ಚಿಕ್ಕಮಗಳೂರು: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರ ಜೊತೆ ಕಾಂಗ್ರೆಸ್ (Congress) ಶಾಸಕಿ ನಯನಾ ಮೋಟಮ್ಮ (Nayana Motamma) ಕೇಸರಿ ಶಾಲು ಧರಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಡಿಗೆರೆ ಪಟ್ಟಣದಲ್ಲಿ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶಾಸಕಿ ಭಾಗಿಯಾಗಿದ್ದರು. ಈ ವೇಳೆ, ನಾನು ಕಾಂಗ್ರೆಸ್ಸಿನಲ್ಲೇ ಇರುತ್ತೇನೋ? ಬಿಜೆಪಿಗೆ ಹೋಗ್ತೀನೋ? ಅಥವಾ ಬಿಎಸ್‌ಪಿ- ಎಸ್‌ಡಿಪಿಐಗೆ ಹೋಗ್ತೀನೋ ಎನ್ನುವ ಪ್ರಶ್ನೆಗೆ ಮೂರು ವರ್ಷ ಕಾಯೋಣ. ಆಮೇಲೆ ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖರ್ಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ ನಡ್ಡಾ ಹೇಳಿಕೆ
ನಾನು ಕೇಸರಿ ಶಾಲು ಹಾಕಿಕೊಂಡು ಇಲ್ಲಿ ಬಂದು ನಿಂತಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ. ನನ್ನ ಜೊತೆ ನಮ್ಮ ಕಾರ್ಯಕರ್ತರು ಕೂಡ ಬಂದಿದ್ದಾರೆ. ನನ್ನನ್ನು ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ದೇವರು ಮೂಡಿಗೆರೆಯಲ್ಲಿ ಹುಟ್ಟಿಸಿದ್ದಾನೆ. ನಾನು ಆ ಅಸ್ತಿತ್ವದಿಂದ ಇಲ್ಲಿಗೆ ಬಂದಿದ್ದೇನೆ. ಶಾಸಕಿ, ಪಕ್ಷ, ಪ್ರತಿನಿಧಿಸುವುದು ಆಮೇಲೆ. ನಾನು ಜವಾಬ್ದಾರಿಯುತವಾಗಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.
ಯಾರೂ ಕೂಡ ಹುಟ್ಟುವಾಗಲೇ ಇಂತಹ ಜಾತಿ-ಧರ್ಮ, ಹೆಣ್ಣು-ಗಂಡು ಎಂದು ಹುಟ್ಟಿರುವುದಿಲ್ಲ. ನದಿ ಅಂದ್ರೆ ಕಾಂಗ್ರೆಸ್, ದಡ ಅಂದ್ರೆ ಬಿಜೆಪಿನಾ ಎಂಬ ಅನುಮಾನ ಯಾರಿಗೂ ಬೇಡ ಎಂದಿದ್ದಾರೆ. ಒಟ್ಟಾರೆ ನಯನಾ ಮೊಟ್ಟಮ್ಮ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