ಬೆಂಗಳೂರು: ರಾಜ್ಯಪಾಲರು (Karnataka Governor) ತಮ್ಮ ಮುಂದಿರುವ ಇತರೆ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ (Congress) ನಾಯಕರು ಶನಿವಾರ ‘ರಾಜಭವನ ಚಲೋ’ (Rajbhavan Chalo) ನಡೆಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಕೈ ನಾಯಕರ ಪಾದಯಾತ್ರೆ ನಡೆಸಿದರು. ಈ ಹಿನ್ನೆಲೆಯಲ್ಲಿ ರಾಜಭವನದ ಸುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಭವನದ ಎದುರು ಬ್ಯಾರಿಕೇಡ್ ಹಾಕಿ ಭದ್ರತೆ ಮಾಡಲಾಗಿತ್ತು. ಸಿಎಂ, ಡಿಸಿಎಂ, ಶಾಸಕರಿಗಷ್ಟೇ ರಾಜಭವನ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್ ಖರ್ಗೆ
Advertisement
Advertisement
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗ ರಾಜಭವನಕ್ಕೆ ತೆರಳಿತು. ಪ್ರಾಸಿಕ್ಯೂಷನ್ ಅನುಮತಿ ಕೇಳಿ ಬಾಕಿ ಇರುವ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಡಿಸಿಎಂ ಮುರುಗೇಶ್ ನಿರಾಣಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಜನಾರ್ದನ ರೆಡ್ಡಿ ಪ್ರಕರಣಗಳ ಅರ್ಜಿಗಳನ್ನ ಇತ್ಯರ್ಥ ಮಾಡುವಂತೆ ಮನವಿ ಸಲ್ಲಿಸಿತು.
Advertisement
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯ ಅವರ ವಿಚಾರವಾಗಿ ರಾಜ್ಯಪಾಲರನ್ನ ಭೇಟಿ ಮಾಡಿಲ್ಲ. ಹೈಕೋರ್ಟ್‌ನಲ್ಲಿ ಪ್ರಕರಣ ಇದೆ. ಹೈಕೋರ್ಟ್ ತೀರ್ಮಾನ ಮಾಡುತ್ತೆ. ನಾವು ಒಬ್ಬ ಮಾಜಿ ಸಿಎಂ, ಮೂವರು ಮಾಜಿ ಸಚಿವರ ಪ್ರಕರಣಗಳ ಪ್ರಾಸಿಕ್ಯೂಶನ್ ಅನುಮತಿ ಅರ್ಜಿ ಬಾಕಿ ಇದೆ. ಅವುಗಳ ಇತ್ಯರ್ಥಕ್ಕೆ ಮನವಿ ಮಾಡಲು ಬಂದಿದ್ವಿ, ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಚಿವರ ಜೊತೆ ಕಂಪನಿಯ ನಿಯೋಗದ ಭೇಟಿ; ವಿಜಯಪುರ ಜಿಲ್ಲೆಯಲ್ಲಿ ಕೆನಡಾದ ವಿಟೆರಾದಿಂದ 250 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್
Advertisement
ರಾಜ್ಯಪಾಲರು ನಮ್ಮ ಮನವಿ ಸ್ವೀಕಾರ ಮಾಡಿದ್ದಾರೆ. ಆ ಅರ್ಜಿಗಳು ನಮ್ಮ ಬಳಿ ಇಲ್ಲ, ಇತ್ಯರ್ಥ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇಂಟರ್ನಲ್ ಹೇಳಿರೋದನ್ನೆಲ್ಲ ಹೇಳಲು ಆಗಲ್ಲ ಎಂದು ಸ್ಪಷ್ಟಪಡಿಸಿದರು.
ನಾಲ್ಕು ಜನ ಮಾಜಿ ಸಚಿವರ ಮೇಲೆ ಜಾರ್ಜ್ಶೀಟ್‌ಗೆ ಅನುಮತಿ ಕೇಳಿದ್ದಾರೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಗೆ ಅನುಮತಿ ಕೇಳಿದ್ದಾರೆ. ಸಿದ್ದರಾಮಯ್ಯ ಕೇಸಿನಲ್ಲಿ ಅರ್ಜಿ ಕೊಟ್ಟ ತಕ್ಷಣ ಶೋಕಾಸ್ ನೋಟಿಸ್ ಕೊಟ್ಟು ಅನುಮತಿ ಕೊಟ್ಟಿದ್ದಾರೆ. ಆದರೆ ಅದು ಇನ್ನೂ ತನಿಖೆ ಆಗಿಲ್ಲ. ಆದರೆ, ಉಳಿದ ಕೇಸಿನಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಾಗಿದೆ. ಗವರ್ನರ್ ಆಫೀಸ್ ರಾಜಕೀಯ ಕಚೇರಿ ಆಗಬಾರದು. ರಾಜ್ಯಪಾಲರ ಪೀಠ ನ್ಯಾಯಾಲಯದ ಪೀಠ ಇದ್ದ ಹಾಗೇ. 136 ಜನರನ್ನು ರಾಜ್ಯದ ಜನರು ಆಯ್ಕೆ ಮಾಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೇರೆ ಅರ್ಜಿ ನೋಡಿದ ಹಾಗೇ ಸಮಾನತೆಯಿಂದ ಈ ಅರ್ಜಿಗಳನ್ನು ನೋಡಿ ಎಂದಿದ್ದೇವೆ. ಕಾನೂನು ಉಳಿಸಲು ಮನವಿಯನ್ನು ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣದ ಅಭ್ಯರ್ಥಿ ನಾನೇ: ಡಿ.ಕೆ.ಶಿವಕುಮಾರ್
ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ಅವರಿಗೆ ಬೇರೆ ಆಯ್ಕೆ ಇಲ್ಲ. ಅವರು ನಮ್ಮ ಕಚೇರಿಯಲ್ಲಿ ಆ ಅರ್ಜಿಗಳು ಇಲ್ಲ, ಇತ್ಯರ್ಥ ಮಾಡಿದ್ದೀವಿ ಅಂದಿದ್ದಾರೆ. ಒಳಗೆ ಚರ್ಚೆಯಾಗಿದ್ದನ್ನೆಲ್ಲ ಹೇಳಲು ಸಾಧ್ಯವಿಲ್ಲ ಎಂದರು.