ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

Public TV
2 Min Read
Mallikarjun Kharge 1

– ಪುಷ್ಪಾ ಸ್ಟೈಲ್‌ನಲ್ಲಿ ತಗ್ಗೋದೇ ಇಲ್ಲ ಎಂದ ಖರ್ಗೆ
– ಶಿಸ್ತು ಸಮಿತಿಯ ಪರಿಶೀಲನೆಗೆ ನೀಡಿದ ಧನಕರ್

ನವದೆಹಲಿ: ವಕ್ಫ್ ಬಿಲ್ ಮಂಡನೆಗೆ ಮುನ್ನವೇ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗರಂ ಆದ ಪ್ರಸಂಗ ನಡೆಯಿತು. ವಕ್ಫ್ ಭೂಮಿ ಕಬ್ಜಾ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಅನುರಾಗ್ ಠಾಕೂರ್ (Anurag Thakur) ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ರು. ಇಂತಹ ರಾಜಕೀಯ ದಾಳಿಗಳಿಗೆ ನಾನು ಬೆದರುವ ಮಾತೇ ಇಲ್ಲ ಎಂದು ಪುಷ್ಪಾ ಸಿನಿಮಾ ಶೈಲಿಯಲ್ಲಿ ಅಬ್ಬರಿಸಿದ್ರು.

Anurag Thakur

ಅನುರಾಗ್ ಠಾಕೂರ್ ಅರೋಪಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಆಸ್ತಿ (Waqf  Property) ಕಬಳಿಕೆ ಆರೋಪಕ್ಕೆ ತಿರುಗೇಟು ನೀಡಿದರು. ನನ್ನ ಜೀವನ ತೆರದ ಪುಸ್ತಕ, ಜೀವನದಲ್ಲಿ ಕಷ್ಟ ಮತ್ತು ಹೋರಾಟವಿದೆ. ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. 60 ವರ್ಷ ರಾಜಕೀಯದಲ್ಲಿ ಇದನ್ನು ಬಯಸಿರಲಿಲ್ಲ. ಇಂತಹ ಆಧಾರ ರಹಿತ ಆರೋಪ ನಿರೀಕ್ಷಿಸರಲಿಲ್ಲ. ಅನುರಾಗ್ ಠಾಕೂರ್ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಅದನ್ನು ನಮ್ಮ ಸಂಸದರು ವಿರೋಧಿಸಿದ ಬಳಿಕ ಈ ಹೇಳಿಕೆ ವಾಪಸ್ ಪಡೆದುಕೊಂಡಿದ್ದಾರೆ. ಆದರೆ ಡ್ಯಾಮೇಜ್ ಆಗಿ ಹೋಗಿದೆ, ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ನನ್ನ ಚಾರಿತ್ರ‍್ಯ ಮತ್ತು ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ವಕ್ಫ್‌ ಮಸೂದೆ | ದಾನದ ಆಸ್ತಿ ದುರ್ಬಳಕೆಯಾಗದಂತೆ ತಡೆಯಲು ಮೋದಿ ಮುಂದಾಗಿದ್ದಾರೆ: ಹೆಚ್‌ಡಿಡಿ

ದೇವೇಗೌಡರು ಇದನ್ನು ಕೇಳಿಸಿಕೊಳ್ಳಬೇಕು. ಅವರ 50 ವರ್ಷದಿಂದ ನೋಡಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷನಾಗಿ ನಾನು ಒತ್ತಾಯ ಪೂರ್ವಕವಾಗಿ ಎದ್ದು ನಿಲ್ಲಬೇಕಿದೆ. ಅನುರಾಗ್ ಠಾಕೂರ್ ಹೇಳಿಕೆಯನ್ನು ವಿರೋಧಿಸಬೇಕಿದೆ, ಠಾಕೂರ್ ಈ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೇ ಅವರು ರಾಜೀನಾಮೆ ನೀಡಬೇಕು. ಅವರು ಸಾಬೀತರಾದರೇ ನಾನು ರಾಜೀನಾಮೆ ನೀಡುತ್ತೇನೆ. ನಾನು ಇಂತಹ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಸಿದ್ರು.  ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

ನಾನು ಕಾರ್ಮಿಕನ ಮಗ, ಕಾರ್ಮಿಕ ನಾಯಕ, ಅಲ್ಲಿಂದ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ದೇವೇಗೌಡರಿಗೆ ಎಲ್ಲವೂ ಗೊತ್ತಿದೆ. ವಿಧಾನಸಭೆಯಲ್ಲಿ ಯಾರು ನನಗೆ ಬೆರಳು ಎತ್ತಿ ಮಾಡನಾಡಿಲ್ಲ. ಈ ಬಿಜೆಪಿ ನಾಯಕರು ಬೆದರಿಕೆ ಬಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಒಡೆದು ಹೊಗ್ತಿನಿ, ಬಗ್ಗುವುದಿಲ್ಲ, ನಾನು ಒಂದಿಂಚು ಭೂಮಿ ಕಬಳಿಸಿಲ್ಲ, ಅನುರಾಗ್ ಠಾಕೂರ್ ಕ್ಷಮೆ ಕೇಳಲೇಬೇಕು ಎಂದು ಒತ್ತಾಯಿಸಿದರು. ಬಳಿಕ ಈ ಚರ್ಚೆಯನ್ನು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್‌ ಶಿಸ್ತು ಸಮಿತಿಯ ಪರಿಶೀಲನೆಗೆ ನೀಡಿದರು.  ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

Share This Article