ಬೆಂಗಳೂರು: ಎಲೆಕ್ಷನ್ ವರ್ಷದಲ್ಲಿ ಬಿಜೆಪಿ ಹಿಂದುತ್ವ ರಾಜಕೀಯ ಶುರು ಮಾಡಿರುವ ಮಧ್ಯೆಯೇ ರಾಜ್ಯದಲ್ಲಿ ದಿನಕ್ಕೊಂದು ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಧರ್ಮ ಸೂಕ್ಷ್ಮ ವಿಚಾರಗಳಿಗೆ ಕೌಂಟರ್ ಕೊಡಲು ಕಾಂಗ್ರೆಸ್ ಸಿದ್ಧವಾಗುತ್ತಿದೆ. ಕಾಂಗ್ರೆಸ್ ಇದೀಗ ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ಮುಲಾಜಿಲ್ಲದೇ ಖಂಡಿಸಲು ಮುಂದಾಗಿದೆ.
Advertisement
ಯಾವ ಹೇಳಿಕೆ ಕೊಟ್ರೂ ಕಷ್ಟ. ಕೊಡದಿದ್ರೂ ಕಷ್ಟ ಎಂಬ ಜಿಜ್ಞಾಸೆಯಲ್ಲಿ ಕೈ ನಾಯಕರು ಒದ್ದಾಡಿಹೋಗಿದ್ರು. ಇದಕ್ಕೆಲ್ಲಾ ಫುಲ್‍ಸ್ಟಾಪ್ ಇಡಲು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಮುಂದಾಗಿದ್ದಾರೆ. ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ಮುಲಾಜಿಲ್ಲದೇ ಖಂಡಿಸಿ, ಪಕ್ಷದ ಜಾತ್ಯತೀತ ಸಿದ್ಧಾಂತಕ್ಕೆ ಕಟಿಬದ್ಧರಾಗಿ ನಡೆಯಿರಿ. ಪಕ್ಷದ ಸಿದ್ಧಾಂತದಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ ಎಂದು ಖಡಕ್ಕಾಗಿ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕುರಿ, ಕೋಳಿ ಪ್ರಜ್ಞೆ ತಪ್ಪಿಸುವುದು ಹೇಗೆ: ಸ್ಟನ್ನಿಂಗ್ ನಿಯಮಕ್ಕೆ ಡಿಕೆಶಿ ಕಿಡಿ
Advertisement
Advertisement
ರಾಹುಲ್ ಗಾಂಧಿ ಸೂಚನೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜಕೀಯದ ಉದ್ದೇಶದಿಂದ ಸಮಾಜದಲ್ಲಿ ಅಶಾಂತಿ ಮೂಡಿಸಲು ಒಂದು ಸಮುದಾಯದ ಮೇಲೆ ಪ್ರಹಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಸಂವಿಧಾನಬದ್ಧವಾಗಿ ಸಿಎಂ ಆಗಿದ್ದೀರಾ. ಕೂಡಲೇ ಇದನ್ನೆಲ್ಲಾ ನಿಲ್ಲಿಸಿ. ನಿಮ್ಮ ಕೈಮುಗಿದು ಕೇಳ್ತೀನಿ. ಈ ಬಗ್ಗೆ ಕ್ರಮ ಕೈಗೊಳ್ಳಿ. ನಿಮ್ಮ ಪಕ್ಷದ ಹೆಸರು ಹೇಳಿಕೊಂಡು ಇದನ್ನೆಲ್ಲಾ ಮಾಡುತ್ತಿರುವವರಿಗೆ ಬ್ರೇಕ್ ಹಾಕಿ. ಕೂಡಲೇ ಉತ್ತರ ಕೊಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ದುರಹಂಕಾರ, ಎಎಪಿಗೆ ಒಂದು ಚಾನ್ಸ್ ಕೊಡಿ: ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ
Advertisement