ಬೆಂಗಳೂರು: ನಬಾರ್ಡ್‌ನಿಂದ ಈ ಬಾರಿ ರಾಜ್ಯಕ್ಕೆ ಕಡಿಮೆ ಹಣಕಾಸು ನೆರವು ಸಿಕ್ಕಿದೆ ಅಂತ ಸಹಕಾರ ಸಚಿವ ರಾಜಣ್ಣ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಇದನ್ನೂ ಓದಿ: ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ – ಮಾ.15ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ
ನಬಾರ್ಡ್ ಸಂಸ್ಥೆ ಈ ವರ್ಷ ರಾಜ್ಯಕ್ಕೆ ಕಡಿಮೆ ಹಣಕಾಸು ನೆರವು ನೀಡಿದೆ. 2023-24 ರಲ್ಲಿ 5,600 ಕೋಟಿ ಹಣಕಾಸು ನೆರವು ಕೊಟ್ಟಿತ್ತು. 2024-25 ರಲ್ಲಿ 2,340 ಕೋಟಿ ಮಾತ್ರ ನಬಾರ್ಡ್ ಹಣಕಾಸು ನೆರವು ಕೊಟ್ಟಿದೆ. 2023-24 ನೇ ಸಾಲಿಗೆ ಹೋಲಿಕೆ ಮಾಡಿದ್ರೆ 58% ಕಡಿಮೆ ಹಣಕಾಸು ನೆರವು ನಬಾರ್ಡ್ ಕೊಟ್ಟಿದೆ ಅಂತ ಮಾಹಿತಿ ನೀಡಿದ್ರು. ಇದನ್ನೂ ಓದಿ: `ದೃಶ್ಯಂ’ ಸಿನಿಮಾ ಶೈಲಿಯಲ್ಲಿ ಮಹಿಳೆ ಕೊಲೆ ಮಾಡಿ ಸಾಕ್ಷ್ಯ ನಾಶ – 4 ತಿಂಗಳ ಬಳಿಕ ಆರೋಪಿ ಅರೆಸ್ಟ್
ಕಡಿಮೆ ಹಣ ಕೊಟ್ಟ ಹಿನ್ನೆಲೆಯಲ್ಲಿ ಸಿಎಂ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಾನು ಕೂಡಾ ಬಿಜೆಪಿ ಎಂಪಿಗಳಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಬಳಿಕ ನಬಾರ್ಡ್ 896 ಕೋಟಿ ಬಿಡುಗಡೆ ಮಾಡಿದೆ. ಇದೂ ಕೂಡಾ ಸಾಕಾಗಿಲ್ಲ.ಹೀಗಾಗಿ ಮತ್ತೆ ಬೇಡಿಕೆ ಸಲ್ಲಿಸಲಾಗಿದೆ. ನಮ್ಮ ಬೇಡಿಕೆ 9119 ಕೋಟಿ ಇದೆ. ಆದರೆ ನಬಾರ್ಡ್ ಈ ಬಾರಿ 2,340 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಇದರಿಂದ ರೈತರಿಗೆ ಸಾಲ ಕೊಡಲು ಆಗ್ತಿಲ್ಲ. ಕೇಂದ್ರ ಅನುದಾನದ ಲಭ್ಯತೆ ನೋಡಿಕೊಂಡು ಸಾಲ ನೀಡುವ ಕೆಲಸ ಮಾಡುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರೋಧಿಸಿ ರೈತರ ಸಭೆ – ಬೃಹತ್ ಪಾದಯಾತ್ರೆಗೆ ನಿರ್ಧಾರ