ಸಂತೋಷ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಕಾಂಗ್ರೆಸ್‌ ನಾಯಕರ ಸಾಂತ್ವನ

Public TV
1 Min Read
santosh patil congress

ಬೆಳಗಾವಿ: ನಗರದ ಸಮರ್ಥ ಕಾಲೋನಿಯಲ್ಲಿರುವ ಮೃತ ಸಂತೋಷ್ ಪಾಟೀಲ್‌‌ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

santosh patil congress leaders

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ,‌ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ‌ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ‌, ಸಲೀಂ ಅಹ್ಮದ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಸಂತೋಷ ಪಾಟೀಲ್ ಪತ್ನಿ ಜಯಶ್ರೀ ಹಾಗೂ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

ಈ ವೇಳೆ ಕಾಂಗ್ರೆಸ್ ನಾಯಕರ ಮುಂದೆ ಸಂತೋಷ್‌ ಕುಟುಂಬಸ್ಥರು ಕಣ್ಣೀರು ಹಾಕಿದ್ದಲ್ಲದೇ, 40 ಪರ್ಸೆಂಟ್‌ ಕಮಿಷನ್ ವಿಚಾರವಾಗಿ ನೋವು ತೋಡಿಕೊಂಡರು. 40ಪರ್ಸೆಂಟ್‌ ಕಮಿಷನ್‌ ಕೊಡದೇ ಇದ್ದರೆ ಯಾರ ಕಡೆಯಿಂದ ಬಿಲ್ ಮಾಡಿಸಿಕೊಳ್ಳುತ್ತೀಯಾ ಮಾಡಿಸಿಕೋ ಅಂತಾ ಸಂತೋಷನಿಗೆ ಹೇಳುತ್ತಿದ್ದರು ಎಂದು ಸಂತೋಷ್‌ ಪತ್ನಿ, ಈಶ್ವರಪ್ಪ ವಿರುದ್ಧ ದೂರಿದರು.

santosh patil

ಈ ವೇಳೆ ಈಶ್ವರಪ್ಪ ಹತ್ತಿರ ಕರೆದುಕೊಂಡು ಹೋಗಿದ್ದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಕರೆದುಕೊಂಡ ಹೋಗಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಡಿಕೆಶಿ, ನೋಡಮ್ಮ ನಿನಗೆ ನ್ಯಾಯ ಕೊಡಿಸೋಕೆ ಬಂದಿದ್ದೇವೆ. ನೀನು ಧೈರ್ಯದಿಂದ ಇರು ಎಂದು ಸಮಾಧಾನಪಡಿಸಿದರು. ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡ್ಕೋಳ್ಳೋದಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡ್ಕೋಬೇಕಿತ್ತು: ಸೋಮಲಿಂಗ ಸ್ವಾಮೀಜಿ

Share This Article