– ನಾಟಿಕೋಳಿ ಅಣ್ಣ ತಮ್ಮ ಎಂದು ಕೂಗಿದ ಬಿಜೆಪಿ ಶಾಸಕರು
ಬೆಂಗಳೂರು/ಬೆಳಗಾವಿ: ವಿಧಾನಸಭೆಯಲ್ಲಿ (Legislative Assembly) ಇಂದು ಕಾಂಗ್ರೆಸ್ (Congress) ನಾಯಕತ್ವ ಗೊಂದಲವನ್ನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಅಸ್ತ್ರವನ್ನಾಗಿ ಬಳಸಿಕೊಂಡು ಕುಟುಕಿದರು. ಹಾದಿ ಬೀದಿಯಲ್ಲಿ ಸಿಎಂ ಚರ್ಚೆ ನಡೆಯುತ್ತಿದೆ. ನಾನು ಸಿಎಂ, ನಾನು ಸಿಎಂ ಅಂತ ಹತ್ತಾರು ಜನ ಮಾತನಾಡುತ್ತಿದ್ದಾರೆ. ಇದು ರಾಜ್ಯಕ್ಕೆ ಶೋಭೆ ತರಲ್ಲ, ಒಂದು ತೀರ್ಮಾನಕ್ಕೆ ಬನ್ನಿ. ಅಧಿಕಾರಿಗಳು ನಿಮ್ಮ ಗೊಂದಲದಲ್ಲಿ ಕೆಲಸ ಮಾಡಲ್ಲ, ಅವರಿಗೆ ಜಾಲಿ ಆಗಿ ಹೋಗಿದೆ. ಸಿಎಂ ತಾವು ಬಿಡಲ್ಲ ಅಂತಾರೆ, ಡಿಸಿಎಂ ಅವರು ಕೊಟ್ಟ ಮಾತು ನಡೆಸಿಕೊಡಿ ಅಂತಾರೆ. ಗೋವು ಯಾರು, ಹುಲಿ ಯಾರು ಇಲ್ಲಿ ಎಂದು ಆರ್.ಅಶೋಕ್ ವ್ಯಂಗ್ಯದ ಮೂಲಕ ಚಾಟಿ ಬೀಸಿದರು.
ಡಿಕೆಶಿ ಅವರನ್ನು ಹಿಂದೆ ಮಂತ್ರಿ ಮಾಡಲಿಲ್ಲ, ಅವರು ಒದ್ದು ಕಿತ್ತಕೊಂಡರು. ಜೀವಮಾನ ಎಲ್ಲ ಅವರಿಗೆ ಒದ್ದು ಕಿತ್ಕೊಳ್ಳೊದೇ ಆಗಿದೆ. ಸಿಎಂ ಗೊಂದಲ ಬೇಗ ತೀರ್ಮಾನ ಮಾಡಿಕೊಳ್ಳಿ ಎಂದು ಅಶೋಕ್ ಆಗ್ರಹಿಸಿದರು. ಇದಕ್ಕೂ ಮುನ್ನ ನಾಟಿಕೋಳಿ ವಿಚಾರ ಎತ್ತಿ ಕೆಣಕಿದ ಅಶೋಕ್, ಸಿಎಂ ನನಗೆ ನಾಟಿಕೋಳಿ ತಿನ್ನು ಅಂದ್ರು. ಇಲ್ಲ ಸರ್ ಬಿಟ್ ಬಿಟ್ಟಿದೀನಿ ಅಂದೆ. ಆದ್ರೆ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ ಎದ್ದಿದೆ, ಡಿಕೆಶಿ ಸಿಎಂ ಅಂತ ಟ್ವೀಟ್ ಮಾಡುತ್ತಾರೆ. ನಾಯಕತ್ವದ ಬಗ್ಗೆ ನಾವು ಪ್ರಶ್ನೆ ಮಾಡುತ್ತಿಲ್ಲ, ಕಾಂಗ್ರೆಸ್‌ನವರೇ ಪ್ರಶ್ನೆ ಮಾಡುತ್ತಿದ್ದಾರೆ. ಕಿಂಗ್ ಇಸ್ ಅಲೈವ್ ಅಂತ ಬೈರತಿ ಸುರೇಶ್ ಹೇಳುತ್ತಾರೆ ಎಂದು ಅಶೋಕ್ ಕುಟುಕಿದರು. ಇದನ್ನೂ ಓದಿ:ಕುದುರೆಮುಖ ಅರಣ್ಯದಿಂದ ಕುಟುಂಬಗಳ ಸ್ಥಳಾಂತರ: ಈಶ್ವರ್ ಖಂಡ್ರೆ
