ಬೆಂಗಳೂರು: ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ.
ನಿರ್ಣಯದ ಪರವಾಗಿ 36 ಮತಗಳು ಬಿದ್ದಿದ್ದರೆ, ನಿರ್ಣಯದ ವಿರುದ್ಧವಾಗಿ 37 ಮತಗಳು ಬಿದ್ದ ಪರಿಣಾಮ ಸಭಾಪತಿ ವಿರುದ್ಧ ಕಾಂಗ್ರೆಸ್‍ನ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ. ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್ ಬೆಂಬಲಿಸದ ಕಾರಣ ಶಂಕರಮೂರ್ತಿ ಸಭಾಪತಿಗಳಾಗಿ ಮುಂದುವರೆಯಲಿದ್ದಾರೆ.
Advertisement
ಬಿಜೆಪಿಗೆ ಬೆಂಬಲ ಘೋಷಿಸಿ ಮಾತಾಡಿದ ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಪಕ್ಷದವರು ಹುಡುಗಾಟ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ವಾರದ ಮೊದಲೇ ನಮ್ಮ ಜೊತೆ ಚರ್ಚೆ ಮಾಡಿದ್ದರೆ ಒಳ್ಳೆಯದಿತ್ತು. ಅದು ಬಿಟ್ಟು ಈಗ ಹೇಳಿ ಗೊಂದಲ ಹುಟ್ಟು ಹಾಕುವ ಪ್ರಯತ್ನ ಮಾಡಿದ್ದಾರೆ. ಬಸವರಾಜ್ ಹೊರಟ್ಟಿಗೆ 2 ತಿಂಗಳ ನಂತರ ಸಭಾಪತಿ ಸ್ಥಾನ ಕೊಡುವ ವಿಚಾರವನ್ನು ನಾವು ಪ್ರಸ್ತಾಪ ಮಾಡಿದ್ದೇವೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ. ಜೊತೆಗೆ ಈ ಮೈತ್ರಿ ಸಭಾಪತಿ ವಿಚಾರಕ್ಕೆ ಮಾತ್ರ ಸೀಮಿತ ಅಂತಾನು ಸ್ಪಷ್ಟಪಡಿಸಿದರು.
Advertisement
ಯಾವುದೇ ಆರೋಪ ಇಲ್ಲದೇ ಇದ್ದರೂ ಆಡಳಿತ ಪಕ್ಷದವರು ಪರಿಷತ್ ಸಭಾಪತಿ ಆಗಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದರು.
Advertisement
Advertisement
Congratulations to Shri. D H Shankarmurthy for winning no confidence motion moved by Congress,to continue as Chairman of legislative council
— B.S.Yediyurappa (@BSYBJP) June 15, 2017