ಬೆಂಗಳೂರು: ಬಿಜೆಪಿಯವರು (BJP) ಜೈಲಿಗೆ ಹೋಗೋಕೆ ಆತುರ ಮಾಡಬಾರದು. ನಮ್ಮ ಆರೋಪಗಳು ಒಂದೊಂದೆ ಸತ್ಯ ಆಗ್ತಿದ್ದು, ಬಿಜೆಪಿ ಅವರ ಬಂಡವಾಳ ಬಯಲಾಗ್ತಿದೆ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
40% ಆರೋಪ ಸುಳ್ಳು ಎಂಬ ಲೋಕಾಯುಕ್ತ ವರದಿ (Lokayukta Report) ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಏನಾದ್ರು ಹೇಳಬಹುದು. ಲೋಕಾಯುಕ್ತದಲ್ಲಿ ಯಾವ ಪ್ರಕರಣ ದಾಖಲಾಗಿದೆ ನನಗೆ ಗೊತ್ತಿಲ್ಲ. ನಾಗಮೋಹನ್ ದಾಸ್ ಕಮಿಟಿ ಇದೆ. ಅದು ಪರಿಶೀಲನೆ ಮಾಡುತ್ತೆ ನೋಡೋಣ. ಕೋವಿಡ್ ಹಗರಣ (Covid Scam) ಆಗಿಲ್ಲ ಅಂದರು. ಕುನ್ಹಾ ವರದಿ ಚೀನಾದಿಂದ ಪಿಪಿಇ ಕಿಟ್ ಖರೀದಿ ಮಾಡಿದ್ದಾರೆ ಎಂದು ಹೇಳಿದೆ, ದೊಡ್ಡ ಅಕ್ರಮವಾಗಿದೆ. 1000% ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಹಾಗಾದ್ರೆ 1000% ಸರ್ಕಾರ ಅನ್ನೋಣವಾ? ಎಂದು ಕಿಡಿಕಾರಿದರು. ಇದನ್ನೂ ಓದಿ: ಪಿಡಿಓ ಪ್ರಶ್ನೆ ಪತ್ರಿಕೆ ಸೋರಿಕೆ? – ರಾಯಚೂರಿನಲ್ಲಿ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
ಲೋಕಾಯುಕ್ತದಲ್ಲಿ ಯಾವ ಕೇಸ್ ಅಂತ ನಮಗೆ ಗೊತ್ತಿಲ್ಲ. ಒಂದೊಂದೇ ಕೇಸ್ ತನಿಖೆ ಆಗ್ತಿದೆ. ಯಾಕೆ ಬಿಜೆಪಿ ಅವರಿಗೆ ಜೈಲಿಗೆ ಹೋಗೋಕೆ ಆತುರ. ಯಾವುದೇ ಹಗಣರ ಆಗಿಲ್ಲ ಅಂದ್ರು. ಕೋವಿಡ್, ಗಂಗಾ ಕಲ್ಯಾಣ, PSI ಕೇಸ್ ಎಲ್ಲವೂ ಒಂದೊಂದೇ ಸಾಬೀತು ಆಗ್ತಿದೆ. ನಾವು ಹೇಳಿದ ಆರೋಪವೆಲ್ಲವೂ ಒಂದೊಂದೆ ಸಾಬೀತು ಆಗ್ತಿದೆ. ಯಾಕೆ ಅಷ್ಟು ಆತುರ ಬಿಜೆಪಿ ಅವರಿಗೆ, ತನಿಖೆ ಆಲಿದೆ ಎಂದರು. ಇದನ್ನೂ ಓದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್
ನಮ್ಮ ಆರೋಪಗಳು ಒಂದೊಂದೇ ಸಾಬೀತು ಆಗ್ತಿದೆ. PSI ಹಗರಣ ಸಾಬೀತು ಆಯ್ತು, ಗಂಗಾ ಕಲ್ಯಾಣ ಅಕ್ರಮ ಆಗಿಲ್ಲ ಅಂದರು ಅರೆಸ್ಟ್ ಆಯ್ತು. ಕೊರೊನಾ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿಲ್ಲ ಅಂದ್ರು. ಈಗ ನಿತ್ಯ ಪೇಪರ್‌ಗಳಲ್ಲಿ ಹೆಡ್‌ಲೈನ್ ಬರ್ತಿದೆ. ಯಾವ ಯಾವ ರೀತಿ ಹಗರಣ ಮಾಡಿದ್ದಾರೆ ಅಂತ. ನಮ್ಮ ಸರ್ಕಾರ ಬಂದ ಮೇಲೆ ನಾವು ಜನರಿಗೆ ಅನುಕೂಲ ಆಗಲಿ ಅಂತ ಗ್ಯಾರಂಟಿ ಯೋಜನೆ ಅನುಷ್ಠಾನದ ಬಗ್ಗೆ ಗಮನ ಕೊಟ್ಟಿದ್ವಿ. ಬ್ಯುಸಿ ಆಗಿದ್ವಿ. ಆದರೆ ಬಿಜೆಪಿ ಅವರು ನಮ್ಮ ಒಳ್ಳೆ ತನವನ್ನ ಅಡ್ವಾಂಟೇಜ್ ತಗೊಂಡು ಏನು ಅಗಿಲ್ಲ ಅಂತ ಹೇಳ್ತಿದ್ದಾರೆ. ಒಂದೊಂದೇ ಎಲ್ಲಾ ಸಾಬೀತು ಆಗುತ್ತದೆ. ಬಿಜೆಪಿ ಅವರು ಆತುರ ಪಡೋದು ಬೇಡ ಅಂತ ಲೇವಡಿ ಮಾಡಿದ್ರು.
