ರಾಯಚೂರು: ನಮ್ಮ ಪಕ್ಷಕ್ಕೆ ಬರುವವರು ಬಹಳ ಜನ ಇದ್ದಾರೆ, ಆಪರೇಷನ್ ಅನ್ನೋದು ಕೆಟ್ಟ ಶಬ್ದ ದೇಶದಲ್ಲಿ ಅದನ್ನ ಮಾಡಿದ್ದು ಬಿಜೆಪಿ. ನಮ್ಮದು ಆಪರೇಷನ್ (Operation) ಅಲ್ಲ, ಕೋಆಪರೇಷನ್ ಅಂತ ಸಚಿವ ಎನ್.ಎಸ್ ಬೋಸರಾಜು (NS Boseraju) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷದ ಶಾಸಕರು ಮುಖ್ಯಮಂತ್ರಿಗಳನ್ನ ಭೇಟಿಯಾಗ್ತಿದ್ದಾರೆ. ಅದು ಅವರ ಕ್ಷೇತ್ರಗಳ ಬಗ್ಗೆಯೂ ಇದೆ, ರಾಜಕೀಯವಾಗಿಯೂ (Politics) ಭೇಟಿಯಾಗ್ತಿದ್ದಾರೆ. ಎರಡು ನಡೆಯುತ್ತಲೇ ಇರುತ್ತವೆ, ನಾವು ಏನು ಹೇಳುವಂತಹದಿಲ್ಲ. ಅದಕ್ಕೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಹಂತದಲ್ಲಿ ಎಲ್ಲವೂ ನಡೀತಿದೆ. ನಾವು ಆಪರೇಷನ್ ಅನ್ನೋ ಪದ ಬಳಸಲ್ಲ, ಅದು ಕೆಟ್ಟ ಶಬ್ದ. ಇಡೀ ದೇಶದ ಇತಿಹಾಸದಲ್ಲಿ ಆಪರೇಷನ್ ಮಾಡಿದ್ದು ಬಿಜೆಪಿ. ಆ ಕೆಟ್ಟ ಶಬ್ದ ಉಪಯೋಗ ಮಾಡೋದಕ್ಕೆ ನಮ್ಮ ಪಕ್ಷ ತಯಾರಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ 1 ಗಂಟೆಗೂ ಹೆಚ್ಚು ಕಾಲ ಮಳೆ – ರೈತರ ಮೊಗದಲ್ಲಿ ಮಂದಹಾಸ
ಬಿಜೆಪಿ ಮಧ್ಯಪ್ರದೇಶ (Madhya Pradesh), ಗೋವಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಪರೇಷನ್ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಇಲ್ಲದಿರುವ ಹಾಗೆ ಮಾಡಿದೆ. ಸಂವಿಧಾನಕ್ಕೆ ಕೆಟ್ಟ ಹೆಸರು ತಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಪಕ್ಷ ನಮ್ಮದು. ಪಕ್ಷಕ್ಕೆ ಬರುವವರು ಅನೇಕರಿದ್ದಾರೆ. ನಮ್ಮ ಪಕ್ಷದಲ್ಲಿ ಸ್ಥಳೀಯ ಪರಿಸ್ಥಿತಿ ನೋಡಿಕೊಂಡು, ಜೊತೆಗೆ ಬರುವವರಿಂದ ಸಂಘಟನೆಗೆ ಅನುಕೂಲ ಆಗುತ್ತದೆಯೇ ಅನ್ನೋದನ್ನ ನೋಡಿಕೊಂಡು ನಮ್ಮರಿಗೂ ಅದರಿಂದ ತೊಂದರೆ ಆಗದಂತೆ ಮಾಡಲಾಗುತ್ತಿದೆ. ಯಾವ ಜಿಲ್ಲೆಯಲ್ಲಿ ಕಾಂಗ್ರೆಸ್ ಸೇರಲು ಮುಖಂಡರು ಬರುತ್ತಿದ್ದಾರೋ ಆಯಾ ಜಿಲ್ಲಾ ಹಂತದಲ್ಲಿಯೇ ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಕಪಾಳಮೋಕ್ಷ – ಎಲ್ಲವನ್ನೂ ವೀಡಿಯೋ ಮಾಡಿದ್ರೆ ಶಿಕ್ಷಕರು ಪಾಠ ಕಲಿಸೋದು ಹೇಗೆ: ಶಿಕ್ಷಕಿ ಪ್ರಶ್ನೆ
ಸಿಟ್ಟಿಂಗ್ ಎಂಎಲ್‌ಎ ಮತ್ತು ಸಿಟ್ಟಿಂಗ್ ಎಂಪಿ ಅನ್ನೋರದ್ದು ರಾಜ್ಯಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಮುಖಂಡರು ಕಾಂಗ್ರೆಸ್‌ಗೆ ಬರುವವರು ಇದ್ದರೆ ಅವರಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗೆ ಅನುಕೂಲವಾದ್ರೆ, ನಿಮ್ಮ ಹಂತದಲ್ಲಿಯೇ ಮಾತನಾಡಿ ಅಂತಾ ಪಕ್ಷ ಸೂಚಿಸಿರುವುದಾಗಿ ಬೋಸರಾಜು ಹೇಳಿದ್ದಾರೆ.
Web Stories