ಬೆಳಗಾವಿ: ಕಾಂಗ್ರೆಸ್ಸಿಗರು ತಮ್ಮ ಪಕ್ಷವನ್ನು ವಿಸರ್ಜಿಸಿ ಮುಸ್ಲಿಂ ಲೀಗ್ ಪಕ್ಷವನ್ನು ಸೇರಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೇರಳ ವಯನಾಡಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದಾರೆ. ಈ ಮೂಲಕ ಒಂದು ಕೋಮು, ಒಂದು ಧರ್ಮದ ಓಲೈಕೆಯನ್ನು ಮಾಡಿದ್ದಾರೆ. ಕಾಂಗ್ರೆಸ್ ಯಾವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಜನ ಗಮನಿಸಿದ್ದಾರೆ. ವಯನಾಡಿನ ಮೆರವಣಿಗೆ ಇದನ್ನೂ ಸಾಬೀತು ಮಾಡಿದೆ ಎಂದರು.
Advertisement
Advertisement
ಹಲವಾರು ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡುತ್ತೇನೆ. ನಾನೊಬ್ಬ ಐಕಾನ್, ಹೀರೋ ಅಂತ ಸಚಿವ ಡಿ.ಕೆ.ಶಿವಕುಮಾರ್ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ದಕ್ಷಿಣ ಕರ್ನಾಟಕದಲ್ಲಿ ನಾನೊಬ್ಬ ಪ್ರಭಾವಿ ಅಂತ ತೋರಿಸಿಕೊಂಡಿದ್ದಾರೆ. ಆದರೆ ಅವರು ಗಿಮಿಕ್ ಎಲ್ಲಿಯೂ ವರ್ಕೌಟ್ ಆಗಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಷ್ಟೇ ಅಲ್ಲ, ಮೈಸೂರು, ಬೆಂಗಳೂರು ಎಲ್ಲಿಯೂ ನಡೆಯಲ್ಲ ಎಂದು ತಿರುಗೇಟು ಕೊಟ್ಟರು.
Advertisement
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಭಾರೀ ಅಂತರದಿಂದ ಗೆಲುವು ಸಾಧಿಸುತ್ತಾರೆ. ಅವರ ವಿರುದ್ಧ ಯಾವುದೇ ನಾಯಕ ಹೋದರು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಸಾಧ್ಯವಾಗುವುದಿಲ್ಲ. ದುಡ್ಡಿನ ಬಲ, ಅಧಿಕಾರದ ಬಲ, ಹೆಂಡದ ಬಲದಿಂದ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬಹುದೆಂಬ ಭ್ರಮೆಯಲ್ಲಿದ್ದಾರೆ. ಈ ಭ್ರಮೆ ಶಿವಮೊಗ್ಗದಲ್ಲಿ ನಡೆಯುವದಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಪ್ರಧಾನಿ ಮೋದಿ ಸರ್ವಾಧಿಕಾರಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಅವರು, ಸರ್ವಾಧಿಕಾರಿ ಆಡಳಿತ ನಡೆಸಿದವರು ಸಿದ್ದರಾಮಯ್ಯ. ಅವರು ಟಿಪ್ಪು ಜಯಂತಿ ಮಾಡಿ ರಾಜ್ಯದಲ್ಲಿ ಅಶಾಂತಿಗೆ ಕಾರಣವಾದರು. ವೀರಶೈವ ಲಿಂಗಾಯತ ಧರ್ಮ ಒಡೆಯಬೇಕು, ವೋಟ್ ರಾಜಕಾರಣ ಮಾಡಬೇಕೆಂಬ ಷಡ್ಯಂತ್ರ ಮಾಡಿದ್ದರು. ರಾಜ್ಯವನ್ನು ಇಬ್ಭಾಗ ಮಾಡಲು ಹೊರಟಿದ್ದರು. ಕಾಂಗ್ರೆಸ್ ಕಾರ್ಯಕರ್ತರೇ ಸಿದ್ದರಾಮಯ್ಯ ಅವರು ಸರ್ವಾಧಿಕಾರಿ ಅಂತ ಹೇಳಿದ್ದಾರೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರನ್ನು ಕೇಳಿದರೆ ಸರ್ವಾಧಿಕಾರಿ ಯಾರು ಎಂದು ಸರಿಯಾಗಿ ಹೇಳುತ್ತಾರೆ ಎಂದು ಅಕ್ರೋಶ ಹೊರ ಹಾಕಿದರು.
ಸೈನ್ಯಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡಿದೆ. ನಮ್ಮ ಸರ್ಕಾರ ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ಫೆನ್ಸಿಂಗ್ ಅಳವಡಿಸಿದೆ. ಈ ಮೂಲಕ ಅಕ್ರಮ ಬಾಂಗ್ಲಾ ವಲಸಿಗರ ತಡೆಯುವಲ್ಲಿ ಯಶಸ್ವಿಯಾಗಿದೆ. ಮುಂಬೈ ದಾಳಿಗೆ ಪ್ರತ್ಯುತ್ತರ ನೀಡುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ. ಪುಲ್ವಾಮಾ ದಾಳಿ ನಂತರ ಉಗ್ರರಿಗೆ ತಕ್ಕ ಪಾಠ ಕಲಿಸಲಾಗಿದೆ. ಈ ಮೂಲಕ ಭಾರತ ಬದಲಾಗಿ ಎಂದು ಪ್ರಧಾನಿ ನರೇಂದ್ರ ತೋರಿಸಿದ್ದಾರೆ ಎಂದರು.
ಅಭಿವೃದ್ಧಿ ಹೆಸರಲ್ಲಿ ಮತ ಕೇಳುವ ತಾಕತ್ತು ಮಹಾಮೈತ್ರಿಗೆ ಇಲ್ಲ. 60 ವರ್ಷ ಆಡಳಿತ ನಡೆಸಿದ ಪಕ್ಷಕ್ಕೆ ಅಭಿವೃದ್ಧಿ ಹೆಸರಲ್ಲಿ ಗೆಲ್ಲುವ ಶಕ್ತಿಯಿಲ್ಲ ಎಂದು ಹೇಳಿದರು.