ದಾವಣಗೆರೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದಿದ್ದ ಯೋಧರೊಬ್ಬರ ಕುಟುಂಬವನ್ನು ಕಾಂಗ್ರೆಸ್ ಕಾರ್ಯಕರ್ತರು ಹೊರಗೆ ನಿಲ್ಲಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹುತಾತ್ಮ ಯೋಧ ಜಾವೀದ್ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಹರಿಹರ ತಾಲೂಕಿನವರು. ಮಂಗಳವಾರ ಜಾವೀದ್ ಅವರ ಕುಟುಂಬವನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಸಾಂತ್ವಾನ ಹೇಳಿದ್ದರು. ಅಷ್ಟೇ ಅಲ್ಲದೇ ಇಂದು ಭೇಟಿಯಾಗುವಂತೆ ಕೂಡ ಹೇಳಿದ್ದರು.
ಹೀಗಾಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದ ಯೋಧರ ಕುಟುಂಬಸ್ಥರಿಗೆ ಪೊಲೀಸ್ ಅಧಿಕಾರಿಗಳು ಭೇಟಿಯಾಗಲು ಪಾಸ್ ಕೇಳುತ್ತಿದ್ದು, ಇಬ್ಬರು ಪುಟ್ಟ ಮಕ್ಕಳು ಜೊತೆ ಯೋಧ ಜಾವೀದ್ ಅವರ ಮಡದಿ ಹಾಗೂ ಕುಟುಂಬಸ್ಥರು ರಾಗಾ ಭೇಟಿಗೆಂದು ಒಂದು ಗಂಟೆಯಿಂದ ಕಾಯುತ್ತಿದ್ದಾರೆ.
ರಾಹುಲ್ ಗಾಂಧಿ ಯೋಧರ ಕುಟುಂಬವನ್ನು ಇಂದು ತಮ್ಮ ಗೆಸ್ಟ್ ಹೌಸ್‍ಗೆ ಬಂದು ಭೇಟಿಯಾಗುವಂತೆ ಹೇಳಿದ್ದರು. ಅಲ್ಲಿದ್ದ ಸಿಬ್ಬಂದಿ ಯೋಧ ಜಾವೀದ್ ಅವರ ಕುಟುಂಬಕ್ಕೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡಲಿಲ್ಲ. ಬೆಳಗ್ಗೆನೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದಿದ್ದರೂ, ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಜಾವೀದ್ ಅವರ ಕುಟುಂಬದವರು ಕಾದುಕಾದು ವಾಪಸ್ಸಾಗಿದ್ದಾರೆ.
ರಾಜಸ್ಥಾನದ ಪೋಖ್ರಾನ್‍ನಲ್ಲಿ ಯೋಧ ಜಾವೀದ್ ಹುತಾತ್ಮರಾಗಿದ್ದರು.