– ಅವಶ್ಯಕತೆ ಬಂದ್ರೆ ವೀರಶೈವ ಮಹಾಸಭಾದಿಂದ ಖಾಸಗಿ ಜಾತಿಗಣತಿ ಮಾಡಿಸುತ್ತೇವೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ ಎಂದು ಜಾತಿಗಣತಿ ವರದಿಗೆ (Caste Census Report) ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ವಿರೋಧ ವ್ಯಕ್ತಪಡಿಸಿದರು.
ಸರ್ಕಾರ ಮುಂದೆ ಏನು ಮಾಡುತ್ತೆ ನೋಡಿ ಕ್ರಮ ಕೈಗೊಳ್ಳುತ್ತೇವೆ. ನಾವೇನು ಸುಮ್ಮನೆ ಕೂರುವುದಿಲ್ಲ. ವೀರಶೈವ ಲಿಂಗಾಯತರು ಉಪ ಜಾತಿ ಸೇರಿ 2 ಕೋಟಿ ಮೇಲಿದ್ದೇವೆ. 9 ವರ್ಷದ ಹಿಂದಿನ ವರದಿ ತಯಾರಿಸಿದ್ದು ಕಾಂತರಾಜು, ಕೊಟ್ಟಿದ್ದು ಜಯಪ್ರಕಾಶ್ ಹೆಗ್ಡೆ. 9 ವರ್ಷದ ಹಿಂದಿನ ವರದಿ ಇದನ್ನ ಮೂಲೆಗೆ ಹಾಕಬೇಕು. ನಾವು ಎರಡು ಕೋಟಿ ಇದ್ದೇವೆ. ಜಾತಿಗಳ ನಡುವೆ ಸಂಘರ್ಷ ಆಗುತ್ತೆ. ಹೌದು, ಅವರು ಛೂ ಬಿಡ್ತಾರೆ. ಪುನರ್ ಪರಿಶೀಲನೆಗೆ ಒತ್ತಾಯ ಮಾಡ್ತೀವಿ. ಈಗಲೂ ಅದನ್ನೆ ಹೇಳ್ತೀನಿ ಮನೆಯಲ್ಲೆ ಕುಳಿತು ವರದಿ ಬರೆದಿದ್ದಾರೆ. ಜಾತಿಗಣತಿಯನ್ನ ವೈಜ್ಞಾನಿಕವಾಗಿ ಇನ್ನೊಂದು ಸರಿ ಮಾಡಲಿ ಎಂಬುದು ನಮ್ಮ ಸಮುದಾಯದ ಅಭಿಪ್ರಾಯ ಎಂದು ತಿಳಿಸಿದರು. ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?
- Advertisement
- Advertisement
ಸ್ವೀಕಾರ ಮಾಡಿದ್ದು ತಪ್ಪಲ್ಲ. ಅಂಗೀಕಾರ ಮಾಡಬೇಡಿ ಅಂತ ನಾವು ಹೇಳಿದ್ದೇವೆ. ಒಕ್ಕಲಿಗರ ಸಂಘದವರು ಪ್ರತಿಭಟನೆ ಮಾಡಿದ್ದಾರೆ. ವೈಜ್ಞಾನಿಕವಾಗಿ ಮತ್ತೆ ಸರ್ವೆ ಮಾಡಬೇಕು ಎಂಬುದು ನಮ್ಮ ಸಮುದಾಯದ ಆಗ್ರಹ. ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ? ವರದಿ ಕೊಟ್ಟಿದನ್ನ ಸರ್ಕಾರ ತೆಗೆದುಕೊಂಡಿದ್ದಾರೆ ಮುಂದೆ ನೋಡೋಣ. ಒಕ್ಕಲಿಗರು-ಲಿಂಗಾಯತರ ಜಂಟಿ ಹೋರಾಟ ವಿಚಾರ ಜೈಲಿಗೆ ಹೋಗಲು ಹೋರಾಟನಾ? ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದವರ ಸ್ಪರ್ಧೆ ಬಗ್ಗೆ ಗೊತ್ತಿಲ್ಲ. ಜಿಲ್ಲಾ ಮಂತ್ರಿ ಹೇಳಿದವರಿಗೆ ಟಿಕೆಟ್ ಕೊಡ್ತಾರೆ ಎಂದರು.
ಸರ್ಕಾರ ವರದಿ ಏನು ಮಾಡುತ್ತೆ ಅಂತ ನೋಡುತ್ತೇವೆ. ನಾವು ಸುಮ್ಮನೆ ಕೂರಲ್ಲ. ಇವತ್ತಿನ ಪತ್ರಿಕೆ ನೋಡಿದೆ. ಹಿಂದುಳಿದವರು ಜಾಸ್ತಿ ಇದ್ದಾರೆ ಅಂತಿದೆ. ಎಲ್ಲರಿಗಿಂತ ವೀರಶೈವರು ಹೆಚ್ಚಾಗಿದ್ದಾರೆ. ವೈಜ್ಞಾನಿಕವಾಗಿ ವರದಿ ಮಾಡಿಸಲಿ. 9 ವರ್ಷಗಳ ಹಿಂದಿನ ವರದಿ ಇದು ಎಂದು ಟೀಕಿಸಿದರು. ಇದನ್ನೂ ಓದಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸರ್ಕಾರಕ್ಕೆ ಅಧಿಕೃತ ಸಲ್ಲಿಕೆ
ಉದ್ದೇಶಪೂರ್ವಕವಾಗಿ ವೀರಶೈವರನ್ನು ಕಡಿಮೆ ತೋರಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದ್ರೆ ಹಾಗೆ ಅನಿಸುತ್ತಿದೆ. ಅವಶ್ಯಕತೆ ಬಂದರೆ ವೀರಶೈವ ಮಹಾಸಭಾದಿಂದ ಖಾಸಗಿ ಜನಗಣತಿ ಮಾಡಿಸುತ್ತೇವೆ. ಈ ವರದಿಯಿಂದ ಜಾತಿಗಳ ನಡುವೆ ಸಂಘರ್ಷ ಆಗುತ್ತೆ. ಬೇಕು ಎಂದೇ ಛೂ ಬಿಡುತ್ತಿದ್ದಾರೆ.