ವಿಜಯಪುರ: ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ. ನಾವು ಆಪರೇಷನ್ ಕಮಲವನ್ನೇ ವಿರೋಧ ಮಾಡಿದವರು. ಬಿಜೆಪಿ ವಿಶೇಷವಾಗಿ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು. ಅವರಾಗಿಯೇ ಬಿಜೆಪಿ (BJP) ಬಿಟ್ಟು ಬರುತ್ತಿದ್ದಾರೆ ಅವರನ್ನ ಸೇರಿಸಿಕೊಳ್ಳುತ್ತಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಟೀಕಿಸಿದ್ದಾರೆ.
ವಿಜಯಪುರದ (Vijayapura) ತಾವರಖೇಡನಲ್ಲಿ ಮಾತನಾಡಿದ ಅವರು, ಯಾವುದೇ ಕಂಡೀಷನ್ ಇಲ್ಲದೇ ಯಾರು ಸೇರುತ್ತಿದ್ದಾರೆ ಅವರನ್ನ ಸೇರಿಸಿಕೊಳ್ಳುತ್ತಿದ್ದೇವೆ. ಬರುವವರಿಗೆ ನಾವು ಬೇಡ ಅನ್ನೋದಕ್ಕೆ ಆಗಲ್ಲ. ನಾವಾಗಿಯೇ ಏನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ
Advertisement
Advertisement
ಸಾಹಿತಿಗಳಿಗೆ ಜೀವ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನೇಕ ಸಾಹಿತಿಗಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಲ್ಲಿ ಅವರಿಗೆ ಹಕ್ಕು ಕೊಟ್ಟಿದೆ. ಆ ಟೀಕೆ, ಟಿಪ್ಪಣಿಗಳಿಗೆ ಬೇಕಿದ್ರೆ ಉತ್ತರ ಕೊಡಬಹುದು. ಅವರಿಗೆ ಆದ ಪ್ಲಾಟ್ ಫಾರಂ ಇರುತ್ತೆ ಅಲ್ಲಿ ಅದಕ್ಕೆ ಭಿನ್ನಾಭಿಪ್ರಾಯ, ಪ್ರತ್ಯುತ್ತರ ಕೊಡಬಹುದು. ಆದ್ರೆ ಯಾರೋ ಒಬ್ಬ ವ್ಯಕ್ತಿ ಹತ್ಯೆ ವರೆಗೆ ಹೋಗುತ್ತಲ್ಲ ಅದು ಕಟ್ಟದಾದಂತಹದು. ಅವರು ಸಿಎಂ ಅವರನ್ನ ಭೇಟಿ ಮಾಡಿ ರಕ್ಷಣೆ ಕೇಳಿದ್ದಾರೆ. ಅವರಿಗೆ ಸೂಕ್ತ ರಕ್ಷಣೆ ಕೊಡ್ತೆವೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದ ‘ವೃಷಭ’: ಮೋಹನ್ ಲಾಲ್ ಸಿನಿಮಾ
Advertisement
Web Stories