ಆಗ ಅಶೋಕ್ ಟೀಕೆಗೆ ಬೈರತಿ ಸುರೇಶ್ ಸ್ಪಷ್ಟನೆ ಕೊಟ್ಟು, ಮಾಧ್ಯಮದವರು ನಿನ್ನೆ ಕೇಳಿದಾಗ ಹೇಳಿದ್ದೆ, ಗಟ್ಟಿಮುಟ್ಟಾಗಿದ್ದಾರೆ, ಅವರು ತೀರ್ಮಾನ ಮಾಡ್ತಾರೆ, ಕಿಂಗ್ ಇಸ್ ಅಲೈವ್, ನಮ್ಮ ಸಿಎಂ, ನಮ್ಮ ಹೈಕಮಾಂಡ್, ಖರ್ಗೆಯವರು ತೀರ್ಮಾನ ಮಾಡುತ್ತಾರೆ ಅಂದಿದ್ದೆ. ಇದನ್ನ ವ್ಯಂಗ್ಯ ಮಾಡ್ತೀರಾ? ರೀ ನಿಮ್ದು ನೋಡ್ರಿ, ನಾನು ಕಾಂಗ್ರೆಸ್‌ಗೆ ನಿಯತ್ತಿರೋನು, ನಿಮ್ಮ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣ ನೋಡಿ, ನಮ್ಮದು ಬಿಡಿ, ದಾರಿ ತಪ್ಪಿಸಬೇಡಿ ಎಂದು ಬೈರತಿ ಸುರೇಶ್ ತಿರುಗೇಟು ನೀಡಿದರು. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್
ಈ ವೇಳೆ ನಾಟಿ ಕೋಳಿ, ಅಣ್ಣತಮ್ಮ ಅಂತ ಬಿಜೆಪಿ ಸದಸ್ಯರು ಕೂಗಿ ವ್ಯಂಗ್ಯವಾಡಿದರು. ಆಗ ಬಿಜೆಪಿ ಸದಸ್ಯರಿಗೆ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿ, ನಿಮ್ಮಲ್ಲಿ ಐದು ಸಿಎಂ ಮಾಡಿದ್ರಿ, ನಮಗೆ ಪಾಠ ಹೇಳೋಕ್ಕೆ ಬರ್ತೀರಾ ಅಂತಾ ಕಿಡಿಕಾರಿದರು. ಆಗ ಮತ್ತೆ ಸದನದಲ್ಲಿ ಕುರ್ಚಿ ಗದ್ದಲ, ಪರಸ್ಪರ ವಾಕ್ಸಮರ ಜೋರಾಯಿತು. ಇನ್ನು ಸದನದಲ್ಲಿ ನಾಯಕತ್ವ ಗೊಂದಲ, ಸಿಎಂ ಸ್ಥಾನ ಕಿತ್ತಾಟ ಬಗ್ಗೆ ಅಷ್ಟೆಲ್ಲ ಗದ್ದಲ ನಡೆಯುತ್ತಿದ್ದರೂ ಸಿಎಂ ಸೈಲೆಂಟ್ ಆಗಿದ್ದು ವಿಶೇಷ ಆಗಿತ್ತು. ಇದನ್ನೂ ಓದಿ: ಇಲ್ಲಿ ಅಧಿವೇಶನ ಇದ್ದಾಗಲೆಲ್ಲ ರಾಹುಲ್ ವಿದೇಶದಲ್ಲೇ ಹೆಚ್ಚಿರ್ತಾರೆ: ಜೋಶಿ ಟೀಕೆ


