ಬೆಂಗಳೂರು: ಏನೇ ಆಗಲಿ, ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ನಾವು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಟಾಂಗ್ ಕೊಟ್ಟರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಡಾ. ಕೆ.ಸುಧಾಕರ್‌ಗೆ (Dr. K.Sudhakar) ಟಿಕೆಟ್ ನೀಡಿರುವ ಕುರಿತು ಮಾತನಾಡಿ, ನಿನ್ನೆ ಬಿಜೆಪಿ ಲಿಸ್ಟ್ ನೋಡಿದಾಗಿನಿಂದ ಪ್ರಜಾಪ್ರಭುತ್ವ ಸಾಯುವುದಕ್ಕೆ ಮುನ್ನುಡಿ ಅಂತ ಅನಿಸಿದೆ. ಕೋವಿಡ್‌ನಲ್ಲಿ 2,200 ಕೋಟಿ ಹಗರಣದ ಆರೋಪ ನಮ್ಮ ಸರ್ಕಾರ ಮಾಡಿತ್ತು. ಯತ್ನಾಳ್ ಅವರದೇ ಪಕ್ಷದ ನಾಯಕರು 40 ಸಾವಿರ ಕೋಟಿ ಆರೋಪ ಮಾಡಿದರು. ಇವರಿಗೆ ಟಿಕೆಟ್ ಹೇಗೆ ಸಿಕ್ತು? ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸುಧಾಕರ್ ಸಹಾಯ ಮಾಡಿದ್ದಾರೆ ಯಾವ ಥರದ ಸಹಾಯ ಅಂದ್ರೆ, ಸೂರ್ಯ ನಮಸ್ಕಾರ, ಕಪಾಲಿ ಭಾತ್ ಶವಾಸನ, ದೀರ್ಘ ದಂಡ ನಮಸ್ಕಾರ ಮಾಡಿಸಿದ್ದಾರೆ ಅನಿಸುತ್ತದೆ. ಇದೆಲ್ಲ ನಾಯಕರಿಗೆ ಮಾಡಿಸಿದ್ದಕ್ಕೆ ಬಹುಶಃ ಸುಧಾಕರ್ ಗೆ ಟಿಕೆಟ್ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರೆಡ್ಡಿ ಮರಳಿದ್ದು ಬಿಜೆಪಿಗೆ ದೊಡ್ಡ ಶಕ್ತಿ – ಮೈತ್ರಿಗೆ ಗೆಲುವು ಖಚಿತ: ವಿಜಯೇಂದ್ರ
Advertisement
Advertisement
ನಾನು ನನ್ನ ಎಲ್ಲ ಆದಾಯದ ದಾಖಲೆಗಳನ್ನು ಡಿಕ್ಲೇರ್ ಮಾಡುವುದಕ್ಕೆ ರೆಡಿ. ಸುಧಾಕರ್ ಪ್ರಾಮಾಣಿಕರಾಗಿದ್ದರೆ ಅವರ ಆದಾಯದ ಮೂಲ ಬಿಡುಗಡೆ ಮಾಡುವುದಕ್ಕೆ ಸಿದ್ಧ ಇದ್ದಾರಾ? ಪಾರ್ಲಿಮೆಂಟ್ ಪವಿತ್ರವಾದ ಜಾಗ. ಆದರೆ ಹುಕ್ ಆರ್ ಕ್ರುಕ್ ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ಕೂಡ ನಾವು ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗೋದಕ್ಕಂತೂ ಬಿಡುವುದಿಲ್ಲ ಎಂದು ಸವಾಲು ಹಾಕಿದರು.
Advertisement
ಡಾ.ಕೆ ಸುಧಾಕರ್ ಒಂಥರಾ ವಿಚಿತ್ರವಾದ ರಾಜಕಾರಣಿ. ಸುಧಾಕರ್ ನನ್ನನ್ನು ಏನು ಬಿಡೋದು, ನಾನೇ ಅವರನ್ನು ಬಿಡಲ್ಲ. ಅವರು ಬಂದ್ರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಭ್ರಷ್ಟಾಚಾರ ಮಾಡಿದ್ದಾರೆ ಅಂತ ಅವರದೇ ಪಕ್ಷದವರು ಹೇಳಿದ್ದಾರೆ. ಅವರ ಅಹಂಕಾರದ ಬಗ್ಗೆ ಅವರದೇ ನಾಯಕರಿಗೆ ಅಸಮಾಧಾನ ಇದೆ. ಮೆಡಿಕಲ್ ಕಾಲೇಜ್, ಕ್ರಷರ್ ಮಾಲೀಕರಿಂದ ಕಿಕ್ ಬ್ಯಾಕ್ ಪಡೆದುಕೊಂಡ ಆರೋಪ ಇದೆ. ಅವರ ಫ್ಯಾಮಿಲಿ ಅಕೌಂಟ್, ಅವರ ಬಾಮೈದುನ ಅಕೌಂಟ್ ಹೊರಗಡೆ ಇಡುವುದಕ್ಕೆ ಸಿದ್ಧ ಇದ್ದೀರಾ? ನಾನು ನನ್ನ ಹಾಗೂ ನನ್ನ ಕುಟುಂಬದ ಅಕೌಂಟ್ ಡೀಟೈಲ್ ಮುಂದಿಡುತ್ತೇನೆ. ಐಟಿ, ಇಡಿ ಯಾವುದೇ ದಾಳಿ ಆಗಲಿ ನಾನು ಹೆದರಲ್ಲ. ಸುಧಾಕರ್ ಆರೋಗ್ಯ ಸಚಿವರಾಗಿ ಮಾಡದೇ ಇರುವ ಕೆಲಸ ನಾನು ಒಬ್ಬ ಶಾಸಕನಾಗಿ ಮಾಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಹೀನಾಯವಾಗಿ ಸೋತಿದ್ದ ಒಡೆಯರ್; ರಾಜ ಮನೆತನಕ್ಕೆ ಅಂದು ಆಗಿತ್ತು ಭಾರಿ ಮುಖಭಂಗ!
Advertisement
ಸುಧಾಕರ್ ಅವರ ಜೇಬಿನಿಂದ ಮಾಡದೇ ಇರುವ ಕೆಲಸ ನಾನು ಮಾಡಿದ್ದೇನೆ. ಯಾವುದೋ ಸೆಲೆಬ್ರಿಟಿ ಬಂದು ವೋಟು ಕೇಳಿದರೆ ಮತ ಹಾಕುವ ಕಾಲ ಹೋಯ್ತು ಸುಧಾಕರ್ ಅವರೇ. ನಾವು ಕಡ್ಲೆ ಬೀಜ ತಿನ್ತಾ ಇರ್ತೀವಾ? ಕೋವಿಡ್ ತನಿಖೆಯಿಂದ ತಪ್ಪಿಸಿಕೊಳ್ಳಲು ನೀವು ಯಾರ ಯಾರ ಕಾಲ ಕೆಳಗೆ ಬೀಳ್ತಿದ್ದೀರಾ ಗೊತ್ತಿಲ್ವಾ? ಕೋವಿಡ್ ತನಿಖೆಯಿಂದ ಕಾಪಾಡಿ ಕಾಪಾಡಿ ಅಂತ ನೀವು ಹೇಗೆಲ್ಲ ಕಾಲಿಗೆ ಬೀಳ್ತಿದ್ದೀರಿ ಗೊತ್ತಿಲ್ವಾ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಟಾರ್ಚರ್‌ನಿಂದಲೇ ನಾನು ಶಾಸಕನಾಗಿದ್ದೇನೆ. ಸುಧಾಕರ್ ಕಾಂಗ್ರೆಸ್‌ಗೆ ಥ್ರೆಟ್ ಅಲ್ಲ, ಬಿಜೆಪಿಗೆ ಥ್ರೆಟ್. ಕೋವಿಡ್ ಹಗರಣದ ಎಲ್ಲಾ ತನಿಖೆ ಆಳವಾಗಿ ನಡೆಯುತ್ತಿದೆ. ಒಂದು ಮಾಸ್ಕ್ 490 ರೂ.