BellaryDistrictsKarnatakaLatestMain Post

ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್‌ರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಹಿರಿಯ ನಾಗರಿಕ

ಬಳ್ಳಾರಿ: ರಾಜ್ಯದಲ್ಲಿ ಆರೇಳು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ (Election) ಬರಲಿದೆ ಹೀಗಾಗಿ ರಾಜಕೀಯ ಪಕ್ಷದ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ತರಾತುರಿಯಲ್ಲಿ ಅಳಿದು ಉಳಿದ ಕೆಲಸಗಳ ಕಾಮಗಾರಿಗೆ ಪ್ರಾರಂಭ ಮಾಡುತ್ತಿದ್ದಾರೆ. ಇದನ್ನು ಅರಿತು ಕಾಂಗ್ರೆಸ್ (Congress) ಶಾಸಕರಾದ ಭೀಮಾ ನಾಯ್ಕ್‌ರನ್ನು (Bheema Naik) ಬಹಿರಂಗ ಸಮಾವೇಶದಲ್ಲಿ ಹಿರಿಯ ನಾಗರಿಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಭೀಮಾ ನಾಯ್ಕ್ ಕೊಟ್ಟೂರು ತಾಲೂಕಿನಲ್ಲಿ ನೌಕರರ ಭವನ ಉದ್ಘಾಟನೆ ಮಾಡಿದ್ದಾರೆ. ಅದರ ಜೊತೆಯಲ್ಲಿ ಅನೇಕ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ಮಾಡಿದ್ದಾರೆ. ಆದರೆ ನಗರದ ಬಹುತೇಕ ಕಾಮಗಾರಿ ಆರಂಭವಾಗಿದ್ದು, ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ ಹೀಗಾಗಿ ಇದರಿಂದ ಬೇಸತ್ತು ಶಾಸಕರ ಬಹಿರಂಗ ಸಮಾವೇಶದಲ್ಲಿ ಹಿರಿಯ ನಾಗರಿಕರೊಬ್ಬರು ಶಾಸಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಅದ್ಧೂರಿ ಗಣೇಶೋತ್ಸವಕ್ಕೆ ತೆರೆ

ಕೊಟ್ಟೂರು ಹಿಂದುಳಿದ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಬೇಕು, ಆದರೆ ಶಾಸಕರಾದ ತಾವು ಕೇವಲ ಕಾಮಗಾರಿಗಳು ಗುದ್ದಲಿ ಪೂಜೆ ಮಾಡುತ್ತ ಬಂದಿದ್ದೀರಿ. ಯಾವುದೇ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಮೊದಲು ಕಾಮಗಾರಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದ್ದಾರೆ. ನೀವು ಒಂದು ವರ್ಷದಲ್ಲಿ ಯಾವೆಲ್ಲಾ ಕಾಮಗಾರಿ ಪೂರ್ಣ ಮಾಡಿದ್ದೀರಿ ಪಟ್ಟಿಕೊಡಿ ಎಂದು ಕೇಳಿದ್ದಾರೆ. ಹಿರಿಯ ನಾಗರಿಕರ ಪ್ರಶ್ನೆಗೆ ಶಾಸಕ ಭೀಮಾ ನಾಯ್ಕ್ ಕಕ್ಕಾಬಿಕ್ಕಿಯಾಗಿದ್ದಾರೆ. ಇದನ್ನೂ ಓದಿ: ಇಂದು ಬಿಜೆಪಿಯಿಂದ ಜನಸ್ಪಂದನ – ದೊಡ್ಡಬಳ್ಳಾಪುರದಲ್ಲಿ ಶಕ್ತಿ ಪ್ರದರ್ಶನ

Live Tv

Leave a Reply

Your email address will not be published.

Back to top button