ಶಿವಮೊಗ್ಗ: ಅರಣ್ಯಧಿಕಾರಿಗೆ ಕಾಂಗ್ರೆಸ್ ಶಾಸಕರೊಬ್ಬರು ಅವಾಜ್ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫೋನ್ ಮೂಲಕ ಅರಣ್ಯಾಧಿಕಾರಿ ಸೀನಪ್ಪ ಶೆಟ್ಟಿಗೆ ಭದ್ರಾವತಿ ಕ್ಷೇತ್ರದ ಶಾಸಕ ಸಂಗಮೇಶ್ ಅವಾಜ್ ಹಾಕಿದ್ದಾರೆ.
ಶಿವಮೊಗ್ಗ ಭದ್ರಾವತಿ ತಾಲೂಕು ಕೊಡ್ಲಿಗೇರೆ ಸಮೀಪ ಅರಣ್ಯದಲ್ಲಿ ದೇವಾಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
Advertisement
ಅರಣ್ಯ ಸ್ಥಳವನ್ನು ಆಕ್ರಮಿಸಿ ದೇವಾಸ್ಥಾನ ನಿರ್ಮಾಣ ಮಾಡದಂತೆ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದಾರೆ. ಹೀಗಾಗಿ ದೇವಾಸ್ಥಾನ ವಿಚಾರಕ್ಕೆ ಬರದಂತೆ ಸಂಗಮೇಶ್ ಬೆದರಿಕೆ ಹಾಕಿದ್ದಾರೆ.
Advertisement
ಅವಾಜ್ ಏನು..?
ಡಿಎಫ್‍ಈ ಓಕೆ ಅಂತಿದ್ದಾರೆ. ನೀನು ಓಕೆ ಅಂತೀದ್ದಿಯಾ. ಮತ್ಯಾಕೇ ನೋಟಿಸ್ ಕೊಟ್ಟೆ..? ಒಂದು ಚದರ ಜಾಗವನ್ನಷ್ಟೇ ಬಳಕೆ ಮಾಡುತ್ತಾರೆ. ಅರ್ಜಿ ಸಹ ಕೊಟ್ಟಿದ್ದಾರೆ. ಅಯಿತು ಇವತ್ತು ಪೂಜೆ ಮಾಡಿದ್ದೇವೆ. ಇನ್ಮೇಲೆ ಇಲ್ಲಿ ಯಾರು ಅಡ್ಡಪಡಿಸಬಾರದು. ಅಡ್ಡಬಂದರೆ ಕೈ-ಕಾಲು ಕಡೀತಿನಿ. ನೀವು ಹಂಗ್ ಹೇಳಿದರೆ ಕೇಳುವುದಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv