ಮುಂಬೈ: ಕಳೆದ ಕೆಲ ತಿಂಗಳಿಂದ ದೇಶದ ಜಾನುವಾರುಗಳನ್ನು ಲಂಪಿ ವೈರಸ್(Lumpy Virus) ಇನ್ನಿಲ್ಲದಂತೆ ಕಾಡುತ್ತಿದೆ. ಈ ಚರ್ಮ ರೋಗದ ಕುರಿತಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ(Nana Patole) ಹೇಳಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದೆ.
ನೈಜೀರಿಯಾದಿಂದ ತರಲಾದ ಚೀತಾಗಳಿಂದಾಗಿಯೇ(Nigerian’ Cheetahs) ದೇಶಾದ್ಯಂತ ಲಂಪಿ ವೈರಸ್ ಹಬ್ಬುತ್ತಿದ್ದು, ಸಾವಿರಾರು ಪಶುಗಳು ಸಾವನ್ನಪ್ಪುತ್ತಿವೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ದೇಶದ ರೈತರಿಗೆ ನಷ್ಟ ಉಂಟು ಮಾಡಬೇಕೆಂಬ ದುರುದ್ದೇಶದಿಂದಲೇ ಈ ಚೀತಾಗಳನ್ನು ಕೇಂದ್ರ ಸರ್ಕಾರ ಭಾರತಕ್ಕೆ ತಂದಿದೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಾರೆ.
Advertisement
Cheetahs were brought to India from Namibia, and not Nigeria @NANA_PATOLE Ji ???? https://t.co/Jvv66s0MBG
— Jyotiraditya M. Scindia (@JM_Scindia) October 3, 2022
Advertisement
ಈ ಹೇಳಿಕೆಯ ಬೆನಲ್ಲೇ ನಾನಾ ಪಾಟೋಲೆ ಮೇಲೆ ಬಿಜೆಪಿ ಮುಗಿಬಿದ್ದಿದೆ. ನಾನಾ ಪಾಟೋಲೆಗೆ ಕನಿಷ್ಠ ನೈಜೀರಿಯಾ ಮತ್ತು ನಮೀಬಿಯಾಗೆ ಇರುವ ವ್ಯತ್ಯಾಸ ಕೂಡ ಗೊತ್ತಿಲ್ಲ. ಅವರು ಮಹಾರಾಷ್ಟ್ರದ ರಾಹುಲ್ ಗಾಂಧಿ ಇದ್ದಂತೆ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ – ಪಕ್ಷಗಳಿಗೆ ಶಾಕ್, ಆಯೋಗದ ನಿರ್ಧಾರಕ್ಕೆ ವಿಪಕ್ಷಗಳು ಕಿಡಿ
Advertisement
ಸುಳ್ಳು ಸುದ್ದಿ, ತಪ್ಪು ತಪ್ಪಾಗಿ ಅಪಪ್ರಚಾರ ಮಾಡುವುದು ಕಾಂಗ್ರೆಸ್‍ಗೆ ಹೊಸದಲ್ಲ. ಕೋವಿಡ್ ಸಮಯದಲ್ಲೂ ಹೀಗೆ ಮಾಡಿತ್ತು ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಸುಳ್ಳು ಸುದ್ದಿ ಹಬ್ಬಿಸುವ ಇಂಥವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತಾ ಎಂದು ಸವಾಲು ಹಾಕಿದೆ.
Advertisement
Huge difference between Nigeria and Namibia.
But no difference between Nana Patole and Rahul Gandhi when it comes to the understanding of key issues. https://t.co/1IJ3b54cPf
— Bhupender Yadav (@byadavbjp) October 4, 2022
ಬಿಜೆಪಿ ಶಾಸಕ ರಾಮ್ ಕದಮ್ ಅವರು, ಚೀತಾವನ್ನು ತಂದಿದ್ದರಿಂದ ಭಾರತದಲ್ಲಿ ಲಂಪಿ ವೈರಸ್ ಹರಡುತ್ತಿದೆ ಎಂದು ಸಂಶೋಧನೆ ಮಾಡಿದ ನಾನಾ ಪಾಟೋಲೆಗೆ ನೊಬೆಲ್ ಪ್ರಶಸ್ತಿ(Nobel Award) ನೀಡಬೇಕೆಂದು ವ್ಯಂಗ್ಯವಾಡಿದ್ದಾರೆ.
ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ತರಲಾಗಿತ್ತು. ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಲಂಪಿ ವೈರಸ್ ಭಾರತದಲ್ಲಿ ಪತ್ತೆಯಾಗಿತ್ತು.