ಪಾಟ್ನಾ: ಬಿಹಾರದ (Bihar) ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನದ ಮೊದಲ ದಿನದಂದು ರಾಷ್ಟ್ರಗೀತೆ ಹಾಡುವಾಗ ಕಾಂಗ್ರೆಸ್ ಶಾಸಕ ಎದ್ದು ನಿಂತು ಗೌರವ ಸೂಚಿಸಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ (BJP) ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಬಗ್ಗೆ ಅರಾರಿಯಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಅಬಿದುರ್ ರೆಹಮಾನ್ ಮಾತನಾಡಿ, ಕಾಲಿಗೆ ನೋವಿದೆ ಎಂದು ಎದ್ದು ನಿಲ್ಲಲಿಲ್ಲ ಎಂದು ಹೇಳಿದ್ದರು. ಆದರೆ ಇದಕ್ಕೆ ಬಿಜೆಪಿ ಕಿಡಿಕಾರಿದ್ದು, ಕಲಾಪ ಆರಂಭಕ್ಕೂ ಮುನ್ನ ಗಣ್ಯರ ನಿಧನಕ್ಕೆ ಸಂತಾಪ ಸೂಚಿಸುವ ವೇಳೆ ಇದೇ ಶಾಸಕ ಅಬಿದುರ್ ರೆಹಮಾನ್ 2 ನಿಮಿಷಗಳ ಕಾಲ ಎದ್ದು ನಿಂತಿದ್ದಾರೆ. ಆ ಸಮಯದಲ್ಲಿ ಕಾಲು ನೋವು ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದೆ.
ಈ ಬಗ್ಗೆ ಬಿಜೆಪಿ ಶಾಸಕ ನೀರಜ್ ಸಿಂಗ್ ಬಬ್ಲು ಮಾತನಾಡಿ, ಅಬಿದುರ್ ರೆಹಮಾನ್ ಅವರು ರಾಷ್ಟ್ರಗೀತೆಗೆ ಬೇಕೆಂದೇ ಅಪಮಾನ ಮಾಡಿದ್ದಾರೆ. ಈ ಬಗ್ಗೆ ಸ್ಪೀಕರ್ ಅವರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಮತ್ತೊಬ್ಬ ಶಾಸಕ ಪ್ರಮೋದ್ ಕುಮಾರ್ ಮಾತನಾಡಿ, ಸದನದ ಮುಕ್ತಾಯದ ವೇಳೆ ರಾಷ್ಟ್ರಗೀತೆಗಿಂತ ಹೆಚ್ಚು ಸಮಯ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಅಬಿದುರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ
ಬಿಹಾರದ ವಿಧಾನ ಸಭೆಯಲ್ಲಿ ಈ ರೀತಿಯ ವಿವಾದ ಆಗುತ್ತಿರುವುದು ಇದೇ ಮೊದಲಲ್ಲ. ಜುಲೈನಲ್ಲಿ ಆರ್‌ಜೆಡಿ ಶಾಸಕ ಸೌದ್ ಆಲಂ ವಿಧಾನಸಭೆಯಲ್ಲಿ ವಂದೇ ಮಾತರಂ ಮೊಳಗುವಾಗ ಎದ್ದು ನಿಲ್ಲಲು ನಿರಾಕರಿಸಿ ಭಾರತ ಹಿಂದೂ ರಾಷ್ಟ್ರವಲ್ಲ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆಯಾ ಪಂಚಮಸಾಲಿ ಹೋರಾಟದ ಬಿಸಿ?