Chamarajanagar

Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

Published

on

Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!
Share this

ಚಾಮರಾಜನಗರ: ಸಿಎಂ ಸಂಸದೀಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಮಹಿಳಾ ಅಧಿಕಾರಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಶಾಸಕರು ಸಣ್ಣ ಸಣ್ಣ ವಿಚಾರಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿಯಾಗಿರುವ ಸರಸ್ವತಿ ಆರೋಪಿಸಿದ್ದಾರೆ.

ಶಾಸಕ ಪುಟ್ಟರಂಗೇಗೌಡ ಅಧಿಕಾರಿಯನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ನಾನು ನಿರಾಕರಿಸಿದ್ದಕ್ಕೆ ಪ್ರತಿನಿತ್ಯವೂ ಒಂದೆಲ್ಲಾ ಒಂದು ಕಾರಣ ಇಟ್ಟುಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸರಸ್ವತಿ ಹೇಳಿದ್ದಾರೆ.Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

ವರ್ಗಾವಣೆಗೆ ಒತ್ತಡ: ಮಹಿಳಾ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾಯಿಸಲು ಶಾಸಕ ಪುಟ್ಟರಂಗಶೆಟ್ಟಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ತಿರುಚುವಂತೆ ಒತ್ತಡ ಹೇರುತ್ತಿರುವ ಶಾಸಕ, ಕಾರಣವಿಲ್ಲದೇ ಮಹಿಳಾ ಅಧಿಕಾರಿ ವಿರುದ್ಧ ಕ್ಯಾತೆ ತೆಗೆಯುತ್ತಿದ್ದಾರಂತೆ. ಇದರಿಂದ ಕಾಂಗ್ರೆಸ್ ಶಾಸಕರು ಅಧಿಕಾರಿಗಳು ಮೇಲೆ ಹೇರುತ್ತಿರುವ ಕಿರುಕುಳ ಮತ್ತಷ್ಟು ಹೆಚ್ಚುತ್ತಿದೆ.

ಧ್ವನಿ ಎತ್ತಲು ಆಗುತ್ತಿಲ್ಲ: ಶಾಸಕರ ಕಿರುಕುಳದಿಂದ ರೋಸಿ ಹೋಗಿರುವ ಅಧಿಕಾರಿ ಶಾಸಕರ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ. ಒಂದು ಹಂತದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರನ್ನು ನೀಡಲು ಮುಂದಾಗಿದ್ದರು. ಆದರೆ ಮಹಿಳಾ ಅಧಿಕಾರಿ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದೆ ದೂರನ್ನು ನೀಡದೆ ಅಸಹಾಯಕಿಯಾಗಿ ಈಗ ನಿಂತಿದ್ದಾರೆ.

“ಮೆಂಟಲಿ ತುಂಬಾ ಟಾರ್ಚರ್ ಆಗ್ತಿದೆ. ಅವರು ಯಾರು ಹೇಳಿದ್ರೂ ಕೇಳುತ್ತಿಲ್ಲ. ನಾನು ಟ್ರಾನ್ಫರ್ ತಗೊಂಡು 2 ವರ್ಷ ಆಯ್ತು. ಈಗ ನನನ್ನು ಟ್ರಾನ್ಫರ್ ಮಾಡ್ತಾರೆ. ಮಧ್ಯದಲ್ಲೇ ನಾವು ಕೇಳಿದ್ರೆ ಟ್ರಾನ್ಫರ್ ಸಿಗಲ್ಲ. ಅವರು ಮಿನಿಸ್ಟರ್‍ಗೆ ಲೆಟರ್ ಕೊಟ್ಟಿದ್ದಾರೆ. ಖಾದರ್ ಸರ್‍ಗೆ ಲೆಟರ್ ಕೊಟ್ಟಿದ್ದಾರೆ. ಎಲ್ಲರಿಗೂ ಲೆಟರ್ ಕೊಟ್ಟು ನನ್ನನ್ನು ಟ್ರಾನ್ಫರ್ ಮಾಡಿಸ್ಬೇಕು ಅಂತ ಹೇಳಿದ್ದಾರೆ. ತುಂಬಾ ಟಾರ್ಚರ್ ಆಗ್ತಿದೆ. ಇದು ಈಗಿನದ್ದಲ್ಲ, ಕಳೆದ 7 ತಿಂಗಳಿಂದ ನಡೆಯುತ್ತಿದೆ”
ಸರಸ್ವತಿ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ

 

https://youtu.be/685txtxb4Bc

 

 

Click to comment

Leave a Reply

Your email address will not be published. Required fields are marked *

Advertisement
Advertisement