಿಕ್‌ಗೆ ನ್ಯಾಯ ಕೊಡಿಸಲು ಆಗದಿದ್ದ ಮೇಲೆ ಪೆನ್‌ಡ್ರೈವ್ ಏಕೆ ತಮ್ಮ ಬಳಿ ಇಟ್ಕಂಡಿದ್ದರು? ಏಕೆ ಆರು ತಿಂಗಳು ಪೆನ್‌ಡ್ರೈವ್ ನಿಮ್ಮ ಬಳಿ ಇಟ್ಕಂಡಿದ್ದೀರಿ? ಯಾರು ಪೆನ್‌ಡ್ರೈವ್ ಹಂಚಿದ್ದಾರೆ ಅದು ಬೆಳಕಿಗೆ ಬರಲೇಬೇಕು. ನೀವು ವಕೀಲರಾಗಿ ಜಡ್ಜ್ ಅಥವಾ ಪೊಲೀಸರ ಮುಂದೆ ಪೆನ್‌ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ನೀವು ಹಾಗೆ ಮಾಡಿದ್ರೆ ಇಡೀ ವಕೀಲರಿಗೆ ಗೌರವ ಬರುತ್ತಿತ್ತು. ನಿಮ್ಮ ಘನತೆ, ಗೌರವ ಹೆಚ್ಚುತ್ತಿತ್ತು. ಸಂಸದ ಪ್ರಜ್ವಲ್ ರೇವಣ್ಣ ಅವರ ಅನರ್ಹ ಮಾಡಲು ಇದು ಕಾರಣ ಆಗದು. ಕೃತ್ಯ ಎಸಗಿದಷ್ಟೇ ಮಹಿಳೆಯರ ಮಾನ, ಮರ್ಯಾದೆ, ಘನತೆ ಗೌರವ ಹಾಳು ಮಾಡಿದ್ದಾರೆ. ಮಾನ, ಮರ್ಯಾದೆ ಇಲ್ಲದಂತೆ ಮಾಡಿದ್ದಾರೆ ಎಂದು ಟೀಕಿಸಿದರು.
Advertisement
ಪ್ರಜ್ವಲ್ ರೇವಣ್ಣ ಇಲ್ಲೇ ಇದ್ದು ಫೇಸ್ ಮಾಡಬೇಕಿತ್ತು. ಇವರು ಹೊರ ದೇಶಕ್ಕೆ ಹೋದರು. ಎಸ್‌ಐಟಿನೇ ಸರಿಯಿಲ್ಲ ಅಂತಾ ದೇವರಾಜೇಗೌಡ ಹೇಳ್ತಾರೆ. ಪೆನ್‌ಡ್ರೈವ್ ಹರಿಬಿಡಲು ಸರ್ಕಾರವೇ ಕಾರಣ ಅಂತ ದೇವರಾಜೇಗೌಡ ಹೇಳ್ತಾನೆ. ಅದನ್ನು ಕಟ್ಕಂಡು ಏಕಾಏಕಿ ಪ್ರತಿಭಟನೆ ಮಾಡ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಮಾತಿನಲ್ಲಿ ಹಿಡಿತಬೇಡ್ವಾ? ಎಲ್ಲರನ್ನೂ ಏಕವಚನದಲ್ಲೇ ಬೈತಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ಪೆನ್‌ಡ್ರೈವ್ ಹರಿಬಿಟ್ಟವರು ಯಾರು ಎನ್ನುವ ಸಮಸ್ಯೆ ಕಾಡುತ್ತಿದೆ. ಇದರಲ್ಲಿ ರಾಜಕಾರಣ ನಡೆಯುತ್ತಿದೆ. ಈಗ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ – ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ
ವಕೀಲರು ವಕೀಲ ವೃತ್ತಿ ಮಾಡಿಕೊಂಡು ಇರಬೇಕು. ಸಾವಿರಾರು ಪೆನ್‌ಡ್ರೈವ್ ಹಂಚಿಕೆ ಆಗಬೇಕಾದರೆ ದೇವರಾಜೇಗೌಡ ಕಾರಣ. ಎ1 ಮಾಡ್ತಾರೆ ಅಂತಾ ದೇವರಾಜೇಗೌಡ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡ್ತಿದ್ದಾರೆ. ಕುಮಾರಣ್ಣ ಮೊದಲು ಉಪ್ಪು ತಿಂದ ಮೇಲೆ ನೀರು ಕುಡಿತಾನೆ ಅಂದರು. ನಮ್ಮ ಕುಟುಂಬ ಬೇರೆ, ಅವರ ಕುಟುಂಬವೇ ಬೇರೆ ಅಂದಿದ್ರು. ಈಗ ಡಿಫೈನ್ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಯನ್ನು ಬಿಟ್ಟು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತಾಡುತ್ತಿದ್ದಾರೆ. ನೀವು ಹೇಗೆ ಒಕ್ಕಲಿಗ ಸಮುದಾಯದ ನಾಯಕರೋ, ಹಾಗೆ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ನಾಯಕರೇ. ಅವರು ನಿಮ್ಮಂತೆ ಬೆಳೆದು ಬಂದು ಒಕ್ಕಲಿಗ ನಾಯಕರಾಗಿದ್ದಾರೆ. ನೀವು ಮುಖ್ಯಮಂತ್ರಿ ಆಗಿದ್ದಾಗಲೂ ಎಸ್‌ಐಟಿನೇ ಮಾಡಿದ್ರಿ. ಈ ಪ್ರಕರಣ ಅವರ ಪಕ್ಷವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುವುದು ಖಂಡನೀಯ. ನಿಮ್ಮ ಪಕ್ಷದ ಮೇಲೆ ಬಂದಿರುವ ಆರೋಪವನ್ನು ಬೇರೆ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೇವರಾಜೇಗೌಡ ಇದರಲ್ಲಿ ಸಿಕ್ಕಿಕೊಳ್ತಾರೆ. ಇವರು ಪೆನ್‌ಡ್ರೈವನ್ನು ಉನ್ನತ ಅಧಿಕಾರಿಗೆ ಕೊಡಬೇಕಿತ್ತು. ಇದರಲ್ಲಿ ದೇವರಾಜೇಗೌಡ ಒಬ್ಬ ಅಪರಾಧಿ. ಡಿ.ಕೆ.ಶಿವಕುಮಾರ್ ಶ್ರೇಯಸ್ಸು, ಅವರ ಯಶಸ್ಸು ತಡೆಯಲಾರದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.