-ಅಧಿಕಾರಿಗಳಿಗೆ ಜನರ ಸಮಸ್ಯೆ ಅರ್ಥ ಮಾಡಿಸಿದ ಶಾಸಕರು
ರಾಯ್‍ಪುರ: ಛತ್ತೀಸ್‍ಗಢ್‍ದ ಕಾಂಗ್ರೆಸ್ ಶಾಸಕರೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಕಲುಷಿತ ನೀರು ಕುಡಿದು, ಅಧಿಕಾರಿಗೂ ಕುಡಿಸಿ ಸ್ಥಳೀಯ ಜನರ ಸಮಸ್ಯೆಯನ್ನು ಮನವರಿಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಛತ್ತೀಸ್‍ಗಢ್‍ದ ಬಸ್ತರ್ ಜಿಲ್ಲೆಯ ಚಿಂದ್ವಾರಾ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆದಿತ್ತು. ಈ ವೇಳೆ ಚಿತ್ರಕೋಟ್ ಶಾಸಕ ದೀಪಕ್ ಬೈಜ್ ಕಲುಷಿತ ನೀರು ಕುಡಿದು, ಅಧಿಕಾರಿಗೂ ಕುಡಿಸಿದ್ದಾರೆ. ನನ್ನ ಜನತೆ ಇಂತಹ ನೀರನ್ನು ಕುಡಿಯುತ್ತಿದ್ದಾರೆ. ಇದೇ ನೀರನ್ನು ಕುಡಿಯುತ್ತಾ ಸುಮಾರು ವರ್ಷಗಳಿಂದ ಕಾಲ ಕಳೆದಿದ್ದಾರೆ. ನಾನು ಇದನ್ನು ಕುಡಿಯುತ್ತೇನೆ ಎಂದು ಕುಡಿದು, ನೀವು ಕುಡಿದು ಪರೀಕ್ಷೆ ಮಾಡಿ ಎಂದು ಅಧಿಕಾರಿಗೆ ಬಾಟಲ್ ನೀಡಿದರು. ಅಧಿಕಾರಿ ನೀರು ಕುಡಿದು, ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ ಎನ್ನುತ್ತ ಸಮಸ್ಯೆಯನ್ನು ದಾಖಲಿಸಿಕೊಂಡಿದ್ದಾರೆ.
Advertisement
#WATCH: Congress MLA from Chitrakot Deepak Baij, drinks contaminated water&makes an officer drink too after reprimanding him in a public meeting in Darbha's Chindawada village after locals complained to him of contaminated water they're receiving in the area. #Chhattisgarh (31.8) pic.twitter.com/IxO30wJz4p
— ANI (@ANI) September 1, 2018
Advertisement
ಚಿಂದ್ವಾರ್ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಗ್ರಾಮದ ಬೋರ್ ನ್ನು ಅವಲಂಬಿಸಿದ್ದಾರೆ.. ಆದ್ರೆ ಬೋರ್ ನಿಂದ ಬರುವ ಕಬ್ಬಿಣ ಮಿಶ್ರಿತ ನೀರನ್ನು ಹಲವು ವರ್ಷಗಳಿಂದ ಕುಡಿಯುತ್ತಾ ಬಂದಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದ್ರೆ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿರಲಿಲ್ಲ. ಶಾಸಕರು ಬಂದಾಗ ಗ್ರಾಮಸ್ಥರು ನೀರಿನ ಗುಣಮಟ್ಟದ ಬಗ್ಗೆ ದೂರು ನೀಡಿದ್ರು. ಗ್ರಾಮಸ್ಥರು ಕುಡಿಯುವ ನೀರನ್ನೆ ಶಾಸಕರು ಕುಡಿದು, ಅಧಿಕಾರಿಗಳಿಗೂ ಕುಡಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv