ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ (Mid Day Meal) ತಯಾರು ಮಾಡಲು ಅಡುಗೆ ಎಣ್ಣೆ ಮತ್ತು ಬೇಳೆಯನ್ನ ಸರ್ಕಾರ 3 ತಿಂಗಳಿಂದ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಅರೋಪ ಮಾಡಿದ ಘಟನೆ ನಡೆಯಿತು. ಅಲ್ಲದೇ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಕೊಡುತ್ತಿರುವ ಮೊಟ್ಟೆ ಖರೀದಿಗೆ ನಿಗದಿ ಮಾಡಿರುವ ಹಣವನ್ನ ಜಾಸ್ತಿ ಮಾಡುವಂತೆ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಒತ್ತಾಯ ಮಾಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಅಡುಗೆ ಮಾಡಲು ಸರ್ಕಾರ ಎಣ್ಣೆ ಮತ್ತು ಬೇಳೆಕಾಳು ಅಡ್ವಾನ್ಸ್ ಆಗಿ ಕೊಡುತ್ತಿಲ್ಲ. 2-3 ತಿಂಗಳಿಗೊಮ್ಮೆ ಎಣ್ಣೆ ಕೊಡುತ್ತಾರೆ. ಡಿಸೆಂಬರ್‌ನಿಂದ ಈವರೆಗೂ ಎಣ್ಣೆ ಕೊಟ್ಟೇ ಇಲ್ಲ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು. ಸರ್ಕಾರ ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೊಡುತ್ತಿದೆ. ಒಂದು ಮೊಟ್ಟೆಗೆ 5 ರೂಪಾಯಿ ಸರ್ಕಾರ ಕೊಡುತ್ತಿದೆ. ಮೊಟ್ಟೆಗೆ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ. ಮೊಟ್ಟೆಗೆ ಕೊಡುತ್ತಿರುವ ಹಣ ಜಾಸ್ತಿ ಮಾಡಬೇಕು. ಅಡುಗೆ ಮಾಡುವ ಸಿಬ್ಬಂದಿಗೆ ಸಂಬಳ ಜಾಸ್ತಿ ಮಾಡಬೇಕು ಮತ್ತು ಪ್ರಥಮ-ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಬಾಲ್ಯವಿವಾಹ, ಅಪ್ರಾಪ್ತ ಬಾಲಕಿ ನಿಶ್ಚಿತಾರ್ಥಕ್ಕೆ ತಡೆ
ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರಿಸಿ, ಕೇಂದ್ರ ಸರ್ಕಾರದ ನಿಯಮದಂತೆ ಅಡುಗೆ ಮಾಡುವ ಸಿಬ್ಬಂದಿಗಳಿಗೆ ಸಂಬಳ ಕೊಡುತ್ತಿದ್ದೇವೆ. ಕೇಂದ್ರ ಜಾಸ್ತಿ ಮಾಡಿದರೆ ನಾವು ಜಾಸ್ತಿ ಮಾಡುತ್ತೇವೆ. ಅಡುಗೆ ಸಿಬ್ಬಂದಿಗೆ ಮೊನ್ನೆ ಮಂಡನೆಯಾದ ಬಜೆಟ್‌ನಲ್ಲಿ 1 ಸಾವಿರ ಸಂಬಳ ಜಾಸ್ತಿ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರ ಸಂಬಳ ಜಾಸ್ತಿ ಕೊಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್
ಮೊಟ್ಟೆಗೆ ಹಣ ಜಾಸ್ತಿ ಕೊಡುವ ಬಗ್ಗೆ ಅರ್ಥಿಕ ಇಲಾಖೆ ಜೊತೆ ಚರ್ಚೆ ಮಾಡುತ್ತೇನೆ. 4.5 ರೂಪಾಯಿಗೆ ಮೊಟ್ಟೆ ಸಿಗುವ ಉದಾಹರಣೆ ಇದೆ. ಆದರೂ ಜಾಸ್ತಿ ಹಣ ಕೊಡುವ ಬಗ್ಗೆ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ನ್ಯಾಷನಲ್ ಮಾರ್ಕೆಟ್ ನಲ್ಲಿ 4.70 ಪೈಸೆ ಇದೆ. ಆದರು ಮೊಟ್ಟೆ ಹಣ ಜಾಸ್ತಿ ಮಾಡೋ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಈಗಲೂ ರಶ್ಮಿಕಾ ಕರ್ನಾಟಕದ ಪರ ಇದ್ದೀನಿ ಅಂದ್ರೆ ನಾನು ತುಟಿ ಬಿಚ್ಚಲ್ಲ: ಶಾಸಕ ರವಿ ಗಣಿಗ ಕಿಡಿ
ಅಡುಗೆ ಎಣ್ಣೆ ಮತ್ತು ಬೇಳೆ ಸರಬರಾಜು ತಡ ಆಗಿದ್ದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತೇವೆ. ಶಾಲಾ ಮಕ್ಕಳಿಗೆ ಈಗ ಮೊಟ್ಟೆ, ಬಾಳೆಹಣ್ಣು ಕೊಡುತ್ತಿದ್ದೇವೆ. ಚಿಕ್ಕಿ ಕೋಡೋದನ್ನ ಈಗ ನಿಲ್ಲಿಸಲಾಗಿದೆ. ಪಿಯುಸಿ ಮಕ್ಕಳಿಗೆ ಬಿಸಿಯೂಟ ಕೊಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈ ಬಗ್ಗೆ ಸಿಎಂ ಅವರನ್ನು ಮನವಿ ಮಾಡೋಣ ಎಂದು ಹೇಳಿದರು. ಇದನ್ನೂ ಓದಿ: ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಮುನಿಯಪ್ಪ