ಬೆಂಗಳೂರು: ಮಾಜಿ ಸಂಸದೆ ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡಲಿ ಎಂದು ನಲಪಾಡ್ ಹೇಳಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಸ್ಯಾಂಡಲ್ವುಡ್ ಕ್ವೀನ್ ಪರ ಶಾಸಕ ರಿಜ್ವಾನ್ ಅರ್ಷದ್ ಬ್ಯಾಟ್ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಮ್ಯಾ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಮ್ಯಾ ಒಳ್ಳೆಯ ನಟಿ, ಸಂಸದೆಯಾಗಿರೋರು. ಅವರ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡಲಿ ಅನ್ನುವ ನಲಪಾಡ್ ಹೇಳಿಕೆ ಸರಿಯಲ್ಲ. ಈ ರೀತಿ ಸಾರ್ವಜನಿಕ ಹೇಳಿಕೆ ಕೊಡೋದು ಸರಿಯಲ್ಲ ಎಂದಿದ್ದಾರೆ.
Advertisement
Advertisement
ಪಕ್ಷದೊಳಗೆ ಕಾಲೆಳೆಯುವ ಬಗ್ಗೆ ರಮ್ಯಾ ಹೇಳಿರೋದು ರಾಜಕೀಯವೇ ಹೀಗೆ ಏನು ಮಾಡೋದು..? ಬೆಳೆಯೋವಾಗ ಇದೆಲ್ಲ ಸಹಜ ಪ್ರಕ್ರಿಯೆ. ಬೆಲೆಯೇರಿಕೆ ಬಗ್ಗೆ ಟ್ವೀಟ್ ಮಾಡೋಣ ಬಿಡಿ ಎಂದು ನನ್ನ ಕಾಂಗ್ರೆಸ್ ಮಿತ್ರರಿಗೂ ಇದನ್ನೇ ಹೇಳುವೆ ಎಂದರು. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್ನಲ್ಲಿ ಬೇಡ: ನಲಪಾಡ್
Advertisement
ಬಿಜೆಪಿ ನಮ್ಮ ಆಂತರಿಕ ಸಂಘರ್ಷದ ಬಗ್ಗೆ ಮಾತಾನಾಡುವ ಮುನ್ನ ಯತ್ನಾಳ್ ಬಗ್ಗೆ ಯೋಚಿಸಲಿ. 2,500 ಕೋಟಿ ಕೊಟ್ಟಿದ್ರೇ ನಾನು ಸಿಎಂ ಆಗ್ತಿದೆ ಅಂತಾ ಯತ್ನಾಳ್ ಹೇಳಿದ್ದಾರೆ. ಒಂದು ನೋಟಿಸ್ ಕೊಟ್ಟಿಲ್ಲ. ಇದರ ಬಗ್ಗೆ ಬಿಜೆಪಿ ತನಿಖೆ ಮಾಡಲಿ ಎಂದು ಸವಾಲೆಸೆದಿದ್ದಾರೆ.