ಬೆಂಗಳೂರು: `ಪೇ ಸಿಎಂ’ (PayCM) ಅಭಿಯಾನ ಯಶಸ್ವಿಯಾದ ಕೂಡಲೇ ಕಾಂಗ್ರೆಸ್ (Congress) ಮತ್ತೆ ಅಖಾಡಕ್ಕೆ ಇಳಿದಿದೆ. ಪೇ ಸಿಎಂ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಅನ್ನೋ ನಿರ್ಧಾರವನ್ನ ತೆಗೆದುಕೊಂಡಿದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಬಳಿಕ ತಾಲೂಕು (Taluk), ಬೂತ್, ಗ್ರಾಮ ಪಂಚಾಯತಿ (Gram Panchayat) ಮಟ್ಟದಲ್ಲೂ ಅಭಿಯಾನ ಶುರು ಮಾಡೋದಕ್ಕೆ ಪ್ಲ್ಯಾನ್ ಮಾಡಿದೆ.
Advertisement
ಪ್ರತಿ ಗ್ರಾಮ ಪಂಚಾಯತಿ ಮಟ್ಟ ಹಾಗೂ ಬೂತ್ ಮಟ್ಟದಲ್ಲೂ (Boot Level) ಪೇ ಸಿಎಂ ಅಭಿಯಾನ (PayCm Campain) ಆಗಬೇಕು. ಅಂತ ಗ್ರಾಮ ಪಂಚಾಯಿತಿ. ಮತ್ತು ಬೂತ್ ಮಟ್ಟದ ಕಾರ್ಯಕರ್ತರಿಗೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಟಾರ್ಗೆಟ್ ನೀಡಿದ್ದಾರೆ ಎನ್ನಲಾಗಿದೆ. ಟಾರ್ಗೆಟ್ ರೀಚ್ ಆಗಲೇಬೇಕು ಅಂತ ಲಿಖಿತ ಆದೇಶ ಹೊರಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ
Advertisement
Advertisement
ಪೇ ಸಿಎಂ ಅಭಿಯಾನ ಪ್ರತಿ ಗ್ರಾಮ ಪಂಚಾಯತಿ ಮತ್ತು ಬೂತ್ ಮಟ್ಟದಲ್ಲಿ ಪ್ರಚಾರ ಆಗಬೇಕು. ಭಾರತ್ ಜೋಡೋ (Bharat Jodo) ಜೊತೆ-ಜೊತೆಗೆ ಪೇ ಸಿಎಂ ಅಭಿಯಾನ ಸಹ ನಡೆಸಬೇಕು. ಭಾರತ್ ಜೋಡೋ ರ‍್ಯಾಲಿಯ ವೇಳೆ ಪೇ ಸಿಎಂ ಅಭಿಯಾನ ಮತ್ತಷ್ಟು ಯಶಸ್ವಿ ಮಾಡಬೇಕು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಚಿತ್ರಕ್ಕೆ ಹಣ ಹೂಡುತ್ತಾ ಹೊಂಬಾಳೆ ಫಿಲ್ಮ್ಸ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಗುಸುಗುಸು
Advertisement
ಗ್ರಾಮಗಳಲ್ಲಿರುವ ಪಕ್ಷದ ಅಧ್ಯಕ್ಷರು, ಬೂತ್ ಅಧ್ಯಕ್ಷರು ಅಭಿಯಾನ ಮಾಡಬೇಕು. ಪ್ರತಿಯೊಬ್ಬರ ಬಾಯಲ್ಲಿ ಪೇ ಸಿಎಂ ಮಾತು ಉಳಿಯಬೇಕು. ಎಲ್ಲಾ ಜನರಿಗೂ 40 ಪರ್ಸೆಂಟ್ ಭ್ರಷ್ಟಾಚಾರ ಪೇ ಸಿಎಂ ಅಭಿಯಾನ ಮುಟ್ಟಬೇಕು. ಗ್ರಾಮಗಳಲ್ಲಿ ಗೋಡೆಗಳು, ಸಾರ್ವಜನಿಕ ಜಾಗದಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಬೇಕು. ಪೇ ಸಿಎಂ ಪೋಸ್ಟರ್ ಮೂಲಕ ಸರ್ಕಾರದ ವಿರುದ್ಧ ಜನಾಂದೋಲನ ನಡೆಸಬೇಕು. ಪೇ ಸಿಎಂ ಪೋಸ್ಟರ್‌ಗಳು ಅಗತ್ಯ ಇದ್ದರೇ ಪ್ರತಿ ಗ್ರಾಮಗಳಿಗೂ ಪೋಸ್ಟರ್‌ಗಳನ್ನ ರಾಜ್ಯ ಕಚೇರಿಯಿಂದ ಕಳಿಸಿಕೊಡಲಾಗುತ್ತದೆ ಅಂತಾ ಸಂದೇಶ ರವಾನೆ ಮಾಡಲಾಗಿದೆ.