ವಿಜಯಪುರ: ಪಾಪ ಸಿ.ಟಿ ರವಿ (CT Ravi) ಸೋತಿದ್ದಾರೆ, ಅದಕ್ಕೆ ಏನ್ ಮಾಡೋಕೆ ಆಗುತ್ತೆ? ಇನ್ನೂ ಅವರು ಸೋಲಿನಿಂದ ಹೊರಗೆ ಬಂದಿಲ್ಲ. ಅದಕ್ಕಾಗಿ ಕೈ ಶಾಸಕರು (Congress MLA) ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಅಂತಾ ಆರೋಪ ಮಾಡ್ತಿದ್ದಾರೆ. ಅವರು ನನ್ನ ಆತ್ಮೀಯ ಸ್ಮೇಹಿತರು ಸೋತಿರುವ ಮತ್ತು ಅಧಿಕಾರ ಕಳೆದುಕೊಂಡ ಮೇಲೆ ಕೆಲವರು ಅದನ್ನು ಹೇಳಲೇಬೇಕಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ವ್ಯಂಗ್ಯವಾಡಿದ್ದಾರೆ.
Advertisement
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಹೇಳಿಕೆಗೆ ಪ್ರತಿಕ್ರಿಯಿಸಿ, 136 ಸೀಟ್ ಕೊಟ್ಟು ನಮ್ಮನ್ನ ಅಧಿಕಾರಕ್ಕೆ ತಂದಿದ್ದು ಈ ರಾಜ್ಯದ ಜನತೆ. ಯಾವುದೇ ಸರ್ಕಾರ ಇರೋದು ಬಿಡೋದು ಜನತೆ ಮೇಲಿರುತ್ತದೆ. ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಅದು ಸರ್ಕಾರದ ಮೇಲೆ ಪರಿಣಾಮ ಬಿರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ – ಶಾಸಕ ಯತ್ನಾಳ್ ಭವಿಷ್ಯ
Advertisement
Advertisement
ವಿಜಯಪುರ ಮಹಾನಗರ ಪಾಲಿಕೆಗೆ ಆಯುಕ್ತರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಗೌರವಾನ್ವಿತ ಶಾಸಕರಿಗೆ (ಯತ್ನಾಳ್) ಹೇಳ್ತೆನೆ, ಮಹಾನಗರ ಪಾಲಿಕೆ ಅಧಿಕಾರಿಗಳು ಲೋವರ್ ಕೆಟಗೆರಿ ಅವರನ್ನು ನೇಮಿಸಿದ್ದಾರೆ ಎಂದು ಆರೋಪಿಸ್ತಾರೆ. ಶಾಸಕರು ಸ್ವಲ್ಪ ಹಿಂದೆ ಹೋಗಿ ನೆನಪು ಮಾಡಿಕೊಳ್ಳಲಿ. ಈ ಹಿಂದೆ ವಿಜಯಕುಮಾರ ಮೆಕ್ಕಳಕಿ ಅವರನ್ನ ಮುಂದುವರಿಸಬೇಕು ಎಂದು ಸಿಎಂಗೆ ಪತ್ರ ಕೊಟ್ಟಿದ್ದರು ಅವರೇ. ಅವರು ಯಾವ ಕೆಡರ್‌ನವರು ಇಬ್ರೂ ಸೇಮ್ ಕೆಡರ್‌ನವರೇ ಇದ್ದಾರೆ. ಮೊದಲು ಅದನ್ನ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವು
Advertisement
ಇನ್ನೂ ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಸುಪ್ರೀಂ ಮೊರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ನೀರಾವರಿ ಸಚಿವರಾಗಿದ್ದೆ. ಯಾವಾಗ ಸಂಕಷ್ಟ ಬರುತ್ತೆ, ಡಿಸ್ಟೆನ್ಸ್ ಫಾರ್ಮುಲಾ ಅಂತಾರೆ. ನಮ್ಮಲ್ಲಿ ನೀರು ಇದ್ದಾಗ ನೀರು ಹಂಚಿಕೊಳ್ತೀವಿ. ಮಳೆ ಕಡಿಮೆ ಆಗಿದೆ, ಡಿಸ್ಟೆನ್ಸ್ ಹಂಚಿಕೊಳ್ಳಬೇಕಾಗುತ್ತೆ. ನನಗೆ ಒಂದು ಮಾಹಿತಿ ಬಂದಿದೆ. ಸಿಎಂ, ಡಿಸಿಎಂ ಜೊತೆಗೆ ಮಾತನಾಡ್ತೀನಿ. ತಮಿಳುನಾಡಿನಲ್ಲಿ ಯಾವ ಯಾವ ಡ್ಯಾಂಗಳಲ್ಲಿ ಎಷ್ಟೆಷ್ಟು ನೀರು ಇದೆ ಅನ್ನೋದರ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಎಲ್ಲವನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದ್ದಾರೆ.
Web Stories