ರಾಮನಗರ: ಒಂದು ಕಡೆ ಸದನದಲ್ಲಿ ವಿಶ್ವಾಸ ಮತಯಾಚನೆ ಬಗ್ಗೆ ವಾದ ಪ್ರತಿವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರು ತಮ್ಮ ರೆಸಾರ್ಟ್ ವಾಸ್ತವ್ಯವನ್ನು ಬದಲಾವಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಿಂದ ಈಗಲ್ ಟನ್ ರೆಸಾರ್ಟಿಗೆ ಕಾಂಗ್ರೆಸ್ ನಾಯಕರು ಶಿಫ್ಟ್ ಆಗುವ ಸಾಧ್ಯತೆಯಿದೆ. ಕೈ ಶಾಸಕರು ಇಲ್ಲಿವರೆಗೂ ದೇವನಹಳ್ಳಿ ಸಮೀಪದಲ್ಲಿನ ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಲ್ಲಿದ್ದರು. ಇದೀಗ ರಾಮನಗರ ತಾಲೂಕಿನ ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
ಕೆಪಿಸಿಸಿ ವತಿಯಿಂದ ಈಗಾಗಲೇ ಈಗಲ್ ಟನ್ ರೆಸಾರ್ಟಿನಲ್ಲಿ 14 ರೂಮ್‍ಗಳನ್ನು ವೇಯ್ಟಿಂಗ್ ಲೀಸ್ಟ್ ನಲ್ಲಿ ಇಡಲಾಗಿದೆ. ಇಂದು ಸಂಜೆ ವೇಳೆಗೆ ಕಾಂಗ್ರೆಸ್ಸಿನ ಕೆಲ ಶಾಸಕರು ಈಗಲ್ ಟನ್ ರೆಸಾರ್ಟಿಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ 14 ರೂಂಗಳು ಮಾತ್ರವೇ ಈಗಲ್ ಟನ್ ರೆಸಾರ್ಟಿನಲ್ಲಿ ಖಾಲಿ ಇವೆ. ಹೀಗಾಗಿ ರೆಸಾರ್ಟಿನಲ್ಲಿ ಖಾಲಿಯಿರುವ ರೂಮ್‍ಗಳನ್ನು ಬುಕ್ ಮಾಡಲಾಗಿದೆ. ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಲ್ಲಿ ಕಾಂಗ್ರೆಸ್ ನಾಯಕರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಈಗಲ್ ಟನ್ ರೆಸಾರ್ಟಿನಲ್ಲಿ ಭದ್ರತೆ ಇರುತ್ತದೆ ಎನ್ನುವ ಕಾರಣಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.