ಬೆಂಗಳೂರು: ಸಚಿವ ಶಿವಾನಂದ ಪಾಟೀಲ್ (Shivananda Patil) ಅವರು ಹೈದರಾಬಾದ್ (Hyderabad) ಮದುವೆ ಸಂಭ್ರಮದಲ್ಲಿ ಮೋಜು-ಮಸ್ತಿ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಕಳೆದ 3 ದಿನದ ಹಿಂದೆ ಹೈದರಾಬಾದ್‍ನಲ್ಲಿ ಮದುವೆ ಸಂಭ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಚಿವರು ಕೂಡ ಭಾಗಿಯಾಗಿದ್ದರು. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಬರ, ಹನಿ ನೀರಿಗೂ ಪರದಾಡುವ ಮೂಲಕ ಜನ ಸಂಕಷ್ಟದಲ್ಲಿದ್ದರೆ ಸಚಿವರು ಮಾತ್ರ ಕಾಲ ಕೆಳಗೆ ರಾಶಿ ರಾಶಿ ಹಣ ಹಾಕಿ ಕೂತು ರಾಜರೋಷವಾಗಿ ಮೆರೆಯುತ್ತಿದ್ದಾರೆ. ಸಚಿವರ ಕಾಲಡಿಯಲ್ಲಿ ರಾಶಿ ಹಣ ಬಿದ್ದಿದ್ದರೂ ಕುಂತಲ್ಲೇ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್
ಒಟ್ಟಿನಲ್ಲಿ ಹೈದರಾಬಾದ್‍ನಲ್ಲೆ ನಡೆದ ಸ್ನೇಹಿತನ ಮಗನ ಮದುವೆ ಸಂಭ್ರಮದಲ್ಲಿ ಸಚಿವರ ಕಾರುಬಾರಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ರೈತರ ಬಗ್ಗೆ ಹೇಳಿಕೆ ನೀಡಿ ಸಚಿವರು ವಿವಾದಕ್ಕೀಡಾಗಿದ್ದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರದ ಹಣಕ್ಕಾಗಿ ಎಂದು ಹೇಳಿ ಭಾರೀ ಚರ್ಚೆಗೆ ಗುರಿಯಾಗಿದ್ದರು. ಇದೀಗ ಇದೇ ಸಚಿವರು ರಾಶಿ ರಾಶಿ ಹಣದೊಂದಿಗೆ ಆಟವಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
Web Stories