ಚರ್ಚೆ ಮಾಡಲು ಅಧಿವೇಶನ ಸರ್ಕಾರ ಕರೆಯುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಎಷ್ಟು ದಿನ ಅಧಿವೇಶನ ಮಾಡಿದ್ದಾರೆ. ಬೇಕಾದ್ರು ಅಂಕಿಅಂಶಗಳನ್ನ ತೆರೆಯಿರಿ. ಸಿದ್ದರಾಮಯ್ಯ ಹಿಂದೆ 5 ವರ್ಷ ಸಿಎಂ ಆದಾಗ ನಾವು ಎಷ್ಟು ದಿನ ಸದನ ನಡೆಸಿದ್ದೇವೆ. ಅವರು ಎಷ್ಟು ದಿನ ಸದನ ನಡೆಸಿದ್ದಾರೆ ದಾಖಲಾತಿ ತೆಗೆಯಲಿ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದರೆ ಸದನ ಮೊಟಕುಗೊಳಿಸಿರೋದು ಇದೆ. ಸದನ ನಡೆಸೋ ಜವಾಬ್ದಾರಿ ನಮಗೂ ಇದೆ. ಕೊರೊನಾದಿಂದಲೇ ಚರ್ಚೆ ಆಗಲಿ. ಮಿಕ್ಕಿದ್ದೆಲ್ಲಾ ಯಾಕೆ ಬೇಕು? ಯಡಿಯೂರಪ್ಪ ಮೇಲೆ ಪೋಕ್ಸೋ ಕೇಸ್ ನಿಂದ ಹಿಡಿದಿ ಕೊರೊನಾ ಬಗ್ಗೆ ಚರ್ಚೆ ಮಾಡಲಿ ನಾವು ರೆಡಿ ಇದ್ದೇವೆ, ಅವರು ರೆಡಿನಾ? ಅವರು ಅದರ ಬಗ್ಗೆ ಮಾತಾಡೊಲ್ಲ ಅಂತ ವಾಗ್ದಾಳಿ ನಡೆಸಿದರು.
ನಾವು ಮಾತಾಡೋದು ಬಿಡಿ ಬಿಜೆಪಿ ಶಾಸಕರೇ, ಮಾಜಿ ಕೇಂದ್ರ ಸಚಿವರೇ ವಿಜಯೇಂದ್ರ ಬಗ್ಗೆ ಮಾತಾಡ್ತಿದ್ದಾರೆ. ತಂದೆಯಂತೆ ಲೂಟಿ ಹೊಡೆಯೋಕೆ ರೆಡಿ ಆಗ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಕಾಂಗ್ರೆಸ್‌ನವರು ಅಗತ್ಯವೇ ಇಲ್ಲ ಬಿಜೆಪಿ ಅವರಿಗೆ, ಅವರಿಗೆ ಅವರೇ ಹೊಡೆದಾಡಿಕೊಂಡು ಅವರ ಪಾರ್ಟಿಯನ್ನ ನಿರ್ಣಾಮ ಮಾಡ್ತಿದ್ದಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ಮಾತಾಡಿದ್ದು ಸರಿಯಲ್ಲ- ಪ್ರಿಯಾಂಕ್ ಖರ್ಗೆ