– 7 ಜನ ಲಿಂಗಾಯತ ಸಚಿವರೂ ಅಸಮರ್ಥರಿದ್ದಾರೆ ಎಂದ ಶಾಸಕ
– ಜಾತಿ ಜನಗಣತಿ ವರದಿಗೆ ಕಾಂಗ್ರೆಸ್‌ನಲ್ಲೇ ಅಪಸ್ವರ
ದಾವಣಗೆರೆ: ಲಿಂಗಾಯತ ಸಚಿವರು (Lingayat Minister) ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಳುವ ಮೂಲಕ ಶಾಸಕ ಶಿವಗಂಗಾ ಬಸವರಾಜ್ ( Shivaganga Basavaraju) ಸ್ವಪಕ್ಷೀಯರ ವಿರುದ್ಧವೇ ಕಿಡಿ ಕಾರಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿಯವರನ್ನು (DK Shivakumar) ಏಕೆ ಇಷ್ಟು ಇಷ್ಟ ಪಡುತ್ತೇವೆ ಅಂದ್ರೆ ಸಮಾಜಕ್ಕೆ ಅನ್ಯಾಯ ಆಗುತ್ತದೆ ಅಂದತಕ್ಷಣ ಸಭೆ ಕರೆದರು. ಆದರೆ ನಮ್ಮ ಲಿಂಗಾಯತ ಸಮಾಜದ 7 ಜನ ಸಚಿವರಿದ್ದರೂ ಧ್ವನಿ ಎತ್ತಿಲ್ಲ. ಶಾಸಕರು ಇದರ ಬಗ್ಗೆ ಚರ್ಚೆ ಮಾಡಲು ಫೋನ್ ಮಾಡಿದರೂ ಸಚಿವರು ರಿಸೀವ್ ಮಾಡಲ್ಲ. 7 ಜನ ಸಚಿವರು ಕೂಡ ಅಸಮರ್ಥರಿದ್ದಾರೆ ಕೂಡಲೇ ರಾಜೀನಾಮೇ ನೀಡಬೇಕು ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜಾತಿ-ಜಾತಿಗಳು, ಧರ್ಮಗಳ ನಡುವೆ ಬಿರುಕು ಮೂಡಿಸೋ ಕೆಲಸ ಬಿಡಬೇಕು: ವಿಜಯೇಂದ್ರ
- Advertisement3
ಮೊನ್ನೆ ಈಶ್ವರ್ ಖಂಡ್ರೆಯವರಿಗೆ ಕಾಲ್ ಮಾಡಿದ್ದರೂ ರಿಸೀವ್ ಮಾಡಲಿಲ್ಲ. ಆದ್ರೆ ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಆಗಿದೆ ಅಂದಕೂಡಲೇ ಡಿಕೆಶಿ ಸಭೆ ಮಾಡಿದ್ದಾರೆ. ಆ ಸಮಾಜದ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಆದ್ರೆ ಲಿಂಗಾಯತ ಸಮುದಾಯದ ಸಚಿವರು ಮಾತ್ರ ಚರ್ಚೆ ಮಾಡ್ತಾ ಇಲ್ಲ ಅಂತ ಸ್ವಪಕ್ಷದ ಸಚಿವರ ವಿರುದ್ದ ಅಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಜಾತಿಗಣತಿ ದೋಷಪೂರಿತ ವರದಿ, ಲಿಂಗಾಯತರಿಗೆ ಅನ್ಯಾಯವಾಗಿದೆ: ಗದಗ ತೋಂಟದಾರ್ಯ ಶ್ರೀ
- Advertisement
ನಮ್ಮ ಸಮಾಜದ ಸಚಿವರು ಅವರ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡ್ತಾ ಇದಾರೆ. ಜಾತಿಗಣತಿ ನಮ್ಮ ಸಚಿವರಿಗೆ ಅವಶ್ಯಕತೆ ಇಲ್ಲ. ಯಾವ ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆಯೋ ಅವರೆಲ್ಲ ಸಭೆ ಮಾಡ್ತಿವಿ ಎಂದರಲ್ಲದೇ ಜಾತಿ ಜನಗಣತಿ ಮರುಸಮೀಕ್ಷೆಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ
ನಾನು ಕೂಡ ನಮ್ಮ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೇರಡು ಮೂರು ದಿನಗಳಲ್ಲಿ ವರದಿ ನೀಡುತ್ತೇನೆ. ನಾಳೆ ಜಾತಿ ಜನಗಣತಿ ವರದಿ ಚರ್ಚೆ ಮಾಡಲಿ, ಆದ್ರೆ ಬಿಡುಗಡೆ ಮಾಡುವುದು ಬೇಡ. ಎಲ್ಲರ ಸಮೀಕ್ಷೆ ಮುಗಿದ ನಂತರ ಬಿಡುಗಡೆ ಮಾಡಲಿ. ಕ್ಷೇತ್ರದಲ್ಲಿ ಉತ್ತರ ಕೊಡುವವರು ನಾವು, ಎಲ್ಲಾ ಸಮುದಾಯಕ್ಕೆ ಉತ್ತರ ಕೊಡಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಾರಿ ಮಾಲೀಕರ ಜೊತೆ ಸಿಎಂ ಸಂಧಾನ ಸಭೆ ವಿಫಲ – ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾದ ಲಾರಿ ಅಸೋಸಿಯೇಷನ್!