ಬಿಜೆಪಿ-ಜೆಡಿಎಸ್‌ನವ್ರೂ ನಮಗೆ ವೋಟ್‌ ಹಾಕ್ತಾರೆ; ನಾವು ಸರ್ಜರಿ ಮಾಡ್ತೀವಿ: ಪ್ರದೀಪ್‌ ಈಶ್ವರ್‌

Public TV
1 Min Read
PRADEEP ESHWAR

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ನವರು ಅಡ್ಡ ಮತದಾನ ಮಾಡುತ್ತಾರೆ. ಅವರ ವೋಟು ನಮಗೆ ಬೀಳುತ್ತದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ತಿಳಿಸಿದರು.

ರಾಜ್ಯಸಭಾ ಚುನಾವಣಾ (Rajya Sabha Election) ಮತದಾನದ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದ 3 ಅಭ್ಯರ್ಥಿಗಳು ಸಹ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು: ಹೆಚ್‌ಡಿಕೆ

pradeep eshwar

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ತಾಕತ್ತು. ಆಪರೇಷನ್‌ ಅವರಲ್ಲ (ಬಿಜೆಪಿ), ನಾವು ಸರ್ಜರಿ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಕರ್ನಾಟಕದ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಅಜಯ್‌ ಮಾಕೆನ್‌, ಎನ್.ಹುಸೇನ್‌, ಚಂದ್ರಶೇಖರ್‌ ಮತ್ತು ಬಿಜೆಪಿಯಿಂದ ನಾರಾಯಣ್‌ ಸಾ.ಭಾಂಡಗೆ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಇದನ್ನೂ ಓದಿ: ಭೇಟಿಯಾಗಿ ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್

ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ಈಗ ಕಾಂಗ್ರೆಸ್‌ನಲ್ಲಿ 134, ಬಿಜೆಪಿ-66, ಜೆಡಿಎಸ್‌ನಲ್ಲಿ 19 ಮತಗಳಿವೆ. ಪಕ್ಷೇತರ-2, ಕೆಆರ್‌ಪಿಪಿ-1, ರೈತ ಸಂಘದ 1 ಮತ ಇದೆ.

Share This Article