ನವದೆಹಲಿ: ಕಾಂಗ್ರೆಸ್ ಪಕ್ಷ ಕೂಡ ಲೋಕಸಮರಕ್ಕೆ (Loksabha Election) ಭರ್ಜರಿ ತಯಾರಿ ನಡೆಸ್ತಿದೆ. ಟಿಕೆಟ್ ಪಟ್ಟಿ (Congress List) ಅಂತಿಮಗೊಳಿಸುವ ಸಂಬಂಧ ಗುರುವಾರ ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಸಿಇಸಿ ಸಭೆ ನಡೆಯಲಿದೆ.
ಸಿಎಂ-ಡಿಸಿಎಂ ಸೇರಿ ಹಲವರು ಭಾಗವಹಿಸಲಿದ್ದಾರೆ. ಕೆಪಿಸಿಸಿ ಈಗಾಗಲೇ ಗೊಂದಲ ಇಲ್ಲದ ಕ್ಷೇತ್ರಗಳಿಗೆ ಒಂದೊಂದು ಹೆಸರನ್ನು ರವಾನಿಸಿದೆ. ಕೆಲವೊಂದು ಕ್ಷೇತ್ರಗಳಿಗೆ ಇಬ್ಬರು ಸಂಭಾವ್ಯರ ಹೆಸರನ್ನು ಶಿಫಾರಸು ಮಾಡಿದೆ. ಈ ಮಧ್ಯೆ ಮಂಡ್ಯದಲ್ಲಿ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಲು ಮುಂದಾಗಿರೋದ್ರಿಂದ ಟಿಕೆಟ್ ಆಕಾಂಕ್ಷಿ ಡಾ. ರವೀಂದ್ರ, ಕೆಪಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಲ್ಲಿ ದುಡ್ಡು ಇರೋರಿಗೆ ಮಣೆ ಹಾಕಲಾಗ್ತಿದೆ ಅಂತ ದೂರಿದ್ದಾರೆ.
ಇತ್ತ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಮುಂದಾಗಿದೆ. ಶೀಘ್ರವೇ ಎಸ್‍ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಹಲವರು ಕಾಂಗ್ರೆಸ್ ಸೇರುವ ಸುಳಿವನ್ನು ಸಿಎಂ-ಡಿಸಿಎಂ ನೀಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿಯಾಗೋದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ್ಲೇ ವಿರೋಧ ವ್ಯಕ್ತವಾಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಗೋಬ್ಯಾಕ್ ಚಳವಳಿ ಆರಂಭವಾಗಿದೆ. ಇದನ್ನೂ ಓದಿ; ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