ಗೆ ಖರೀದಿ ಮಾಡಿ ಹಗರಣ ಮಾಡಿದ್ದಾರೆ. ಅವರದೇ ಶಾಸಕ ವಿಶ್ವನಾಥ್, ಸುಧಾಕರ್ ಪರ ಕೆಲಸ ಮಾಡಲ್ಲ ಅಂದಿದ್ದಾರೆ. ಐಟಿ, ಇಡಿ ಬಿಟ್ಟು ಕಾಟ ಕೊಡ್ತೀರಾ ಸುಧಾಕರ್ ಅವರೇ. ನಾನು ರೆಡಿ ಇದ್ದೀನಿ. ಸುಧಾಕರ್‌ಗೆ ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮಾರಕ. ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡ್ತಾರೆ. ನಾಳೆ ನಂದಿ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಯಾವುದೇ ಹಗರಣ ಮಾಡಿಲ್ಲ ಅಂತ ಪ್ರಮಾಣ ಮಾಡುವುದಕ್ಕೆ ರೆಡಿ. ಸುಧಾಕರ್ ಯಾವುದೇ ಹಗರಣ ಮಾಡಿಲ್ಲ ಅಂತ ದೇವಸ್ಥಾನದಲ್ಲಿ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಹಾಸನದಲ್ಲಿ ಯಾವುದೇ ಬಂಡಾಯ ಇಲ್ಲ, ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಸ್ವಾಗತ ಮಾಡ್ತೀನಿ: ತೇಜಸ್ವಿಸೂರ್ಯ
ಗೀತಾ ಶಿವರಾಜ್ ಕುಮಾರ್ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ನಿಮ್ಮನ್ನ ನಾಯಕ ಅಂತ ಒಪ್ಪಿಲ್ಲ. ಒಪ್ಪಿದ್ದರೆ ನಿಮಗೆ ಟಿಕೆಟ್ ಮಿಸ್ ಆಗ್ತಿರಲಿಲ್ಲ. ನಿಮ್ಮ ಪುತ್ರನಿಗೂ ಟಿಕೆಟ್ ಮಿಸ್ ಆಗ್ತಿರಲಿಲ್ಲ. ನೀವು ಗೀತಕ್ಕನ ಬಗ್ಗೆ ಮಾತನಾಡಬೇಡಿ. ಪ್ಲೀಸ್ ಬಾಯಿ ಮುಚ್ಚಿಕೊಳ್ಳಿ ಸಾರ್. ಮಾತೆತ್ತಿದ್ರೆ ಬಿಜೆಪಿಯವರು ಏನೂ ಮಾಡಿಲ್ಲ ಅಂತಾರೆ. ದೇಶಕ್ಕೆ ಐಐಟಿ ತಂದಿದ್ದು ಯಾರು? ನಿರ್ಮಲ್ ಭಾರತ್ ಯಾರು ತಂದಿದ್ದು? ರಾಜೀವ್ ಅವಾಸ್ ಯೋಜನೆ ತಂದಿದ್ದು ನಾವು. ಜನೌಷಧಿ ಕೇಂದ್ರ ತಂದಿದ್ದನ್ನ ಕಾಪಿ ಮಾಡಿದ್ರಿ. ಎಲ್ಲವೂ ನಾವು ತಂದ ಕಾರ್ಯಕ್ರಮಗಳು. 12 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಬರ ಪರಿಹಾರದ ಹಣ ನೀವು ಕೊಡ್ತಿಲ್ಲ. ಸತ್ಯ ಇಟ್ಕೊಂಡು ನೀವು ಮಾತನಾಡಿ. ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಅನಂತ್‌ಕುಮಾರ್ ಹೆಗಡೆ ಅವರನ್ನು ಚರ್ಚೆಗೆ ಕರೆದೆ. ಅವರು ಚರ್ಚೆಗೂ ಬರಲಿಲ್ಲ, ಅಭ್ಯರ್ಥಿಗಳೂ ಆಗ್ಲಿಲ್ಲ ಎಂದು ಚಾಟಿ ಬೀಸಿದರು.