ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮುತ್ತಿಗೆಗೆ ಯತ್ನಿಸಿದ ನಾಯಕರನ್ನ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದರು.
ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರುಗಳು ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಮಾತನಾಡಿದರೆ ಪೊಲೀಸರ ಮೂಲಕ ದೇಶ ದ್ರೋಹದ ಕೇಸು ದಾಖಲಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿದ್ದಾರೆ.
Advertisement
' @BJP4Karnataka ಸರ್ಕಾರದಿಂದ ಪೊಲೀಸ್ ಇಲಾಖೆಯ ದುರ್ಬಳಕೆ ವಿರೋಧಿಸಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ.
ಕೆಪಿಸಿಸಿ ಅಧ್ಯಕ್ಷರಾದ @dineshgrao, @DKSureshINC, @HariprasadBK2, @Sowmyareddyr, @ArshadRizwan @vsugrappa ಸೇರಿ
ಹಲವು ಮುಖಂಡರು, ಸಹಸ್ರಾರು ಕಾರ್ಯಕರ್ತರು ಭಾಗಿ.#VenganceBJPvsUnitedIndia pic.twitter.com/jr4JS1KxA4
— Karnataka Congress (@INCKarnataka) February 15, 2020
Advertisement
ಮೌರ್ಯ ಸರ್ಕಲ್ ನಿಂದ ಹೊರಟ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಹೊರಟಾಗ ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್ ರ್ಯಾಲಿಯನ್ನ ಪೊಲೀಸರು ತಡೆದರು. ಬ್ಯಾರಿಕೇಡ್ ದಾಟಿ ಮುನ್ನುಗ್ಗಲು ಯತ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸೇರಿದಂತೆ ನೂರಾರು ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸರು ಬಸ್ಸಿನಲ್ಲಿ ಕರೆದೊಯ್ದು ಹಲಸೂರಿನ ಪರೇಡ್ ಗ್ರೌಂಡ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
Advertisement
' @BJP4Karnataka ಸರ್ಕಾರದಿಂದ ಪೊಲೀಸ್ ಇಲಾಖೆಯ ದುರ್ಬಳಕೆ ವಿರೋಧಿಸಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ,
ಕೆಪಿಸಿಸಿ ಅಧ್ಯಕ್ಷರಾದ @dineshgrao, ವಿಪಕ್ಷ ನಾಯಕರಾದ @siddaramaiah, ಸಂಸದರಾದ @DKSureshINC, ಶಾಸಕರಾದ @ArshadRizwan ಸೇರಿ ಹಲವರನ್ನು ಬಂಧಿಸಲಾಯಿತು.#VenganceBJPvsUnitedIndia pic.twitter.com/SnQzC9tpl5
— Karnataka Congress (@INCKarnataka) February 15, 2020