ಬೆಂಗಳೂರು: ಸದ್ಯ ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣದ (Honey Trap) ಚರ್ಚೆ ಜೋರಾಗುತ್ತಿದ್ದಂತೆ. ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸ ಕುತೂಹಲವನ್ನು ಮೂಡಿಸಿದೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿಯಾಗಿ ಏನೆಲ್ಲ ಚರ್ಚೆ ನಡೆಸಬಹುದು ಎಂಬ ಕೌತುಕ ಹೆಚ್ಚಾಗಿದೆ.
ಈ ನಡುವೆ ಫೋನ್ ಕದ್ದಾಲಿಕೆ (Phone Tapping) ಸಂಚಲನ ಮೂಡಿಸುತ್ತಿದೆ. ಕೆಲ ಸಚಿವರು, ಶಾಸಕರಿಂದ ಫೋನ್ ಟ್ಯಾಪಿಂಗ್ ಆರೋಪ ಕೇಳಿ ಬಂದಿದೆ.
ಕಳೆದ 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಕೆಲ ಶಾಸಕರು, ಸಚಿವರಿಂದ ಮೌಖಿಕ ದೂರು ಕೊಟ್ಟಿದ್ದಾರೆ. ನಮಗೂ ಭಯ ಆಗುತ್ತದೆ. ಕರೆ ಬಂದಾಗ ಏನ್ ಮಾತಾಡೋದಕ್ಕೂ ಭಯ ಆಗ್ತಿದೆ ಎಂದು ಮೌಖಿಕವಾಗಿ ದೂರು ನೀಡಿ ಅಳಲು ತೋಡಿಕೊಂಡಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಕಿತ್ತ ಚಿರಯುವಕ – ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್ ಪುತ್ತೂರು ಯಾರು?
ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಪರಮೇಶ್ವರ್, ಫೋನ್ ಟ್ಯಾಪಿಂಗ್ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಯಾರೂ ಕೂಡ ನನ್ನನ್ನ ಸಂಪರ್ಕ ಮಾಡಿ ದೂರು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Tamil Nadu | ಕಳ್ಳತನದ ಆರೋಪ – ಸೀನಿಯರ್ ಮೇಲೆ ಜೂನಿಯರ್ಸ್ ಹಲ್ಲೆ, 13 ವಿದ್ಯಾರ್ಥಿಗಳು ಸಸ್ಪೆಂಡ್
ಸದ್ಯ ಆಡಳಿತ ಪಕ್ಷದ ಶಾಸಕರು, ಸಚಿವರಿಂದಲೇ ದೂರು ಕೇಳಿಬಂದಿರುವುದು ವಿಪಕ್ಷಗಳ ಬಾಯಿಗೆ ಆಹಾರವಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ, ಕಾಮೆಡಿಯನ್ ಇಬ್ಬರೂ ಸಂವಿಧಾನ ಓದಿಲ್ಲ – ಕಾಮ್ರಾ ವಿರುದ್ಧ ಕಾನೂನು ಕ್ರಮ: ಫಡ್ನವಿಸ್