ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಹೆಚ್ಚಳ ಕುರಿತು ಇಂದು ಕ್ಯಾಬಿನೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಮಧ್ಯೆ ಕಾವೇರಿದ ಚರ್ಚೆ ನಡೆದಿದೆ ಎನ್ನುವ ವಿಚಾರಗಳ ಮೂಲಗಳಿಂದ ತಿಳಿದು ಬಂದಿದೆ.
ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಮಾತ್ರ ಅಕ್ಕಿ ವಿತರಣೆ ಮಾಡಿದರೆ ಒಳಿತು ಎಂದು ಸಿಎಂ ಕುಮಾರಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಅವರ ಈ ಅಕ್ಕಿ ಪ್ರಮಾಣ ಇಳಿಕೆ ಪ್ರಸ್ತಾಪಕ್ಕೆ ಸಚಿವ ಜಮೀರ್ ಅಹಮದ್ ವಿರೋಧ ವ್ಯಕ್ತಪಡಿಸಿದರು.
Advertisement
Advertisement
ಯೋಜನೆಯ ಅಡಿ ವಿತರಣೆ ಮಾಡುವ ಅಕ್ಕಿಯನ್ನು 10 ಕೆಜಿಗೆ ಏರಿಸಲು ಸಾಧ್ಯವಾಗದಿದ್ದರೆ ಪರವಾಗಿಲ್ಲ. ಆದರೆ 5 ಕೆಜಿಗೆ ಇಳಿಸುವುದು ಬೇಡ. ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿಯನ್ನ ನೀಡುತ್ತಿದ್ದು, 7 ರಿಂದ 5 ಕೆಜೆ ಅಕ್ಕಿಗೆ ಇಳಿಸಿದರೆ ರಾಜ್ಯ ಸರ್ಕಾರ ಏನು ಕೊಟ್ಟ ಹಾಗೆ ಆಗುತ್ತದೆ ಎಂದು ಜಮೀರ್ ಅಹಮದ್ ಪ್ರಶ್ನೆ ಮಾಡಿದ್ದಾರೆ.
Advertisement
ಈ ವೇಳೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ 7 ಕೆಜಿ ಅಕ್ಕಿಯಿಂದ 10 ಕೆಜಿ ಅಕ್ಕಿಗೆ ಏರಿಕೆ ಮಾಡದೆ, 7 ಕೆಜಿ ಅಕ್ಕಿಯನ್ನೇ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.